ಕೊಲೊಂಬೊ,ಮೇ 4: ಶ್ರೀಲಂಕಾದ ಹೊಟೇಲು ಮತ್ತು ಚರ್ಚ್ನಲ್ಲಿ ದಾಳಿ ನಡೆಸಿದವರು ತರಬೇತಿಗಾಗಿ ಕೇರಳ, ಕಾಶ್ಮೀರಕ್ಕೆ ಹೋಗಿದ್ದಾರೆ ಎಂದು ಶ್ರೀಲಂಕಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮಹೇಶ್ ಸೇನನಾಯಕ ಹೇಳಿದರು. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಅವರು ಹೀಗೆ ಹೇಳಿಕೆ ನೀಡಿದ್ದಾರೆ. ಶ್ರೀಲಂಕಾದಲ್ಲಿ ದಾಳಿ ನಡೆಸಿದವರು ಕೇರಳ ಮತ್ತು ಕಾಶ್ಮೀರಕ್ಕೆ ಹೋಗಿದ್ದರು. ಅವರ ಹೋದ ಯಥಾರ್ಥವಾದ ಕಾರಣವಿನ್ನೂ ಸ್ಪಷ್ಟವಾಗಿಲ್ಲ. ಆದರೆ ಕೆಲವು ಸಂಘಟನೆಗಳೊಂದಿಗೆ ಸೇರಿ ತರಬೇತಿ ಪಡೆಯುವುದು ಅವರ ಉದ್ದೇಶವಾಗಿತ್ತು ಎಂಬ ವರದಿಗಳಿಗೆ ಎಂದು ಸೇನಾ ಮುಖ್ಯಸ್ಥರು ಹೇಳಿದರು. ಒಂಬತ್ತು ಆತ್ಮಾಹುತಿ ಬಾಂಬರ್ಗಳು ಶ್ರೀಲಂಕಾದಲ್ಲಿ ದಾಳಿ ನಡೆಸಿದ್ದಾರೆ. ಶ್ರೀಲಂಕಾದ ದಾಳಿಯ ಹಿನ್ನೆಲೆಯಲ್ಲಿ ತಮಿಳ್ನಾಡು, ಕೇರಳಗಳಲ್ಲಿ ಎನ್ಐಎ ವ್ಯಾಪಕ ದಾಳಿ ನಡೆಸಿ ಹಲವರನ್ನು ಬಂಧಿಸಿದೆ.












