ಸನ್ಮಾರ್ಗ ವಾರ್ತೆ
ಮೂಡಬಿದ್ರೆ: ಅಲ್ ಫುರ್ಖಾನ್ ಇಸ್ಲಾಮಿಕ್ ಪದವಿಪೂರ್ವ ಕಾಲೇಜು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದೆ.
ವಾಣಿಜ್ಯ ವಿಭಾಗದ ಮಹಿನ್ ಫಾತಿಮ 600 ಕ್ಕೆ 590 ಶೇಕಡ (98.33%) ಅಂಕಗಳಿಸಿ ರಾಜ್ಯದಲ್ಲಿ ಹತ್ತನೇ ರ್ಯಾಂಕ್ ಹಾಗೂ ಕಾಲೇಜಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದ ಮುಹಮ್ಮದ್ ಹಿಶಾಮ್ ಎ 600 ಕ್ಕೆ 569 ಶೇಕಡ (94.83% )ಅಂಕಗಳಿಸಿ ಕಾಲೇಜಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಕಾಲೇಜಿನ ಒಟ್ಟು 27 ವಿದ್ಯಾರ್ಥಿಗಳು ಶ್ರೇಷ್ಠ ದರ್ಜೆಯಲ್ಲಿ ಉತ್ತೀರ್ಣರಾದರೆ, 71 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಮಹಮ್ಮದ್ ಸಮೀರ್, ನಿರ್ದೇಶಕರಾದ ಮುಮ್ತಾಜ್, ಖಜಾಂಜಿ ಅಶ್ಫಾಕ್, ಅಡಳಿತಾಧಿಕಾರಿ ಶಹಾಮ್, ಪ್ರಾಂಶುಪಾಲರು , ಉಪ ಪ್ರಾಂಶುಪಾಲರು ಮತ್ತು ಅಧ್ಯಾಪಕ ವೃಂದ ವಿದ್ಯಾರ್ಥಿಗಳಿಗೆ ಅಭಿನಂದಸಿ ಶುಭಕೋರಿದ್ದಾರೆ.












