ಮುಹಮ್ಮದ್ ಇಲ್ಯಾಸ್, ಮಡಿಕೇರಿ
ಪ್ರಶ್ನೆ: ರಮಝಾನ್ನ ಮೊದಲ ಹತ್ತರಲ್ಲೂ ಎರಡನೇ ಹತ್ತರಲ್ಲೂ ಕೊನೆಯ ಹತ್ತರಲ್ಲೂ ಬೇರೆ ಬೇರೆ ರೀತಿಯ ದುಆ ಹೇಳುವುದನ್ನು ಮಸೀದಿಗಳಲ್ಲಿ ಕೇಳುತ್ತಿದ್ದೇವೆ. ಅದು ಸುನ್ನತ್ ಆದ ಪುಣ್ಯ ಕಾರ್ಯವೇ? ಅದರ ವಾಸ್ತವಿಕತೆಯೇನು?
ಉತ್ತರ: ಇಂದು ಮಸೀದಿಯಲ್ಲಿ ಕೇಳುತ್ತಿರುವಂತಹ ರಮಝಾನ್ನ ಪ್ರತೀ ಹತ್ತರಲ್ಲೂ ಪ್ರತ್ಯೇಕವಾಗಿ ಹೇಳುವ ಪ್ರಾರ್ಥನೆಯನ್ನು ಹೇಳುವುದರಲ್ಲಿ ವಿರೋಧವಿಲ್ಲ. ಕಾರಣ ಓರ್ವನ ಇಹ-ಪರಮೋಕ್ಷಕ್ಕಾಗಿ ಯಾವುದೇ ಪ್ರಾರ್ಥನೆ ಯನ್ನು ಮಾಡಬಹುದಾಗಿದೆ. ಉಪವಾಸಿಗನ ಪ್ರಾರ್ಥನೆಗೆ ಪ್ರತ್ಯೇಕ ಪರಿಗಣನೆ ಇದೆ ಎಂದು ಪ್ರವಾದಿ(ಸ) ಕಲಿಸಿದ್ದಾರೆ.
ಆದರೆ, ಪ್ರಶ್ನೆಯಲ್ಲಿ ಕೇಳಿರುವಂತೆ ಒಂದೊಂದು ಹತ್ತರಲ್ಲಿ ಪ್ರತ್ಯೇಕ ಪ್ರಾರ್ಥನೆಗಳನ್ನು ಪ್ರವಾದಿ(ಸ) ಕಲಿಸಲಿಲ್ಲ. ಹಾಗೆ ಪ್ರಾರ್ಥನೆ ಇರುವುದಾಗಿ ಇಮಾಮ್ಗಳು ಪ್ರಸ್ತಾಪಿಸಿದ ಬಗ್ಗೆ ವರದಿಯಾಗಿಲ್ಲ. ಇಬ್ನು ಖುಝೈಮ ಹಾಗೂ ಬೈಹಕಿ ಉದ್ಧರಿಸಿದ ಅತ್ಯಂತ ದುರ್ಬಲವಾದ ಒಂದು ಹದೀಸ್ನ ಆಧಾರದಲ್ಲಿ ನಂತರದ ಕಾಲದಲ್ಲಿ ಯಾರಾದರೂ ಇದನ್ನು ಪ್ರಾರಂಭಿಸಿರಬಹುದು.
ಶಅ್ಬಾನ್ನ ಕೊನೆಯ ಶುಕ್ರವಾರ ಪ್ರವಾದಿ(ಸ) ನಮಗೆ ಪ್ರವ ಚನ ನೀಡಿದರು ಎಂದು ಪ್ರಾರಂಭ ವಾಗುವ ದೀರ್ಘವಾದ ಹದೀಸ್ನಲ್ಲಿ ಮೊದಲ ಹತ್ತು ರಹ್ಮತ್, ಮಧ್ಯದ ಹತ್ತು ಮಗ್ಫಿರತ್ ಹಾಗೂ ಕೊನೆಯ ಹತ್ತು ನರಕದಿಂದ ವಿಮುಕ್ತಿಯಾಗಿದೆ ಎಂದು ವಿವರಿಸುವ (ಅವ್ವಲುಹು ರಹ್ಮಃ, ಔಸತುಹು ಮಗ್ಫಿರ, ಆಖಿರುಹು ಇತ್ಕುನ್ ಮಿನನ್ನಾರ್) ಈ ಹದೀಸ್ ಪೂರ್ವಿಕರೂ ಬಳಿಕ ಬಂದವರೂ ಆದ ಇಮಾಮರು ಅತ್ಯಂತ ದುರ್ಬಲ ವಾಗಿದೆ ಎಂದು ಹೇಳಿದ್ದಾರೆ. ಅದರ ವರದಿಯ ಪರಂಪರೆಯಲ್ಲಿರುವ ಯೂಸುಫ್ ಬಿನ್ ಝಿಯಾದ್ ಅಲ್ ಬಸ್ಮರಿ ಎಂಬವರ ಕುರಿತು, ಅವರಿಂದ ಬಂದಿರುವ ಹ ದೀಸ್ನ್ನು ಸ್ವೀಕರಿಸುವ ಹಾಗಿಲ್ಲ ಎಂದೂ ಮುಂಕರುಲ್ ಹದೀಸ್ ಆಗಿದೆಯೆಂದೂ ಅವರು ವಿಶ್ವಾಸಾರ್ಹರಲ್ಲವೆಂದೂ ಹದೀಸ್ ವ್ಯಾಖ್ಯಾನಗಾರರು ದಾಖಲಿಸಿದ್ದಾರೆ. ಆದ್ದರಿಂದ ನೂರಾರು ಸಹೀಹ್ ಆದ ಹದೀಸ್ಗಳಿರುವಾಗ ಇಂತಹ ದುರ್ಬಲ ವಾದ ಹದೀಸ್ಗಳ ಹಿಂದೆ ಬೀಳ ಬೇಕಾದ ಯಾವುದೇ ಅಗತ್ಯವಿಲ್ಲ. ಇಂತಹ ಬಾಲಿಶವಾದ ವರದಿಗಳನ್ನು ಆಧಾರವಾಗಿಸಿದ ಪ್ರಾರ್ಥನೆಗಳನ್ನು ಕೇವಲ ಪ್ರಾರ್ಥನೆಗಳಾಗಿ ಪಠಿಸುವುದ ರಲ್ಲಿ ತೊಂದರೆಯಿಲ್ಲ ಎಂದು ಹಿಂದೆ ಹೇಳಲಾಯಿತಷ್ಟೇ. ಆದರೆ ಇದು ಸುನ್ನತ್ ಆಗಿದೆ ಎಂದು ಭಾವಿಸಿ ಪಠಿಸುವುದೂ ಇವುಗಳಿಗೆ ಇತರ ಪ್ರಾರ್ಥನೆಗಳಿಗಿಲ್ಲದ ವಿಶೇಷ ಮಹತ್ವವಿದೆ ಎಂದು ನಂಬುವುದು ಸರಿಯಲ್ಲ. ಆದರೆ `ಅಲ್ಲಾಹುಮ್ಮ ಇನ್ನಕ ಅಫುವ್ವುನ್ ತುಹಿಬ್ಬುಲ್ ಅಫುವ ಫಅ್ಫು ಅನ್ನೀ: ಎಂಬ ಪ್ರಾರ್ಥನೆಯು ಸಹೀಹ್ ಆದ ಹಲವಾರು ಹದೀಸ್ಗಳ ಮೂಲಕ ಸಾಬೀತುಗೊಂಡಿದೆ. ಲೈಲತುಲ್ ಕದ್ರ್ನ್ನು ನಿರೀಕ್ಷಿಸಿದ ರಾತ್ರಿಯಲ್ಲಿ ಪ್ರಾರ್ಥಿಸಲು ಪ್ರವಾದಿ(ಸ) ಆಯಿಶಾ ರಿಗೆ(ರ) ಈ ಪ್ರಾರ್ಥನೆಯನ್ನು ಕಲಿಸಿ ಕೊಟ್ಟಿದ್ದಾರೆ. (ತಿರ್ಮಿದಿ, ನಸಾಯಿ, ಅಹ್ಮದ್) ಆದ್ದರಿಂದ ಈ ಪ್ರಾರ್ಥನೆಗೆ ವಿಶೇಷ ಪ್ರತಿಫಲವಿದೆ. ಅದು ಸುನ್ನತ್ ಆದ ಕಾರ್ಯವೂ ಆಗಿದೆ.
ಪ್ರಾರ್ಥನೆಯ ಶಿಷ್ಟಾಚಾರಗಳನ್ನು ಪಾಲಿಸಿ ಪ್ರಾರ್ಥನೆಯನ್ನು ಮಾಡಬಹು ದಾಗಿದೆ. ಕುರ್ಆನ್ ಹಾಗೂ ಹದೀಸ್ ಗಳಲ್ಲಿ ಬಂದ ಪ್ರಾರ್ಥನೆಯಾಗಿದ್ದರೆ ಹೆಚ್ಚು ಉತ್ತಮ. ಮಾತ್ರವಲ್ಲ, ಅವುಗಳಲ್ಲಿ ಬಂದ ಪ್ರಾರ್ಥನೆಗಳನ್ನು ಮಾತ್ರ ಪಠಿಸಬೇಕು ಎಂದಿಲ್ಲ. ಅದೇ ರೀತಿ ಒಂದು ಕಾರ್ಯವು ಸುನ್ನತ್ ಎಂದು ಹೇಳಬೇಕಾದರೆ ಅದಕ್ಕೆ ಕುರ್ಆನ್ ಅಥವಾ ಹದೀಸ್ಗಳು ಆಧಾರವಾಗಿರ ಬೇಕು. ದುರ್ಬಲ ಹದೀಸ್ಗಳನ್ನು ಆಧರಿಸಿ ಒಂದು ಕಾರ್ಯವು ಸುನ್ನತ್ ಆಗಿದೆ ಎಂದು ವಾದಿಸಲಾಗದು. ಈ ವಿಷಯದಲ್ಲಿ ಯಾರಿಗಾದರೂ ಭಿನ್ನಾಭಿ ಪ್ರಾಯ ಇರುವ ಬಗ್ಗೆ ತಿಳಿದಿಲ್ಲ.












