ಸನ್ಮಾರ್ಗ ವಾರ್ತೆ
ಮಹಾರಾಷ್ಟ್ರದ ಮುಸ್ಲಿಂ ಯುವತಿ ಮೊಟ್ಟ ಮೊದಲ ಬಾರಿ ಐಎಎಸ್ ಅಧಿಕಾರಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಬಾರಿಯ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 142ನೇ ರ್ಯಾಂಕ್ ಗಳಿಸುವ ಮೂಲಕ ಭಾರತೀಯ ಆಡಳಿತಾತ್ಮಕ ಸೇವೆಗೆ ಸೇರ್ಪಡೆಯಾದ ಮಹಾರಾಷ್ಟ್ರದ ಮೊಟ್ಟ ಮೊದಲ ಮುಸ್ಲಿಂ ಯುವತಿ ಎಂಬ ಗರಿಮೆಗೆ ಪಾತ್ರವಾಗಿದ್ದಾರೆ.
ಆದಿ ಬಾ ಅನಮ್ ಎಂಬ ಯುವತಿಯ ತಂದೆ ಅಶ್ಪಾಕ್ ಶೇಖ್ ಅವರು ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದಾರೆ. ಇವರು ಹತ್ತನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದರೂ ತನ್ನ ಮಗಳಿಗೆ ಉನ್ನತ ಶಿಕ್ಷಣವನ್ನು ದೊರಕುವಂತೆ ಮಾಡಿ ಎಲ್ಲರ ಶ್ಲಾಘನೆಗೆ ಪಾತ್ರವಾಗಿದ್ದಾರೆ.
10ನೇ ತರಗತಿಯಲ್ಲಿ 98 ಅಂಕವನ್ನು ಪಡೆದಿದ್ದ ಆದಿಬ ಅವರು 12ನೇ ತರಗತಿಯ ವಿಜ್ಞಾನ ವಿಷಯದಲ್ಲಿ ಶೇಕಡ 97 ರಷ್ಟು ಅಂಕಗಳನ್ನು ಪಡೆದಿದ್ದರು.
ಪದವಿ ಪೂರೈಸಿದ ನಂತರ ಬಹುತೇಕ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟತೆಯ ಕೊರತೆಗೊಳಾಗುತ್ತಾರೆ. ಆದರೆ 12ನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ನಾನು ನಾಗರಿಕ ಸೇವಾ ಪರೀಕ್ಷೆಗಳ ಮೇಲೆ ಕಣ್ಣು ನೆಟ್ಟಿದ್ದೆ. ನಾನು ಏನಾಗಬೇಕು ಎಂಬುದು ನನಗೆ ತಿಳಿದಿತ್ತು ಹಾಗೂ ನಾನು ಆ ದಿಕ್ಕಿನಲ್ಲಿ ಕೆಲಸ ಮಾಡಿದೆ ನನ್ನ ಚಿಕ್ಕಪ್ಪ ನನ್ನನ್ನು ಐಎಎಸ್ ಅಧಿಕಾರಿಗಳಿಗೆ ಪರಿಚಯಿಸಿದರು. ಅವರಂತೆ ಆಗಬೇಕು ಎಂಬುದು ನನಗೆ ಆಸೆಯಾಯಿತು. ಐಎಎಸ್ ಅನ್ನು ಇದೀಗ ನಾನು ನನಸಾಗಿಸಿಕೊಂಡಿದ್ದೇನೆ ಹಾಗೂ ಅದನ್ನು ಸಾಧಿಸಲು ದಣಿವರಿಯದೆ ಕೆಲಸ ಮಾಡಿದ್ದೇನೆ ಎಂದಾಕೆ ಹೇಳಿದ್ದಾರೆ.












