ಸೌದಿ ಅರೇಬಿಯ: ಫ್ಯಾಮಿಲಿ ವಿಸಿಟ್ ವೀಸಾ ನವೀಕರಣಕ್ಕೆ ಆರೋಗ್ಯ ಇನ್ಶೂರೆನ್ಸ್ ಕಡ್ಡಾಯ

0
434

ಜಿದ್ದಾ,ಜೂ.10: ಫ್ಯಾಮಿಲಿ ವಿಸಿಟ್ ವೀಸಾ ನವೀಕರಣಕ್ಕೆ ಆರೋಗ್ಯ ಇನ್ಶೂರೆನ್ಸ್ ಕಡ್ಡಾಯವಾಗಿದೆ ಎಂದು ಪಾಸ್ಪೋರ್ಟ್ ನಿರ್ದೇಶನಾಲಯ ಪುನರುಚ್ಚರಿಸಿದೆ. ಈ ವಿವರವನ್ನು ಟ್ವಿಟರ್ ಮೂಲಕ ತಿಳಿಸಿದ್ದು ಅಬ್ಸೀರ್ ಪೋರ್ಟಲ್ ಮೂಲಕ ಫ್ಯಾಮಿಲಿ ವಿಸಿಟ್ ವೀಸಾ ನವೀಕರಣಕ್ಕೆ ಅರ್ಜಿ ಹಾಕುವವರು ಆರೋಗ್ಯ ಇನ್ಶೂರೆನ್ಸ್ ದೃಢಪಡಿಸುವುದು ಅಗತ್ಯವೆಂದು ಈ ಮೊದಲೇ ಪಾಸ್‍ಪೋರ್ಟ್ ನಿರ್ದೇಶನಾಲಯ ತಿಳಿಸಿತ್ತು. ಇನ್ಶೂರೆನ್ಸ್ ದೃಢಪಡಿಸುವಿಕೆಗೆ ರಾಷ್ಟ್ರದ ಸೆಂಟರ್ ಮತ್ತು ಕೊ-ಆಪರೇಟಿವ್ ಹೆಲ್ತ್ ಇನ್ಶೂರೆನ್ಸ್ ಕೌನ್ಸಿಲ್‍ನೊಡನೆ ಸಹಕರಿಸಿ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸೌದಿ ಅರೇಬಿಯದ ಪಾಸ್‍ಪೋರ್ಟ್ ನಿರ್ದೇಶನಾಲಯ ತಿಳಿಸಿತು.