ಕಾಂಗ್ರೆಸ್ ಪ್ರತಿನಿಧಿಗಳು ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ-ರಣದೀಪ್ ಸುರ್ಜೇವಾಲ

0
429

ಹೊಸದಿಲ್ಲಿ,ಮೇ 30: ಟಿವಿ ಕಾರ್ಯಕ್ರಮದಲ್ಲಿ ಒಂದು ತಿಂಗಳು ಕಾಂಗ್ರೆಸ್ ಪ್ರತಿನಿಧಿಗಳು ಭಾಗವಹಿಸುವುದಿಲ್ಲ ಎಂದು ಪಾರ್ಟಿ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದರು. ಟಿವಿ ಚ್ಯಾನೆಲ್/ಪತ್ರಕರ್ತರ ಸಂವಾದ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಪ್ರತಿನಿಧಿಗಳನ್ನು ಕರೆಯಬೇಡಿ ಎಂದು ಸುರ್ಜೇವಾಲ್ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.

ಲೋಕಸಭಾ ಚುನಾವಣಾ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜೀನಾಮೆ ನೀಡಲು ಸಜ್ಜಾಗಿದ್ದು ಪಾರ್ಟಿ ಅನಿಶ್ಚಿತತೆಯಲ್ಲಿದೆ. ರಾಹುಲ್‌ರ ರಾಜೀನಾಮೆ ಸಹಿತ ವಿಷಯಗಳು ಮಾಧ್ಯಮಗಳ ಊಹಾಪೋಹಗಳಾಗಿ ಪ್ರಚಾರಕ್ಕೆ ಬಂದ ಹಿನ್ನೆಲೆಯಲ್ಲಿ ಒಂದು ತಿಂಗಳ ಮಾಧ್ಯಮ ಚರ್ಚೆಗೆ ನಿಷೇಧವನ್ನು ಪಾರ್ಟಿ ನಿರ್ದೇಶಿಸಿತು ಎಂದು ಮೂಲಗಳು ತಿಳಿಸಿವೆ.