ಉತ್ತರ ಕೊರಿಯದಿಂದ ಪುನಃ ಹೃಸ್ವದೂರ ಮಿಸೈಲು ಪರೀಕ್ಷೆ

0
634

ಪೊಂಗ್ಯಾಂಗ್,ಮೇ 4: ದಕ್ಷಿಣ ಕೊರಿಯದ ನಡುವಿನ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಿರುವ ವೇಳೆಯೇ ಪುನಃ ಉತ್ತರ ಕೊರಿಯ ಹೃಸ್ವದೂರ ಮಿಸೈಲನ್ನು ಹಾರಿಸಿದೆ. ದಕ್ಷಿಣ ಕೊರಿಯ ಈ ವಿವರವನ್ನು ಬಹಿರಂಗಪಡಿಸಿದ್ದು ಶನಿವಾರ ಬೆಳಗ್ಗೆ ಒಂಬತ್ತು ಗಂಟೆಗೆ ಉತ್ತರ ಕೊರಿಯ ಮಿಸೈಲು ಹಾರಿಸಿತು. ಉತ್ತರ ಕೊರಿಯದ ಮಿಸೈಲ್ ಪರೀಕ್ಷೆಯ ನಂತರ ವಲಯದಲ್ಲಿ ತನ್ನ ಸೈನ್ಯಕ್ಕೆ ಕಟ್ಟೆಚ್ಚರ ವಹಿಸುವಂತೆ ದಕ್ಷಿಣ ಕೊರಿಯ ಸೂಚಿಸಿತು. ಪರಿಸ್ಥಿತಿಯ ಮೇಲೆ ಸೂಕ್ಷ್ಮ ನಿಗಾವಹಿಸಲಾಗಿದೆ ಎಂದು ಅಮೆರಿಕ ತಿಳಿಸಿದೆ. ಈ ಹಿಂದೆ ಮಿಸೈಲ್ ಪರೀಕ್ಷೆ ನಡೆಸಿದ್ದಕ್ಕಾಗಿ ಉತ್ತರ ಕೊರಿಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಮೆರಿಕ ಮತ್ತು ದಕ್ಷಿಣ ಕೊರಿಯ ತೀರ್ಮಾನಿಸಿತ್ತು. ಆದರೆ ನಂತರ ಚರ್ಚೆಗಳ ಮೂಲಕ ಸಮಸ್ಯೆ ಪರಿಹರಿಸಲು ಪ್ರಯತ್ನ ಆರಂಭಿಸಲಾಗಿತ್ತು.