ಅಪಘಾತ: ಉಮ್ರ ನಿರ್ವಹಿಸಿ ಮರಳುತ್ತಿದ್ದ ಭಾರತದ ವೈದ್ಯೆ, ಪತಿ ದಾರುಣ ಸಾವು

0
793

ದಮ್ಮಾಂ, ಮೇ 27: ಉಮ್ರ ನಿರ್ವಹಿಸಿ ಮರಳುತ್ತಿದ್ದ ಭಾರತದ ವೈದ್ಯ, ಅವರ ಪತಿ ಕಾರುಅಪಘಾತದಲ್ಲಿ ಮೃತಪಟ್ಟಿದ್ದಾರೆ.ಹಫರಲ್ ಬಿತ್ವಿನ್ ಸೆಂಟ್ರಲ್ ಆಸ್ಪತ್ರೆಯ ಅನಸ್ತೇಶಿಯ ವಿಭಾಗದ ವೈದ್ಯ ಆಂಧ್ರದ ಆಯಿಶಾ(ಸ್ವಪ್ನಲತಾ-39) ಮತ್ತು ಅವರ ಪತಿ ತೆಲಂಗಾಣದ ಫಿರೋಝ್ ಅಹ್ಮದ್(40) ಮೃತಪಟ್ಟವರು. ಏಕ ಪುತ್ರ ಅಬ್ದುಲ್ ರಹೀಂ(ನಾಲ್ಕು) ಪಾರಾಗಿದ್ದು ಮಗುವಿಗೆ ಗಾಯಗಳಾಗಿಲ್ಲ.

ಹಫರಲ್ ಬತ್ವಿನ್‍ನಿಂದ 250 ಕಿಲೊಮೀಟರ್ ದೂರದ ಸುಲ್ಫಿಯಲ್ಲಿ ಕಳೆದ ದಿವಸ ಬೆಳಗ್ಗೆ ಅಪಘಾತ ಸಂಭವಿಸಿದೆ. ಇವರು ಸಂಚರಿಸಿದ ಕಾರು ನಿಯಂತ್ರಣ ಕಳಕೊಂಡು ರಸ್ತೆಯ ಬದಿಯ ಕಂಭಕ್ಕೆ ಢಿಕ್ಕಿ ಹೊಡೆಯಿತು. ಇಬ್ಬರೂ ಘಟನಾ ಸ್ಥಳದಲ್ಲಿ ಮೃತಪಟ್ಟರು. ಢಿಕ್ಕಿಯ ಆಘಾತದಲ್ಲಿ ದೂರಕ್ಕೆಸೆಯಲ್ಪಟ್ಟ ಮಗು ಗಾಯಗಳಾಗದೆ ಆಶ್ಚರ್ಯವಾಗಿ ಪಾರಾಗಿದೆ.

ಝುಲ್ಪಿ ಆಸ್ಪತ್ರೆಯಲ್ಲಿ ಮೃತದೇಹಗಳನ್ನು ಇರಿಸಲಾಗಿದೆ. ಮಗುವನ್ನು ಪಡೆಯಲು ದಾಖಲೆಗಳೊಂದಿಗೆ ಸಹಕಾರ್ಯಕರ್ತರು ಝುಲ್ಫಿಗೆ ಬಂದಿದ್ದಾರೆ. ಆಯಿಶಾರ ಕುಟುಂಬ ಮೃತದೇಹವನ್ನು ಊರಿಗೆ ತರಬೇಕೆಂದು ಹೇಳುತ್ತಿದೆ. ಆದರೆ ಪತಿ ಫಿರೋಝ್‍ರ ಕುಟುಂಬ ಮೃತದೇಹವನ್ನು ಸೌದಿ ಅರೇಬಿಯದಲ್ಲಿ ದಫನಮಾಡಬೇಕೆಂದು ಹೇಳಿದೆ.