ಗಾಝಾ ಯುದ್ಧದಲ್ಲಿ ಪಾಲ್ಗೊಳ್ಳುವುದಾದರೆ ಪೌರತ್ವ: ಆಫ್ರಿಕಾದ ನಿರಾಶ್ರಿತರೊಂದಿಗೆ ಇಸ್ರೇಲ್

0
213

ಸನ್ಮಾರ್ಗ ವಾರ್ತೆ

ಗಾಝಾಕ್ಕೆ ಹೋಗಿ ಯುದ್ಧದಲ್ಲಿ ಪಾಲ್ಗೊಳ್ಳುವುದಾದರೆ ನಿಮಗೆ ಪೌರತ್ವ ನೀಡುತ್ತೇನೆ ಎಂದು ತನ್ನ ದೇಶದಲ್ಲಿರುವ ಆಫ್ರಿಕಾದ ನಿರಾಶ್ರಿತರಿಗೆ ಇಸ್ರೇಲ್ ಆಹ್ವಾನ ನೀಡಿದೆ.

ಇಸ್ರೇಲ್ ನಲ್ಲಿ ಸುಮಾರು 30000 ಆಫ್ರಿಕನ್ನರು ನಿರಾಶ್ರಿತರಾಗಿ ಇದ್ದಾರೆ ಎಂದು ವರದಿಯಾಗಿದೆ. ಇವರಲ್ಲಿ ಹೆಚ್ಚಿನವರು ಯುವ ಪ್ರಾಯದವರಾಗಿದ್ದಾರೆ.

ಗಾಝಾ ಯುದ್ಧದಲ್ಲಿ ಸಾಕಷ್ಟು ಸೈನಿಕರನ್ನು ಕಳಕೊಂಡಿರುವ ಇಸ್ರೇಲ್ ಇದೀಗ ತನ್ನ ಪ್ರಜೆಗಳಿಂದಲೂ ಭಾರಿ ವಿರೋಧವನ್ನ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆಫ್ರಿಕಾದವರನ್ನು ಗಾಝಾದ ಯುದ್ಧ ಮೈದಾನಕ್ಕೆ ನೂಕುವ ಶ್ರಮ ನಡೆಸುತ್ತಿದ್ದು ಇದನ್ನು ಅಲ್ಲಿನ ಪ್ರಮುಖ ಪತ್ರಿಕೆ ಹ್ಯಾರೇಟ್ಸ್ ಖಂಡಿಸಿದೆ.

ಆಫ್ರಿಕನ್ ರಾಷ್ಟ್ರಗಳಿಂದ ನಿರಾಶ್ರಿತರಾಗಿ ಬಂದವರನ್ನು ಇಸ್ರೇಲ್ ಅತ್ಯಂತ ಅವಮಾನಕರವಾಗಿ ನಡೆಸಿಕೊಳ್ಳುತ್ತಾ ಇದೆ ಎಂಬುದು ಇದರಿಂದ ವ್ಯಕ್ತವಾಗಿದೆ ಎಂದು ಪತ್ರಿಕೆ ಬರೆದಿದೆ.

ನ್ಯಾಯಾಲಯದ ಮಧ್ಯಪ್ರವೇಶದ ಬಳಿಕ ತಾತ್ಕಾಲಿಕ ಪೌರತ್ವವನ್ನು ಪಡೆದಿರುವ 3500 ಸುಡಾನಿ ಪೌರರು ಕೂಡ ಈ 30,000 ಮಂದಿಯಲ್ಲಿ ಒಳಗೊಂಡಿದ್ದಾರೆ. ದಶಕಗಳಿಂದ ಈ ಆಫ್ರಿಕನ್ ನಿರಾಶ್ರಿತರು ಪೌರತ್ವವನ್ನು ಬಯಸಿ ಇಸ್ರೇಲ್ ನಲ್ಲಿ ನೆಲೆಸಿದ್ದಾರೆ. ಈವರೆಗೆ ಅವರಿಗೆ ಪೌರತ್ವವನ್ನು ನೀಡಲಾಗಿರಲಿಲ್ಲ. ಇದೀಗ ದಿಢೀರನೆ ಅವರಿಗೆ ಪೌರತ್ವವನ್ನು ಕೊಡಲು ನಿರ್ಧರಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.