ಅಮೆರಿಕದೊಂದಿಗಿನ ಅಣು ಒಪ್ಪಂದದಿಂದ ಹಿಂದೆ ಸರಿಯುವ ಬೆದರಿಕೆ ಹಾಕಿದ ರಷ್ಯಾ!

0
560

ಮಾಸ್ಕೊ,ಜೂ.7: ಅಮೆರಿಕದೊಂದಿಗಿನ ನ್ಯೂಸ್ಟಾರ್ಟ್ ಅಣು ಒಪ್ಪಂದದಿಂದ ಹಿಂದೆ ಸರಿಯುವುದಾಗಿ ರಷ್ಯಾ ಪರೋಕ್ಷ ಬೆದರಿಕೆ ಹಾಕಿದೆ.ಸೇಂಟ್ ಪೀಟರ್ಸ್‍‌ಬರ್ಗ್‌ನ ಆರ್ಥಿಕ ಫಾರಂನಲ್ಲಿ ಮಾತಾಡಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಮೆರಿಕಕ್ಕೆ ತೀಕ್ಷ್ಣ ಎಚ್ಚರಿಕೆ ನೀಡಿದರು.

“ಒಪ್ಪಂದವನ್ನು ವಿಸ್ತರಿಸಲು ನಾವು ಸಿದ್ಧ ಎಂದು ಹಲವು ಬಾರಿ ಹೇಳಿಯಾಗಿದೆ. ಯಾರಿಗೂ ಇಷ್ಟವಿಲ್ಲದಿದ್ದರೆ ನಮಗೂ ಇಷ್ಟವಿಲ್ಲ” ಎಂದು ಅವರು ಹೇಳಿದರು.ಅಣು ಆಯುಧಗಳ ಉಪಯೋಗವನ್ನು ಕಡಿಮೆ ಮಾಡುವುದಕ್ಕಾಗಿ 2010ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ರಷ್ಯಾದ ಅಧ್ಯಕ್ಷ ದಿಮಿತ್ರಿ ಮೆಡ್ವಡೇವ್‍ರು ಅಣು ಒಪ್ಪಂದಕ್ಕೆ ಸಹಿ ಹಾಕಿದ್ದರು. ಒಪ್ಪಂದದ ಕಾಲಾವಧಿ 2021ರಲ್ಲಿ ಕೊನೆಗೊಳ್ಳುತ್ತಿದೆ. ಅಮೆರಿಕಕ್ಕೆ ಒಪ್ಪಂದ ವಿಸ್ತರಿಸುವ ಬಯಕೆ ಇಲ್ಲ ಎಂದು ರಷ್ಯಾ ಆರೋಪಿಸಿದೆ.