ಕ್ಯಾನ್ಸರ್ ಪೀಡಿತ ಬಾಲಕಿಯನ್ನು ಏಮ್ಸ್‌ನಲ್ಲಿ ಚಿಕಿತ್ಸೆಗಾಗಿ ವಿಶೇಷ ವಿಮಾನದಲ್ಲಿ ದಿಲ್ಲಿಗೆ ಕಳುಹಿಸಿದ ಪ್ರಿಯಾಂಕಾ ಗಾಂಧಿ

0
734

ಅಲಹಾಬಾದ್,ಮೇ 11: ಚುನಾವಣೆಯ ವೇಳೆ ರಾಜಕೀಯ ನಾಯಕರು ಜನರ ಪರ ಸಮರ್ಪಿಸಿಕೊಳ್ಳುವುದನ್ನು ಕಾಣಬಹುದು. ಆದರೆ ಈ ನಡುವೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕ್ಯಾನ್ಸರ್ ಪೀಡಿತ ಬಾಲಕಿಗೆ ಮಾಡಿದ ಸಹಾಯವಂತೂ ಖಂಡಿತ ಶ್ಲಾಘನಾರ್ಹವಾಗಿದೆ.
ಅಲಹಾಬಾದಿನ ಕಮಲಾ ನೆಹರೂ ಆಸ್ಪತ್ರೆಗೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಲಕಿಯ ಚಿಕಿತ್ಸೆ ಪಡೆಯಲು ಬಂದಿದ್ದಳು. ಆದರೆ ಅಲ್ಲಿ ಬಾಲಕಿಯ ಆರೋಗ್ಯದಲ್ಲಿ ಅಂತಹ ಸುಧಾರಣೆಗಳಾಗಲಿಲ್ಲ. ಇದರಿಂದ ಕುಟುಂಬದವರು ತುಂಬ ಚಿಂತಿತರಾದರು. ನಂತರ ಬಾಲಕಿಯ ಚಿಕಿತ್ಸೆಗೆ ನೆರವು ನೀಡುವಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯನ್ನು ಸಂಪರ್ಕಿಸಲಾಯಿತು. ವಿಷಯ ತಿಳಿದ ಕೂಡಲೇ ಪ್ರಿಯಾಂಕಾ ಬಾಲಕಿಯ ಸಹಾಯಕ್ಕೆ ಮುಂದೆ ಬಂದರು. ಅಲಹಾಬಾದಿನ ಸಂಸತ್ ಸ್ಥಾನದಲ್ಲಿ ಕಾಂಗ್ರೆಸ್‍ನ ಅಭ್ಯರ್ಥಿ ಯೋಗೇಶ್ ಶುಕ್ಲಾರ ಪರ ಚುನಾವಣಾ ಪ್ರಚಾರ ಮಾಡುತ್ತಿದ್ದರು. ಅವರ ಜೊತೆ ಕೇಂದ್ರ ಸಚಿವ ರಾಜೀವ್ ಶುಕ್ಲ, ಗುಜರಾತ್ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಮತ್ತು ಮಾಜಿ ಸಂಸದ ಮುಹಮ್ಮದ್ ಅಝರುದ್ದೀನ್ ಕೂಡ ಇದ್ದರು. ಕೂಡಲೇ ತನ್ನೊಂದಿಗಿದ್ದ ನಾಯಕರಿಗೆ ಬಾಲಕಿಯ ಚಿಕಿತ್ಸೆಯನ್ನು ದಿಲ್ಲಿಯ ಏಮ್ಸ್‌ನಲ್ಲಿ ಮಾಡುವಂತೆ ಪ್ರಿಯಾಂಕ ಸೂಚಿಸಿದರು. ತೀವ್ರ ಅನಾರೋಗ್ಯಗೊಂಡ ಬಾಲಕಿಯನ್ನು ತಂದೆ ತಾಯಿಯರ ಜೊತೆ ಖಾಸಗಿ ವಿಮಾನದಲ್ಲಿ ದಿಲ್ಲಿಯ ಏಮ್ಸ್‌ಗೆ ಕಳುಹಿಸಿಕೊಟ್ಟರು.