ವಾಸಸ್ಥಳಕ್ಕೆ ಸಂಬಂಧಿಸಿದ ವಿವಾದ: ಇಸ್ರೇಲ್‍ನಲ್ಲಿ ಭಾರತೀಯನ ಹತ್ಯೆ

0
598

ಟೆಲ್‍ಅವೀವ್,ಜೂ.10: ಇಸ್ರೇಲಿನ ಟೆಲ್‍ಅವೀವ್‍ನಲ್ಲಿ ಭಾರತದ ನಲ್ವತ್ತು ವರ್ಷದ ವ್ಯಕ್ತಿಯೊಬ್ಬರನ್ನು ಇರಿದು ಕೊಲೆ ಮಾಡಲಾಗಿದೆ. ಮೃತರು ಕೇರಳದ ಜೆರೊಂ ಅರ್ಥರ್ ಫಿಲಿಫ್ ಎಂದು ಗುರುತಿಸಲಾಗಿದ್ದು ನೇವ್ ಶಾನನ್ ಸ್ಟ್ರೀಟ್‍ನಲ್ಲಿರುವ ತಮ್ಮ ವಾಸಸ್ಥಳಕ್ಕೆ ಸಂಬಂಧಿಸಿದ ವಿವಾದ ಕೊಲೆಯಲ್ಲಿ ಕೊನೆಗೊಂಡಿತು ಎಂದು ವರದಿ ತಿಳಿಸಿದೆ.

ಗಲಾಟೆಯ ವೇಳೆ ಇರಿತಕ್ಕೊಳಗಾದ ಜೆರೋಂರನ್ನು ಆಸ್ಪತ್ರೆಗೆ ದಾಖಲಿಸಿದರೂ ರಕ್ಷಿಸಲು ಆಗಿಲ್ಲ. ಗಾಯಾಳು ಇನ್ನೋರ್ವ ಕೇರಳದ ವ್ಯಕ್ತಿ ಪೀಟರ್ ಸೇವಿಯರ್(60) ಇಚ್ಚಿಲೋವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿ ಭಾರತದ ಪ್ರಜೆಗಳಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇರಿತಕ್ಕೊಳಗಾದವರು ಒಂದೇ ಅಪಾರ್ಟ್‍ಮೆಂಟ್ ನಿವಾಸಿಗಳೆಂದು ಪೊಲೀಸರು ತಿಳಿಸಿದರು.