ಸನ್ಮಾರ್ಗ ವಾರ್ತೆ
ಮೊಹರಂ ಮೆರವಣಿಗೆಯಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ವೇಳೆ ಇಬ್ಬರು ಮುಸ್ಲಿಮರ ಮೇಲೆ ಹಲ್ಲೆ ನಡೆಸಿದ ಇಬ್ಬರು ಶಂಕಿತರನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಮೊಹರಂ ಮೆರವಣಿಗೆಯಿಂದ ಹಿಂತಿರುಗುತ್ತಿದ್ದ ಮುಸ್ಲಿಮರ ಮೇಲೆ ದೊಣ್ಣೆ ಮತ್ತು ನಾಡಪಿಸ್ತೂಲಿನಿಂದ ಗ್ರಾಮಸ್ಥರು ಹಲ್ಲೆ ನಡೆಸಿದರು ಎಂದು ವರದಿಯಾಗಿತ್ತು.
ಮೆರವಣಿಗೆಯ ವೇಳೆ ಮನಿಷ್ ಯಾದವ್ ಎಂಬವರ ಮನೆಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕದ ವೈರ್ ಕಡಿದು ಹೋಗಿತ್ತು. ಇದನ್ನೇ ನೆಪವಾಗಿಸಿಕೊಂಡು ಈ ಮೆರವಣಿಗೆಯಲ್ಲಿ ಭಾಗಿಯಾದವರು ಹಿಂತಿರುಗುತ್ತಿದ್ದಾಗ ಅವರನ್ನು ನಿಲ್ಲಿಸಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಹಲ್ಲೆಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದರು. 23 ವರ್ಷದ ಸಾಧು ಯಾದವ್ ಮತ್ತು 21 ವರ್ಷದ ವಿಶಾಲ್ ಯಾದವ್ ನನ್ನು ಪೊಲೀಸರು ಬಂಧಿಸಿದ್ದಾರೆ. ನಾಡ ಪಿಸ್ತೂಲ್ ಕೂಡ ಇವರಿಂದ ವಶಪಡಿಸಿಕೊಳ್ಳಲಾಗಿದೆ.












