ಚಾ ಕುಡಿಯಲು ಹೊಟೇಲಿಗೆ ಹೋದರೆ ಹಸನ್ ಒಂದು ಪ್ಲೇಟಿನಲ್ಲಿ ಎಲ್ಲ ತಿಂಡಿಗಳನ್ನು ತಂದು ಇಡುತ್ತಾರೆ. ನನಗೆ ಒಂದೇ ಸಾಕು ಎಂದರೆ ಅದರಲ್ಲಿ ನಿಮಗೆ ಬೇಕಾದ್ದನ್ನು ತೆಗೆದುಕೊಳ್ಳಿ ಎನ್ನುತ್ತಾರೆ. ಎಲ್ಲ ತಿಂಡಿಗಳು ಹೊರಗೆ ಬೇರೆ ಬೇರೆ ಆಗಿದ್ದರೂ ಹಲವು ತಿಂಡಿಗಳಿಗೆ ಒಂದೇ ರೇಟು ಇದೆ. ಆದ್ದರಿಂದ ಹಸನ್ ತಿಂಡಿಗಳ ರೂಪಕ್ಕಲ್ಲ ಸಂಖ್ಯೆಯತ್ತ ಗಮನ ಹರಿಸುತ್ತಾರೆ.
ಸಲಫಿ, ಸುನ್ನಿ, ತಬ್ಲೀಗ್ ಜಮಾಅತ್ ಆ ಪಾತ್ರೆಯ ತಿಂಡಿಗಳಂತಿರುವ ವೈವಿಧ್ಯಗಳಾಗಿವೆ. ಇಸ್ಲಾಮೊಫೋಬಿಯ ಎಂಬುದು ಒಟ್ಟು ಇಸ್ಲಾಮಿನ ಹೆಸರು ಆಗಿದೆ. ಅವರು ಇಸ್ಲಾಮಿನಲ್ಲಿಲ್ಲ ಎಂದು ಹೇಳಲಾದ ಅಹ್ಮದೀಯರು ಕೂಡ ಇಸ್ಲಾಮೊ ಫೋಬಿಯ ದಿಂದ ಬೇರೆಲಿಲ್ಲ. ಶ್ರೀಲಂಕಾ ಸ್ಫೋಟದ ಹಿಂದೆ ಮುಸ್ಲಿಮರಿದ್ದಾರೆ ಎನ್ನುವುದು ಇದುವರೆಗೆ ಸಿಕ್ಕಿದ ವಿವರವಾಗಿದೆ. ಮುಸ್ಲಿಮರು ಎಂದರೆ ಅವರ ಹೆಸರು ಮುಸ್ಲಿಮರದ್ದಾಗಿದೆ ಎಂದು ಅರ್ಥ. ಅಲ್ಲಿ ಒಬ್ಬ ಮುಸ್ಲಿಮನಿಂದಲೂ ಒಪ್ಪಲು ಸಾಧ್ಯವಿಲ್ಲದ ಕ್ರೌರ್ಯ ನಡೆದಿದೆ.
ಇದೇ ವೇಳೆ ಕೇರಳದ ಸಲಫಿ ಕಾರ್ಯಕರ್ತ ರನ್ನು ಬೆಟ್ಟು ಮಾಡಿ ತೋರಿಸಲು ಕೆಲವರು ಆಸಕ್ತರಾಗಿದ್ದಾರೆ. ಝಾಕಿರ್ ನಾಯ್ಕ್ರ ಸಹಾಯ ಅವರಿಗಿತ್ತು ಎಂದು ಹೇಳಲಾಗುತ್ತಿದೆ. ಝಾಕಿರ್ ನಾಯ್ಕ್ ಕೆಲವು ಕಾಲದಿಂದ ನಮ್ಮೂರಿನಲ್ಲಿಲ್ಲ. ಈ ಆರೋಪ ಹೊರಿಸುವವರು ತಮ್ಮ ಕೆಲವು ವಿಕೃತ ನಿಲುವುಗಳನ್ನು ಎತ್ತಿ ತೋರಿಸುತ್ತಿದ್ದಾರೆ. ಸಲಫಿಗಳು ಎನ್ನುವುದು ಭಯೋತ್ಪಾದನೆಯ ಹೆಸರಲ್ಲ. ಅದೊಂದು ಚಿಂತನಾ ಧಾರೆಯಾಗಿದೆ. ಆದರೆ ಅದನ್ನು ಭಯೋತ್ಪಾದನೆಯತ್ತ ಕೊಂಡು ಹೋದ ಜ ನರೇ ಉತ್ತರ ಹೇಳಬೇಕು. ಇಸ್ಲಾಮೀ ಚಿಂತನಾ ಧಾರೆಗಳಿಗೆ ಸಲಫಿಗಳ ಕೊಡುಗೆ ಬಹುದೊಡ್ಡದಾಗಿದೆ. ಇಸ್ಲಾಮನ್ನು ಒಂದು ಜೀವನ ಪದ್ಧತಿ ಎಂಬುದರಿಂದ ಬದಲಿಸಿ ಕೇವಲ ಧರ್ಮವೆನ್ನುವ ಸಂಕುಚಿತ ಚಿಂತನೆಯೆಡೆಗೆ ಸಾಗಿದ್ದು ಸಲಫಿಗಳ ಹೆಸರಿನಲ್ಲಿ ಸಂಘಟಿತರಾದ ಕೆಲವರ ದುರಂತವಾಗಿದೆ.
ಶ್ರೀಲಂಕಾದಲ್ಲಿ ಸ್ಫೋಟದ ಹಿಂದಿದ್ದಾನೆ ಎನ್ನ ಲಾದ ಹಾಶಿಮಿಯನ್ನು ಅಲ್ಲಿನ ವಿದ್ವಾಂಸರು ಮತ್ತು ಊರವರು ದೂರವಿಟ್ಟಿದ್ದರು. ಆದರೆ ಆತ ಸ್ವಯಂ ತಾನೇ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾನೆ. ಅವನು ಭಾರತಕ್ಕೆ ಹಲವು ಬಾರಿ ಬಂದಿದ್ದಾನೆಂದು ಹೇಳಲಾಗುತ್ತಿದೆ. ಆದರೆ ಭಾರತ ದಲ್ಲಿ ಯಾವ ಸಂಘಟನೆಯೂ ಅವನೊಂದಿಗೆ ಸಂಬಂಧ ಹೊಂದಿತ್ತೆಂದು ಹೇಳಲಾಗಿಲ್ಲ. ಇಸ್ಲಾಮ್ ಒಂದು ಭಾವನಾತ್ಮಕ ವೈಚಾರಿಕತೆಯಲ್ಲ. ಆದರೂ ಹಲವರು ಇಸ್ಲಾಮನ್ನು ಹೀಗೆ ಭಾವಿಸಿಕೊಂಡಿ ದ್ದಾರೆ. ಭೂಮಿಯಲ್ಲಿ ಜೀವಿಸುವ ಮನುಷ್ಯನ ಅಗತ್ಯವನ್ನು ಸೃಷ್ಟಿಕರ್ತನಾದ ದೇವನೇ ಅಂಗೀಕರಿಸಿ ದ್ದಾನೆ. ಭೂಮಿಯಲ್ಲಿ ಬದುಕುವ ಎಲ್ಲರ ಜೀವನವು ಪರಲೋಕದಲ್ಲಿ ಚರ್ಚೆಯಾಗಲಿದೆ. ಅಲ್ಲಿ ಯಾವ ರೀತಿಯ ಚರ್ಚೆಯು ನಡೆದರೆ ಉತ್ತಮ ಎನ್ನುವುದನ್ನು ಮನುಷ್ಯರೇ ತೀರ್ಮಾನಿಸ ಬೇಕಾಗುತ್ತದೆ. ಅದರ ಹೆಸರಿನಲ್ಲಿ ಯಾರನ್ನೂ ಮುಗಿಸಿಬಿಡಲು ಇಸ್ಲಾಂ ಏನಿದ್ದರೂ ಅನುಮತಿ ಸಿಲ್ಲ. ಇತ್ತೀಚೆಗೆ ಸಲಫಿ ಚಿಂತನೆಗಳು ಎಂಬ ಹೆಸರಿನಲ್ಲಿ ಹಲವು ವೈವಿಧ್ಯಗಳನ್ನು ನಾವು ಕಂಡಿದ್ದೇವೆ. ಧರ್ಮದೊಂದಿಗೆ ಅವುಗಳಿಗೆ ಸಂಬಂಧವಿಲ್ಲ ಎಂದು ಅರಿವಿರುವವರು ಗಟ್ಟಿ ಯಾಗಿ ಹೇಳಿದ್ದಾರೆ. ಸಲಫಿಗಳೆಂದರೆ ಸಚ್ಚರಿತರಾದ ಸಹಾಬಿಗಳು ಎಂಬುದು ಸರಿಯಾದ ವ್ಯಾಖ್ಯೆಯಾಗುತ್ತದೆ.
ಜಾಗತಿಕ ಮಟ್ಟದಲ್ಲಿ ಸುನ್ನಿಗಳ ಭಾಗವೇ ಸಲಫಿಗಳಾಗಿದ್ದಾರೆ. ಆದರೆ ನಮ್ಮೂರಿನ ಸುನ್ನಿಗಳು ಎನ್ನುವುದು ಕೆಲವರು ಸ್ವಯಂ ವಹಿಸಿಕೊಂಡ ಹೆಸರು ಆಗಿದೆ. ಈ ವಿಭಾಗ ಇಸ್ಲಾಮಿನ ಹೆಸರಿನಲ್ಲಿ ಧರ್ಮಕ್ಕೆ ಸೇರಿಸಲು ನೋಡುತ್ತಿರುವ ಹಲವು ವಿಷಯಗಳನ್ನು ಸಲಫಿಗಳು ವಿರೋಧಿಸಿದ್ದಾರೆ. ಕೇರಳದಲ್ಲಿ ಒಬ್ಬ ಭಯೋತ್ಪಾದಕ ಸಲಫಿ ಈವರೆಗೂ ರೂಪುಗೊಂಡೇ ಇಲ್ಲ. ಕೆಲವು ವಿಕಲ ಚಿಂತನೆಗಳು ರೂಪುಗೊಂಡಿವೆ ಎನ್ನುವು ದನ್ನು ಹೊರತು ಪಡಿಸಿದರೆ ಹೇಳತಕ್ಕಂತಹ ಬೇರೇನೂ ನಾವು ಕಂಡಿಲ್ಲ. ಯಮನ್ಗೆ, ಸಿರಿಯಕ್ಕೆ ಹೋಗಿದ್ದಾರೆ ಎನ್ನುವುದು ಇಂದಿಗೂ ಸಾಬೀತು ಪಡಿಸಲು ಸಾಧ್ಯವಾಗದ ವಿಷಯವಾಗಿದೆ. ಶ್ರೀಲಂಕಾದ ಭಯೋತ್ಪಾದನೆಯ ಹಿಂದೆ ಸಲಫಿಗಳಿದ್ದಾರೆ ಎಂದು ಕೇಳುತ್ತಿರುವಾಗ ಕೇರಳ ದಲ್ಲಿ ಭಯೋತ್ಪಾದಕ ಸಲಫಿಗಳಿದ್ದಾರೆ ಎನ್ನುವ ರೀತಿಯಲ್ಲಿ ಮುಸ್ಲಿಮ್ ಸಮುದಾಯದೊಳಗಿನಿಂದ ಎದ್ದಿರುವ ಧ್ವನಿಯು ಯಾರನ್ನು ಸಂತೋಷ ಪಡಿಸುವ ಗುರಿ ಹೊಂದಿದೆ ಎಂದು ಗೊತ್ತಿಲ್ಲ.
ಹೆಸರು ನೋಡಿ ಭಯೋತ್ಪಾದಕರನ್ನು ಎದುರಿಸುವ ಕೆಲಸ ಆಗಬಾರದು. ಅದು ಮಾನ ವತೆಯ ವಿರುದ್ಧ ಕಾರ್ಯವಾಗಿದೆ. ಧರ್ಮವನ್ನು ತಪ್ಪಾಗಿ ವ್ಯಾಖ್ಯಾನಿಸಲು ಯಾರಿಗೂ ಬಿಡಬಾರದು. ಧರ್ಮದ ಸರಿಯಾದ ವ್ಯಾಖ್ಯಾನವನ್ನು ನಾವು ಹೇಳುತ್ತ ಲಿರಬೇಕು. ಅದು ಸಾಮೂಹಿಕವಾಗಿ ಹೇಳಬೇಕು. ಕೇರಳದಲ್ಲಿ ಇಂದು ಮುಖಾಮುಖಿ ಕಾರ್ಯಕ್ರಮಗಳು ನಡೆಯುತ್ತಿವೆ. ಸಂವಾದಗಳು ಪರಸ್ಪರ ಹತ್ತಿರವಾಗಲು ಸಹಕರಿಸುವಂತಿರಬೇಕು. ಮುಸ್ಲಿಂ ಸಮುದಾಯದಲ್ಲಿ ಬುದ್ಧಿಯಿಂದ ಅಂದರೆ ವಿವೇಕಯುತವಾಗಿ ಸಂವಾದ ನಡೆಸಬಾರದೆಂದು ಶತ್ರು ನಿರ್ಧರಿಸಿದ್ದಾನೆ. ವೈಚಾರಿಕವಾದ ಸಂವಾದಗಳು ಒಂದೆಡೆ ನಿತ್ಯ ನಡೆಯುವಾಗ ಇನ್ನೊಂದೆಡೆ ಕೆಲವರು ಧರ್ಮವನ್ನು ಭಾವನಾತ್ಮಕವಾಗಿ ಉಪಯೋಗಿಸುತ್ತಿದ್ದಾರೆ. `ನಿಮ್ಮಲ್ಲಿ ಮಾನ್ಯ ವ್ಯಕ್ತಿ ಯಾರೂ ಇಲ್ಲವೇ’ ಎಂದು ಒಮ್ಮೆ ಪ್ರವಾದಿ ಲೂತ್ ಕೇಳಿದ್ದರು. ವಿಷಯ ಬೇರೆಯೇ ಆದರೂ ನಾವು ಅದೇ ಪ್ರಶ್ನೆ ಕೇಳುತ್ತೇವೆ. ಕಾರಣ, ಶತ್ರುವಿಗೆ ಸಂಘಟನೆಗಳು ಪಾತ್ರೆಯಲ್ಲಿರುವ ತಿಂಡಿಗಳು ಮಾತ್ರ ಆಗಿವೆ.












