ಮಹಿಳಾ ಪ್ರಾತಿನಿಧ್ಯ ಹಾಗೂ ಜಮಾಅತೆ ಇಸ್ಲಾಮೀ ಹಿಂದ್

0
517

ಸನ್ಮಾರ್ಗ ವಾರ್ತೆ

ಮಹಿಳಾ ಹಕ್ಕುಗಳನ್ನು ಗೌರವಿಸುವ, ಅವರ ಸ್ವಾತಂತ್ರ‍್ಯಕ್ಕೆ ಮಾನ್ಯತೆ ನೀಡುವ ಮತ್ತು ಅವರ ಸಬಲೀಕರಣವನ್ನು ಆದ್ಯತೆಯಾಗಿ ಪರಿಗಣಿಸುವ ಸಂಘಟನೆಯಾಗಿ ಜಮಾಅತೆ ಇಸ್ಲಾಮೀ ಹಿಂದ್ ಗುರುತಿಸಿಕೊಂಡಿದೆ.

ಅದರ ರಾಷ್ಟ್ರೀಯ ಅಥವಾ ಅಮೀರೆ ಜಮಾಅತ್‌ನನ್ನು ಪ್ರತಿನಿಧಿಗಳ ಸಭೆ (COR- Council of Representatives) ಆಯ್ಕೆ ಮಾಡುತ್ತದೆ. ಇದು ಸಂಘಟನೆಗೆ ಸಂಬಂಧಿಸಿ ನಿರ್ಧಾರವನ್ನು ತೆಗೆದುಕೊಳ್ಳುವ ಅತ್ಯುನ್ನತ ಮಂಡಳಿ. ಐದು ವರ್ಷಗಳಿಗೊಮ್ಮೆ ಈ ಮಂಡಳಿಗೆ ಮತದಾನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

2023-2027 ರ ಅವಧಿಗೆ ಒಟ್ಟು 162 ಮಂದಿ ಸದಸ್ಯರು ಆಯ್ಕೆಯಾಗಿದ್ದಾರೆ. ಇವರಲ್ಲಿ 36 ಮಂದಿ ಮಹಿಳೆಯರು. ಇದು ಒಟ್ಟು ಸದಸ್ಯರ ಸಂಖ್ಯೆಯ 22 ಶೇಕಡವಾಗಿದೆ.

ಅಂದಹಾಗೆ, ಈಗಿನ ಜಮಾಅತ್ ರಾಷ್ಟ್ರೀಯ ಕಾರ್ಯದರ್ಶಿಗಳಲ್ಲಿ ಇಬ್ಬರು ಮಹಿಳೆಯರಾಗಿದ್ದಾರೆ. ಹಾಗೆಯೇ, ಜಮಾಅತ್ ಮಹಿಳೆಯರ ಪ್ರತ್ಯೇಕ ವಿಭಾಗವನ್ನು ಹೊಂದಿದ್ದು, ವಿದ್ಯಾರ್ಥಿನಿಯರಿಗಾಗಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಎಂಬ ಪ್ರತ್ಯೇಕ ವಿಭಾಗವನ್ನೂ ಹೊಂದಿದೆ. ಇದರ ಈಗಿನ ಕರ್ನಾಟಕ ರಾಜ್ಯಾಧ್ಯಕ್ಷೆ ಸೀಮಾ ತಾಜ್.

ಈ ದೇಶದ ಮುಸ್ಲಿಂ ಸಂಘಟನೆಗಳ ಪೈಕಿ ಜಮಾಅತೆ ಇಸ್ಲಾಮೀ ಹಿಂದನ್ನು ಹೊರತುಪಡಿಸಿ ಇನ್ನಾವ ಸಂಘಟನೆಗಳಲ್ಲೂ ಮಹಿಳೆಯನ್ನು ಇಂತಹ ಅತ್ಯುನ್ನತ ಮಂಡಲಿಗೆ ಆಯ್ಕೆ ಮಾಡುವ ಕ್ರಮವಿಲ್ಲ. ಇದಕ್ಕೆ ಅಪವಾದವೆಂದರೆ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮಾತ್ರ. ಇದೇ ವೇಳೆ ಭಾರತದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿರುವ ಮಹಿಳಾ ಪ್ರಾತಿನಿಧ್ಯಕ್ಕೆ ಹೋಲಿಸಿದರೆ ಜಮಾಅತೆ ಇಸ್ಲಾಮೀ ಹಿಂದ್ ನ ಪಾರ್ಲಿಮೆಂಟ್ ಎಂದು ಹೇಳಬಹುದಾದ ಪ್ರತಿನಿಧಿಗಳ ಸಭೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯವಿದೆ. ದೇಶದ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಒಟ್ಟು 766 ಸದಸ್ಯರಿದ್ದು ಇವರಲ್ಲಿ ಕೇವಲ 98 ಮಂದಿ ಮಾತ್ರ ಮಹಿಳೆಯರಿದ್ದಾರೆ. ಇದು ಒಟ್ಟು ಸದಸ್ಯರ ಸಂಖ್ಯೆಯ 12% ಮಾತ್ರವಾಗಿದೆ.

ಸೈಯದ್ ಖಾಲಿಕ್ ಅಹ್ಮದ್
ಅನು: ಆರಿಫಾ