ಶ್ರೀಲಂಕಾದಲ್ಲಿ ಮುಸ್ಲಿಂ ಪ್ರಭಾಕರನ್ ಹುಟ್ಟಿಕೊಳ್ಳುವ ಸಾಧ್ಯತೆ ಇದೆ- ಅಧ್ಯಕ್ಷ ಸಿರಿಸೇನಾ

0
450

ಕೊಲೊಂಬೊ,ಜೂ.10: ಶ್ರೀಲಂಕಾ ಶಿಥಲವಾಗದಿರಲು ಎಲ್ಲ ಸಮುದಾಯಗಳು ಒಗ್ಗಟ್ಟಿನಲ್ಲಿ ಬದುಕುವುದು ಅಗತ್ಯವೆಂದು ಶ್ರೀಲಂಕದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹೇಳಿದರು. ಇಲ್ಲದಿದ್ದರೆ ಓರ್ವ ಮುಸ್ಲಿಂ ಪ್ರಭಾಕರನ್ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಅವರು ಶ್ರೀಲಂಕನ್ ಸಮುದಾಯಕ್ಕೆ ಎಚ್ಚರಿಕೆ ನೀಡಿದರು. ಈಸ್ಟರ್ ದಿನದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ದೇಶವನ್ನು ಒಡೆಯುವ ಪ್ರಯತ್ನಗಳನ್ನು ಧಾರ್ಮಿಕ ನಾಯಕರು ಮತ್ತು ರಾಜಕೀಯ ನಾಯಕರು ಮಾಡುತ್ತಿದ್ದಾರೆ. ಎಲ್‍ಟಿಟಿಇಯ ಕೋಟೆಯಾದ ಮುಲೈತ್ತೀವ್‍ನಲ್ಲಿ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತಾಡುತಿದ್ದರು. ಮುಸ್ಲಿಂ ಪ್ರಭಾಕರನ್‍ರು ಹುಟ್ಟಿಕೊಳ್ಳಲು ಆಸ್ಪದ ಕೊಡಬೇಡಿ. ಅಂತಹದೊಂದು ಪರಿಸ್ಥಿತಿ ನಿರ್ಮಾಣವಾದರೆ ದೇಶ ಪುನಃ ಯುದ್ಧಕ್ಕೆ ತೆರಳಬೇಕಾಗುತ್ತದೆ ಎಂದು ಸಿರಿಸೇನೆ ಹೇಳಿದರು. ತಮಿಳ್ ಹುಲಿಗಳು ಮತ್ತು ಲಂಕನ್ ಸೇನೆಯ ನಡುವೆ ಬಹು ದೀರ್ಘಕಾಲದಲ್ಲಿ ನಡೆದ ಯುದ್ಧ 2009ರಲ್ಲಿ ಪ್ರಭಾಕರನ್ ಹತ್ಯೆಯೊಂದಿಗೆ ಕೊನೆಯಾಯಿತು.