ಹುಟ್ಟಿನ ಆಧಾರದಲ್ಲಿ ಯಾರು ಶ್ರೇಷ್ಠರಲ್ಲ, ಯಾರು ಕನಿಷ್ಟರಲ್ಲ; ಮನುಷ್ಯನ ಕರ್ಮಗಳೇ ಶ್ರೇಷ್ಠತೆಯ ಮಾನದಂಡವಾಗಿದೆ: ರಿಯಾಝ್ ಅಹ್ಮದ್ ರೋಣ

0
310

ಸನ್ಮಾರ್ಗ ವಾರ್ತೆ

ಬೆಂಗಳೂರು: ‘ಹುಟ್ಟಿನ ಆಧಾರದಲ್ಲಿ ಯಾರು ಶ್ರೇಷ್ಠರಲ್ಲ ಮತ್ತು ಯಾರು ಕನಿಷ್ಟರಲ್ಲ ಬದಲಾಗಿ ಮನುಷ್ಯನ ಕರ್ಮಗಳೇ ಶ್ರೇಷ್ಠತೆಯ ಮಾನದಂಡವಾಗಿದೆ’ ಎಂದು ರಿಯಾಝ್ ಅಹ್ಮದ್ ರೋಣ ಜತೆ ಕಾರ್ಯದರ್ಶಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಹೇಳಿದರು.

ಅವರು ಇತ್ತೀಚಿಗೆ ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ರೋಡ್ ವತಿಯಿಂದ ಪೌರ ಕಾರ್ಮಿಕರಿಗಾಗಿ ಆಯೋಜಿಸಿದ್ದ ಸೀರತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

‘ಪ್ರವಾದಿ ಮುಹಮ್ಮದ್ (ಸ) ಮನುಷ್ಯರೆಲ್ಲರೂ ಸಮಾನರು ಹಾಗೂ ಪರಸ್ಪರ ಎಲ್ಲ ಮನುಷ್ಯರೊಂದಿಗೆ ಪ್ರೀತಿ ಸಹಬಾಳ್ವೆಯಿಂದ ಬದುಕಬೇಕು ಎಂಬ ಚಿಂತನೆಯನ್ನು ಕಲಿಸಿದರು. ಆದರೆ ಇಂದು ಜಗತ್ತು ಮನುಷ್ಯರನ್ನು ಜಾತಿ, ಧರ್ಮ, ಕುಲ, ಗೋತ್ರದ ಆಧಾರದಲ್ಲಿ ವಿಂಗಡಿಸುತ್ತಿರುವುದು ನಿಜಕ್ಕೂ ಬಹಳ ದೊಡ್ಡ ದುರಂತ ಎಂದವರು ಹೇಳಿದರು.

ಜಮಾಅತೆ ಇಸ್ಲಾಮೀ ಹಿಂದ್ ಬೆಂಗಳೂರು ನಗರ ಉಪ ಸಂಚಾಲಕ ಡಾ. ಸಯ್ಯದ್ ಫಕ್ರುದ್ದೀನ್ ಖಾಝಿ ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣ ಮಾಡಿದರು. ಜ.ಇ.ಹಿಂದ್ ಸ್ಥಾನೀಯ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಗುಡಿಹಾಳ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.