ಸನ್ಮಾರ್ಗ ವಾರ್ತೆ
ಸೌದಿ ಪ್ರಜೆಗಳ ಸರಾಸರಿ ಆಯುಷ್ಯ 78 ವರ್ಷಗಳಿಗಿಂತಲೂ ಹೆಚ್ಚಿರುವುದಾಗಿ ವರದಿಗಳು ತಿಳಿಸಿವೆ. ಆರೋಗ್ಯ ಕ್ಷೇತ್ರದಲ್ಲಿ ಜಾರಿಗೊಳಿಸಲಾದ ವಿವಿಧ ಯೋಜನೆಗಳ ಕಾರಣದಿಂದಾಗಿ ಈ ಯಶಸ್ಸು ಸಾಧ್ಯವಾಗಿದೆ ಎಂದು ಹೇಳಲಾಗಿದೆ. ಸೌದಿ ಅರೇಬಿಯಾದ ಸಚಿವಾಲಯವೇ ಈ ಮಾಹಿತಿಯನ್ನು ಬಿಡುಗಡೆಗೊಳಿಸಿದೆ.
2016ರ ಅಂಕಿ ಅಂಶಗಳ ಪ್ರಕಾರ ಸೌದಿ ಪ್ರಜೆಗಳ ಸರಾಸರಿ ಆಯುಷ್ಯ 74 ವರ್ಷವಾಗಿತ್ತು . ವಿಶ್ವ ಆರೋಗ್ಯ ಸಂಸ್ಥೆಯ ದಿನದ ಹಿನ್ನೆಲೆಯಲ್ಲಿ ಈ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಲಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿ ಜಾಗೃತಿಗೊಳಿಸುವುದು, ದೈನಂದಿನ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುವುದು ಮತ್ತು ಆರೋಗ್ಯಕ್ಕೆ ಸಂಬಂಧಿಸಿ ಎಚ್ಚರಿಕೆಯನ್ನು ಹೊಂದು ವುದು ಇತ್ಯಾದಿಗಳ ಬಗ್ಗೆ ಸೌದಿ ಜಾಗೃತಿಯನ್ನು ಮೂಡಿಸುತ್ತಿದೆ. ಇದರ ಫಲಿತಾಂಶ ಇದೀಗ ಲಭ್ಯವಾಗಿದೆ ಎಂದು ತಿಳಿಸಲಾಗಿದೆ.












