ಸಾಮಾಜಿಕ ಮಾಧ್ಯಮಗಳಿಗೆ ವ್ಯಾಪಿಸಿದ ರೋಹಿಂಗ್ಯನ್ ಅಭಿಯಾನ: ಮೊದಲ 3 ದಿನಗಳಲ್ಲಿ 5 ಕೋ. ದಿರ್‍ಹಂ ಸಂಗ್ರಹ

0
515

ಅಬುಧಾಬಿ,ಮೇ 29: ರೋಹಿಂಗ್ಯನ್ ನಿರಾಶ್ರಿತರ ಸಹಾಯಕ್ಕಾಗಿ ಯುಎಇ ಆರಂಭಿಸಿದ ಅಭಿಯಾನ ಸಾಮಾಜಿಕ ಮಾಧ್ಯಮಗಳಿಗೂ ವ್ಯಾಪಿಸುವಂತೆ ಮಾಡಿ ಹೆಚ್ಚು ಜನರನ್ನು ತಲುಪುವಂತೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಂಡರು. ಅಭಿಯಾನದ ಮೊದಲ ಮೂರು ದಿನಗಳಲ್ಲಿ ಐದು ಕೋಟಿ ದಿರ್ಹಂ ಸಂಗ್ರಹಿಸಲು ಸಾಧ್ಯವಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ದೂರದಲ್ಲಿರುವವರಿಗೂ ಅಭಿಯಾನ ತಲುಪಿಸಿದಾಗ ಹಿಂದೆಲ್ಲ ಸಿಕ್ಕಿರುವ ಅಭೂತಪೂರ್ವ ಬೆಂಬಲ ಅಧಿಕಾರಿಗಳಿಗೆ ಪ್ರೇರಣೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಮುಂದುವರಿಸಿದ್ದರಿಂದ ವಿದೇಶಿಗಳಿಂದಲೂ ನೆರವು ಹರಿದು ಬರುತ್ತಿದೆ ಎಂದು ಎಮಿರೇಟ್ಸ್ ರೆಡ್ ಕ್ರೆಸೆಂಟ್ ಅಂತಾರಾಷ್ಟ್ರೀಯ ಸಹಾಯ ಡೆಪ್ಯುಟಿ ಸೆಕ್ರೆಟರಿ ಜನರಲ್ ಫಹದ್ ಅಬ್ದುಲ್ ರಹ್ಮಾನ್ ಬಿನ್ ಸುಲ್ತಾನ್ ಹೇಳಿದರು. ಯುಎಇ ಜನರು ಮನಸಾರೆ ನೀಡುತ್ತಿರುವ ಧನ ಸಹಾಯ ಇತರರಿಗೂ ಪ್ರೇರಣೆಯಾಗಬಹುದು ಎಂದು ಅವರು ಅಭಿಪ್ರಾಯ ಪ್ರಕಟಿಸಿದ್ದಾರೆ.