ವೈದ್ಯಕೀಯ ಕಾಲೇಜಿನಲ್ಲಿ ಮುಸ್ಲಿಮರ ಪ್ರವೇಶ ನಿಷೇಧಿಸಿ, ಅವರಿಗೆ ಪ್ರತ್ಯೇಕ ಕಟ್ಟಡ ನೀಡಿ ಎಂದ ಬಿಜೆಪಿ ಶಾಸಕಿ ಕೇತ್ಕಿ ಸಿಂಗ್

0
1589

ಸನ್ಮಾರ್ಗ ವಾರ್ತೆ

ಬಲ್ಲಿಯಾ, ಉತ್ತರ ಪ್ರದೇಶ : ಬಲ್ಲಿಯಾ ವೈದ್ಯಕೀಯ ಕಾಲೇಜಿಗೆ ಮುಸ್ಲಿಮರ ಪ್ರವೇಶವನ್ನು ನಿಷೇಧಿಸಬೇಕು ಮತ್ತು ಅವರಿಗಾಗಿ ಪ್ರತ್ಯೇಕ ಕಟ್ಟಡವನ್ನು ನಿರ್ಮಿಸಬೇಕೆಂದು ಬಿಜೆಪಿ ಶಾಸಕಿ ಕೇತ್ಕಿ ಸಿಂಗ್ ಅವರು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಒತ್ತಾಯಿಸಿದ್ದಾರೆ. ಈ ಹೇಳಿಕೆಗಳು ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿದ್ದು, ಶಾಸಕರು ಕೋಮು ವಿಭಜನೆಯನ್ನು ಉತ್ತೇಜಿಸುತ್ತಿದ್ದಾರೆ ಎಂದು ವಿಮರ್ಶಕರು ಹೇಳಿದ್ದಾರೆ.

ಉತ್ತರ ಪ್ರದೇಶದ ಬನ್ಸ್ದಿಹ್ ಕ್ಷೇತ್ರವನ್ನು ಪ್ರತಿನಿಧಿಸುವ ಸಿಂಗ್, ಸಾರ್ವಜನಿಕ ಭಾಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದ್ದು, ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ವೈದ್ಯಕೀಯ ಕಾಲೇಜಿನೊಳಗೆ ಪ್ರತ್ಯೇಕ ಸೌಲಭ್ಯ ಇರಬೇಕು, ಇದು “ಘರ್ಷಣೆಗಳನ್ನು” ತಡೆಗಟ್ಟುತ್ತದೆ ಮತ್ತು ಸಂಸ್ಥೆಯೊಳಗೆ “ಸಾಮರಸ್ಯ”ವನ್ನು ಕಾಪಾಡಿಕೊಳ್ಳುತ್ತದೆ ಎಂದು ಅವರು ಹೇಳಿದರು.

ಸಿಂಗ್ ಹೇಳಿಕೆಗಳನ್ನು ಉತ್ತರ ಪ್ರದೇಶ ಸರ್ಕಾರ ಮತ್ತು ಬಿಜೆಪಿ ನಾಯಕತ್ವ ಹೇಗೆ ಪ್ರತಿಕ್ರಿಯೆ ನೀಡಬಹುದು ಎಂದು ಈಗ ಎಲ್ಲರ ಕಣ್ಣುಗಳು ನೆಟ್ಟಿವೆ.