ಮೋದಿ ಪ್ರಮಾಣ ವಚನಕ್ಕೆ ರಜನೀಕಾಂತ್,ಕಮಲ್ ಹಾಸನ್‍ಗೆ ಆಹ್ವಾನ

0
395

ಚೆನ್ನೈ, ಮೇ 28: ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ತಮಿಳ್ನಾಡು ನಟ, ರಾಜಕಾರಣಿಗಳಾದ ರಜನೀಕಾಂತ್, ಕಮಲ್ ಹಾಸನ್‍ರಿಗೆ ಆಹ್ವಾನ ನೀಡಲಾಗಿದೆ. ಇಬ್ಬರು ಭಾಗವಹಿಸುವ ಕುರಿತು ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಸಂಬಂಧಪಟ್ಟ ಮೂಲಗಳು ತಿಳಿಸಿವೆ. ಆಯಾ ರಾಜ್ಯಗಳ ಪ್ರಮುಖರಿಗೆ ಕಳುಹಿಸುವ ಆಹ್ವಾನ ಪತ್ರಿಕೆಯ ಭಾಗವಾಗಿ ಇವರಿಗೂ ಕಳುಹಿಸಲಾಗಿದೆ.

ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಸಹಿತ ಅಣ್ಣಾಡಿಎಂಕೆಯ ನಾಯಕರು ಭಾಗವಹಿಸುವರು. ಮಕ್ಕಳ್ ನೀತಿ ಮಯ್ಯಂ ಅಧ್ಯಕ್ಷ ಕಮಲ್‍ಹಾಸನ್ ಚುನಾವಣೆಯ ವೇಳೆ ಮೋದಿಯ ಕಟು ಟೀಕಾಕಾರಲ್ಲೊಬ್ಬರಾಗಿದ್ದರು. ಆದರೆ ರಜನೀಕಾಂತ್ ಮತ್ತು ಮೋದಿಗೆ ನಿಕಟ ಸೌಹಾರ್ದವಿದೆ. ಮುಂದಿನ ತಮಿಳ್ನಾಡಿನ ವಿಧಾನಸಭಾ ಚುನಾವಣೆಯಲ್ಲಿ ತನ್ನ ನೇತೃತ್ವದ ಹೊಸ ರಾಜಕೀಯ ಪಕ್ಷ ರಂಗಪ್ರವೇಶಿಸಲಿದೆ ಎಂದು ರಜನೀಕಾಂತ್ ಈಗಾಗಲೇ ಘೋಷಿಸಿದ್ದಾರೆ.