ಫನಿ ಚಂಡಮಾರುತ ಹಾವಳಿ: ಒಡಿಸ್ಸದಲ್ಲಿ 64ಕ್ಕೆ ಏರಿದ ಮೃತರ ಸಂಖ್ಯೆ

0
528

ಭುವನೇಶ್ವರ್, ಮೇ 13: ಫನಿ ಚಂಡಮಾರುತದಿಂದ ಒಡಿಸ್ಸದಲ್ಲಿ ಭಾರೀ ನಾಶನಷ್ಟಕ್ಕೆ ಕಾರಣವಾಗಿದ್ದು, ಮೃತರ ಸಂಖ್ಯೆ 64ಕ್ಕೇರಿಕೆಯಾಗಿದೆ. ಅತೀ ಹೆಚ್ಚು ಮಂದಿ ಪುರಿಯಲ್ಲಿ (39 ಮಂದಿ) ಮೃತಪಟ್ಟಿದ್ದಾರೆ. ಖೋರಧದಲ್ಲಿ ಒಂಬತ್ತು, ಜಾಜ್‍ಪುರ, ಮಯೂರಭಂಜ್‍ಗಳಲ್ಲಿ ತಲಾ ನಾಲ್ವರು, ಕೇಂದ್ರಪದದಲ್ಲಿ ಮೂವರು ಮೃತಪಟ್ಟಿದ್ದಾರೆಂದು ಸರಕಾರ ಲೆಕ್ಕ ಪ್ರಕಟಿಸಿದೆ. ರಾಜ್ಯದಲ್ಲಿ ಒಂದು ಕೋಟಿ ಅರುವತ್ತೈದು ಲಕ್ಷ ಮಂದಿ ಚಂಡಮಾರುತ ಪೀಡಿತರಾಗಿದ್ದು. ಸುಮಾರು 34 ಲಕ್ಷ ಜಾನುವಾರುಗಳು ಸತ್ತಿವೆ. ಪುರಿ, ಖುರ್ದ,ಕಟಕ್, ಕೇಂದ್ರಪದ ಜಿಲ್ಲೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಪುರಿಯಲ್ಲಿ 1, 89, 095 ಮನೆಗಳು ನಾಶವಾಗಿವೆ. 160 ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸರಕಾರಿ ವರದಿಗಳ ಮೂಲಕ ತಿಳಿದು ಬಂದಿದೆ.