ತಿರುವನಂತಪುರಂ,ಮೇ 30: ಈ ಬಾರಿ ಕೇರಳದಲ್ಲಿ ಮಳೆ ಸ್ವಲ್ಪ ತಡವಾಗಿ ಪ್ರವೇಶಿಸುವ ಸಾಧ್ಯತೆಯಿದ್ದು ಜೂನ್ ಮೊದಲ ವಾರದ ನಂತರವೇ ಮಳೆ ಸುರಿಯಬಹುದು ಎಂದು ಹವಾಮಾನ ನಿರೀಕ್ಷಣಾ ಕೇಂದ್ರಗಳು ತಿಳಿಸಿವೆ. ಕಳೆದ ವರ್ಷ ಮೇ 29ಕ್ಕೆ ಮತ್ತು 2017 ಮೇ 30ಕ್ಕೆ ಕೇರಳದಲ್ಲಿ ಮಳೆ ಬಂದಿತ್ತು. ಇದೇ ರೀತಿಯಲ್ಲಿ ಮಳೆ 2016ರಲ್ಲಿ ತಡವಾಗಿ ಬಂದಿತ್ತು. ಜೂನ್ ಎಂಟಕ್ಕೆ ಆಗ ಮಳೆ ಬಂದಿರುವುದು. ಈಶಾನ್ಯ ಮಳೆ ಮಾರುತಗಳು ಬಂಗಾಳ ಕೊಲ್ಲಿಗೆ ಬಂದಾಯಿತು. ಕೇರಳಕ್ಕೆ ಹತ್ತು ದಿವಸದಲ್ಲಿ ಅದು ತಲುಪಲುಬೇಕು. ಕೇರಳದಲ್ಲಿ ಮಳೆ ಶುರುವಾಗುವುದರೊಂದಿಗೆ ಕರ್ನಾಟಕದ ಕರಾವಳಿಯಲ್ಲಿ ಮಳೆ ಆಗುವುದು ರೂಢಿ ಎಂದು ಹವಾಮಾನ ನಿರೀಕ್ಷಣಾ ಕೇಂದ್ರಗಳು ತಿಳಿಸಿವೆ.












