ಕೊಝಿಕ್ಕೋಡ್, ಮೇ 28: ಲೋಕಸಭಾ ಚುನಾವಣೆಯಲ್ಲಿ ಭಾರೀ ವಿಜಯ ದಾಖಲಿಸಿ ಅಧಿಕಾರಕ್ಕೆ ಮರಳಿದ ನರೇಂದ್ರ ಮೋದಿಯನ್ನು ಕೇರಳದ ಕಾಂಗ್ರೆಸ್ ನಾಯಕ ಎಪಿ ಅಬ್ದುಲ್ಲಕುಟ್ಟಿ ಹೊಗಳಿದರು. ಮೋದಿಯನ್ನು ಜನಪ್ರಿಯ ನಾಯಕನನ್ನಾಗಿಸಿದ್ದು ಅವರ ಗಾಂಧೀಯಿಸಂ ನೀತಿಯಾಗಿದೆ ಎಂದು ಅಬ್ದುಲ್ಲ ಕುಟ್ಟಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಆಡಳಿತ ತಂತ್ರಜ್ಞರಾಗಿದ್ದು ಬಿಜೆಪಿಯಲ್ಲಿರುವವರೇ ಅಚ್ಚರಿ ಪಡುವಂತೆ ಜಯಗಳಿಸಿದ್ದಾರೆ. ಆದ್ದರಿಂದ ಎಲ್ಲ ರಾಜಕೀಯ ಪಾರ್ಟಿಯ ಕಾರ್ಯಕರ್ತರು ಭಾವನಾತ್ಮಕತೆಯನ್ನು ದೂರವಿಟ್ಟು ನಿಷ್ಪಕ್ಷಮತಿಯಾಗಿ ಶಾಂತವಾಗಿ ಅವಲೋಕನ ನಡೆಸಬೇಕೆಂದು ಅವರು ಹೇಳಿದರು. ಈ ಸಲ ಬಿಜೆಪಿಗೆ ಸಿಕ್ಕಿದ ಮಹಾವಿಜಯ ಮೋದಿ ಆಡಳಿತಕ್ಕೆ ಸಿಕ್ಕ ಅಂಗೀಕಾರವಾಗಿದೆ ಎಂದು ಅಬ್ದುಲ್ಲಕುಟ್ಟಿ ಹೇಳಿದ್ದಾರೆ.












