”ತುಕುಡೆ ತುಕುಡೆ ಗ್ಯಾಂಗ್” ಎಂದು ಚಿತ್ರಿಸುವವರು, ಸಾದ್ವಿಯನ್ನು ಮರೆತರೇ?

0
1520

ತಲ್ಹಾ ಇಸ್ಮಾಯಿಲ್ ಬೆಂಗ್ರೆ

UAPA (Unlawful Activities privention ) ಆಕ್ಟ್ ಸೆಕ್ಷನ್ 16 ಅಂದರೆ (ಯಾರದಾದರೂ ಟೆರರಿಸ್ಟ್ ಆಕ್ಟ್ ಮಾಡಿದರೆ [ಅದರಿಂದಾಗಿ ಯಾರಾದರೂ ಮರಣ ಹೊಂದಿದರೆ ಮರಣ ದಂಡನೆ] ಅವರಿಗಿರುವ ಸಜೆ

ಸೆಕ್ಷನ್ 18 UAPA ಅಂದರೆ ಟೆರರಿಸ್ಟ್ ಆಕ್ಟ್’ಗಾಗಿ ಗೂಡಾಲೋಚನೆ ನಡೆಸಿದವರಿಗೆ ಸಜೆ

ಸೆಕ್ಷನ್ 120 (ಬಿ) IPC ಕ್ರಿಮಿನಲ್ ಪಿತೂರಿ

ಸೆಕ್ಷನ್ 302 IPC ಮರ್ಡರ್

ಸೆಕ್ಷನ್ 307 IPC ಅಟ್ಟೆಂಪ್ಟ್ ಟು ಮರ್ಡರ್

ಸೆಕ್ಷನ್ 153 IPC (ಎರಡು ಧಾರ್ಮಿಕ ಗುಂಪುಗಳ ಮಧ್ಯೆ ವೈರತ್ವವನ್ನು ಉಂಟುಮಾಡುವುದು )

ಇದು ಸೇರಿ ಇನ್ನು ಹಲವಾರು ಸೆಕ್ಷನ್’ಗಳನ್ನು ಹೊತ್ತ ಮಾಲೇಗಾವ್ನ್ ಮಸೀದಿ ಬಳಿ ಸ್ಫೋಟ’ ನಡಿಸಿದ ಆರೋಪಿ ಅಂದರೆ (29 ಸೆಪ್ಟೆಂಬರ್ 2008 ರಂದು ಮೋಟಾರ್ ಸೈಕಲ್ ಮೇಲೆ ಇದ್ದ ಸ್ಪೋಟಕ ಸಾಧನ ಸ್ಪೋಟಗೊಂಡು ಮಾಲೇಗಾವ್ನ್ ಮಸೀದಿಯಲ್ಲಿ ಸುಮಾರು 6 ಮಂದಿ’ಯ ದುರ್ಮರಣ ಹಾಗು 100 ಮಂದಿ ಭಾರತೀಯರು ಗಾಯಗೊಂಡ ಘಟನೆಯ ) ಪ್ರಮುಖ ಆರೋಪಿ ಸಾಧ್ವಿ ಪ್ರಜ್ಞಾ ಠಾಕೂರ್ ಎಂದರೆ ಇಂದು ಯಾರೂ ನಂಬಲಾರರು, ಹಾಗೆ ಯಾರಾದರೂ ಆಕೆಯನ್ನು ಭಯೋತ್ಪಾದನೆಯ ಆರೋಪಿ ಎಂದರೆ, ಕೆಲವರು ಆಕೆ ಒಬ್ಬ ದೇಶಭಕ್ತೆ, ಆಕೆ ಏನು ಮಾಡಿದರೂ ಅದು ದೇಶಕ್ಕಾಗಿಯೇ ಮಾಡಿರಬಹುದು, ಆದ್ದರಿಂದ ಆಕೆಯನ್ನು ಪ್ರಶ್ನಿಸುವುದು ಸರಿಯಲ್ಲ ಎಂದರೂ ಅಚ್ಚರಿ ಇಲ್ಲ. ಏಕೆಂದರೆ ಕೆಲವು ಮಾಧ್ಯಮಗಳು ಆಕೆಯನ್ನು ಒಬ್ಬ ಮಾಂತ್ರಿಕ ಶಕ್ತಿ ಹೊಂದಿರುವ ಮಹಿಳೆ ಎಂಬಂತೆ ಕಳೆದ ಹಲವಾರು ದಿನಗಳಿಂದ ನಿರಂತರ ಚಿತ್ರಿಸುತ್ತಾ ಬಂದಿದೆ.

ಒಂದು ಟಿವಿ ಸಂದರ್ಶನದಲ್ಲಿ ಆಕೆಯು ಗೋವು ಮೂತ್ರ ಕುಡಿದುದರಿಂದಾಗಿ ತನ್ನ ಬ್ರೆಸ್ಟ್ ಕ್ಯಾನ್ಸರ್ ಗುಣಮುಖವಾಗಿದೆ ಎಂದಾಗ, ಅದರ ಬಗ್ಗೆ ಬಹಳಷ್ಟು ಚರ್ಚೆಗಳು ಪ್ರಾರಂಭವಾದವು. ವೈದ್ಯರು ಇದು ವೈಜ್ಞಾನಿಕವಾಗಿ ಸಾಧ್ಯವಿಲ್ಲ ಎಂದು ತಮ್ಮ ಪುರಾವೆ’ಗಳನ್ನು ಮುಂದಿಡುತ್ತಿದ್ದಾರೆ. ಇದೊಂದು ಚರ್ಚಾ ವಿಷಯವಲ್ಲದಿದ್ದರೂ ಏನೋ ದೊಡ್ಡ ಚರ್ಚಾ ವಿಷಯದಂತೆ ಮಾಧ್ಯಮಗಳು ನಿರಂತರ ಆದೆ ಚರ್ಚೆಗಳು ನಡೆಯುತ್ತಿದೆ. ಇದೆಲ್ಲವೂ ಒಂದು ರೀತಿ ಪೂರ್ವನಿಯೋಜಿತ ಕಾರ್ಯಕ್ರಮದಂತೆ ಬಿಂಬಿತವಾಗುತ್ತದೆ. ಆಕೆಯು ಚುನಾವಣಾ ಸಂಧರ್ಭದಲ್ಲಿ ವೈದ್ಯಕೀಯ ಕಾರಣದಿಂದ ಜಾಮೀನು ಪಡೆದು ಹೊರಬಂದು ಆಡಳಿತ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದ ಆಕೆಯನ್ನು ಮಾಧ್ಯಮಗಳು ಚಿತ್ರಿಸಿದ ರೂಪವೇ ಬೇರೆ. ಇದೇ ಒಂದು ವೇಳೆ ಕಾಂಗ್ರೆಸ್, ಜೆಡಿಎಸ್, ಅಥವಾ ಇನ್ನಾವುದೇ ಪಕ್ಷವು ಯಾವನೇ ಒಬ್ಬ ಭಯೋತ್ಪಾದನೆ ಪ್ರಖರಣದ ವ್ಯಕ್ತಿಯನ್ನು ಕಣಕ್ಕಿಳಿಸುತ್ತಿದ್ದರೆ, ನಮ್ಮ ಮಾಧ್ಯಮಗಳು ಆತನನ್ನು ಯಾವರೀತಿ ಚಿತ್ರಿಸುತ್ತಿತ್ತು ಎನ್ನುವುದು ಊಹಿಸಲೂ ಸಾಧ್ಯವಿಲ್ಲ. ಅದಿರಲಿ JNU ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕಣ್ಣಯ್ಯ ಕುಮಾರ್ ಬೆಗುಸರೈ’ನಿಂದ ಚುನಾವಣೆ ಎದುರಿಸುತ್ತಿರುವ ಸಂದರ್ಭದಲ್ಲಿ ಆತನನ್ನು ಮಾಧ್ಯಮಗಳು ”ತುಕುಡೆ ತುಕುಡೆ” ಗ್ಯಾಂಗಿನ ಅಧ್ಯಕ್ಷ, ದೇಶದ್ರೋಹಿ, ಇನ್ನೂ ಏನೇನಲ್ಲ ಹೇಳಿ ಆತನ ಇಮೇಜ್ ಹಾಳುಮಾಡಲು ಶ್ರಮಿಸುತ್ತಿದೆ ಎಂದರೆ, ಆತ ಜನ ಸಾಮಾನ್ಯರ ಬಳಿ, ತಾನು ಒಬ್ಬ ಅಂಗನವಾಡಿ ಕಾರ್ಯಕರ್ತೆಯ ಮಗ, ತಾನು ಪ್ರದೇಶದ ಅಭಿವ್ರಿದ್ಧಿಗಾಗಿ ನಿರಂತರ ದುಡಿಯಬಲ್ಲ ಯುವಕ, ದೇಶದ ಅಭಿವ್ರಿದ್ಧಿಗಾಗಿ ತನ್ನ ಬಳಿ ಬಹಳಷ್ಟು ಯೋಜನೆಗಳಿವೆ, ದಯಮಾಡಿ ತನ್ನನ್ನು ಈ ಕ್ಷೇತ್ರದ ಪ್ರತಿನಿಧಿಯಾಗಿ ಆಯ್ಕೆ ಮಾಡಿ ಎಂದು ಬೇಡಿಕೊಂಡಾಗ, ಅಲ್ಲಿ ಸಾಮಾನ್ಯ ವ್ಯಕ್ತಿಯು ಕೊಡ ನೀನು ”ತುಕುಡೆ ತುಕುಡೆ” ಗ್ಯಾಂಗಿನ ಜನವಂತೆ, ದೇಶ ವಿರೋಧಿಯಂತೆ ಎಂದೆಲ್ಲ ಅವನನ್ನು ನಿರಂತರ ಪ್ರಶ್ನಿಸಿದ್ದು ಆಗಾಗ ವರದಿಯಾಗುತ್ತಿತ್ತು. ಅದೇ ಸಂಧರ್ಭದಲ್ಲಿ ಭಯೋತ್ಪಾದನೆ’ಯ ಆರೋಪ ಹೊತ್ತ ಸಾಧ್ವಿಯನ್ನು, ತನ್ನ ಮೇಲಿರುವ ಭಯೋತ್ಪಾದನಾ ಆರೋಪದ ಬಗ್ಗೆ ತಪ್ಪಿಯಾದರೂ ಪ್ರಶ್ನೆ ಕೇಳಿದೆಯೇ? ಆಕೆಯು ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಾಗ ಯಾವ ಮಾಧ್ಯಮದವರಾದರು ಆಕೆಯನ್ನು ತಾವು ಆ ಸ್ಪೋಟದಲ್ಲಿ ದುರ್ಮರಣ ಹೊಂದಿದ ಕುಟುಂಬಸ್ಥರನ್ನು ಭೇಟಿಮಾಡಿದ್ದಿರಾ? ಎಂದು ಕೇಳಿದ್ದಾರೆಯೇ? ಆರು ಮಂದಿ ಸಾವನ್ನಪ್ಪಿ, ಮತ್ತು ನೂರು ಮಂದಿ ಗಾಯಗೊಂಡಂತಹ ಇಡೀ ದೇಶವನ್ನೇ ಬೆಚ್ಚಿಬೀಳಿಸುವ ಘಟನೆ ಎನ್ನುವಾಗ, ಅದೊಂದು ಪ್ರಮುಖ ಘಟನೆ ಯಲ್ಲವೇ? ಒಂದುವೇಳೆ ಆ ಘಟನೆಯು ಪ್ರಮುಖ ಘಟನೆ ಎಂದಾದರೆ, ಈ ಚುನಾವಣೆಯಲ್ಲಿ ಆ ಘಟನೆಗೆ ಸಂಭಂದಿಸಿದ ಪ್ರಮುಖ ಆರೋಪಿ ಕಣಕ್ಕಿಳಿದಾಗ, ಆ ಘಟನೆ ಏಕೆ ಅಷ್ಟೊಂದು ಚರ್ಚೆಯಾಗಲ್ಲ? ಒಂದು ಫೇಕ್ ವಿಡಿಯೋದಲ್ಲಿ ಯಾರೋ ದೇಶ ವಿರೋಧಿ ಘೋಷಣೆ ಕೂಗಿದ್ದನ್ನು ಒಂದು ದೊಡ್ಡ ಘಟನೆಯಾಗಿ ಪರಿಗಣಿಸಿ ನಿರಂತರ ಪ್ರಸಾರ ಮಾಡುತ್ತಾ ಬಂದಿರುವ, ಮಾಧ್ಯಮಗಳೇಕೆ ಮಾಲೇಗಾವ್ನ್ ಮಸೀದಿ ಬ್ಲಾಸ್ಟ್’ನ ಪ್ರಖರಣದ ಆರೋಪಿಯೊಂದಿಗೆ ಅಷ್ಟೊಂದು ಪ್ರೀತಿ ತೋರಿಸುತ್ತಿದೆ?