ಸನ್ಮಾರ್ಗ ವಾರ್ತೆ
ಸೌದಿ ವರ್ಕ್ ಪರ್ಮಿಟ್ಗಳಲ್ಲಿ ಭಾರಿ ಬದಲಾವಣೆಯನ್ನು ತರಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉದ್ಯೋಗ ನಷ್ಟವಾಗುವ ಭೀತಿಯೂ ಎದುರಾಗಿದೆ.
ಕೆಲಸದ ಕೌಶಲ್ಯ ಅಥವಾ ಸ್ಕಿಲ್ನ ಆಧಾರದಲ್ಲಿ ವಿದೇಶಿ ಕೆಲಸಗಾರರನ್ನು ಅತ್ಯುನ್ನತ ಪರಿಣತಿ, ಸ್ಕಿಲ್ ಮತ್ತು ಮೂಲಭೂತ ತಿಳುವಳಿಕೆ ಎಂಬ ಹೆಸರಲ್ಲಿ ಮೂರು ವಿಭಾಗಗಳಾಗಿ ವಿಭಜಿಸಲಾಗಿದೆ. ಇನ್ನು ಮುಂದೆ ವಿದೇಶಿ ಕೆಲಸಗಾರರನ್ನು ಈ ಮೂರು ವಿಭಾಗಗಳಲ್ಲಿ ವಿಭಜಿಸಿ ಅವರನ್ನು ದೇಶದೊಳಗೆ ಕರೆಸಿಕೊಳ್ಳಲಾಗುವುದು ಎಂದು ಸೌದಿ ಅರೇಬಿಯಾ ತಿಳಿಸಿದೆ.
ಎರಡು ಘಟ್ಟಗಳಲ್ಲಿ ಈ ಹೊಸ ನಿಯಮವನ್ನು ಜಾರಿಗೆಗೊಳಿಸಲಾಗುತ್ತದೆ ಈ ವರ್ಷದ ಜುಲೈ ಆರರಿಂದ ಆರಂಭವಾದ ಮೊದಲ ಘಟ್ಟದಲ್ಲಿ ಈಗಾಗಲೇ ಸೌದಿಯಲ್ಲಿರುವ ಕೆಲಸಗಾರರ ವರ್ಕ್ ಪರ್ಮಿಟ್ಗಳನ್ನು ವೇತನ ಮತ್ತು ಕೆಲಸದ ಆಧಾರದಲ್ಲಿ ಹೋಲಿಕೆ ಮಾಡಲಾಗುತ್ತದೆ.
ಆಗಸ್ಟ್ ಮೂರರಿಂದ ಆರಂಭವಾಗುವ ಎರಡನೇ ಘಟ್ಟದಲ್ಲಿ ಸೌದಿಗೆ ಹೊಸದಾಗಿ ತಲುಪುವವರಿಗೆ ಇರುವ ವರ್ಕ್ ಪರ್ಮಿಟ್ಗಳನ್ನು ಪರಿಶೀಲಿಸಲಾಗುವುದು. ನಿಗದಿತ ಮಾನದಂಡಗಳನ್ನು ಪಾಲಿಸಿ, ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ವರ್ಗಾವಣೆಗೊಳ್ಳಲು ಈ ಮಾನದಂಡದ ಮೂಲಕ ಅವಕಾಶ ನೀಡಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಸಚಿವಾಲಯದ ಕೀವ್ ಫ್ಲಾಟ್ ಫಾರ್ಮ್ ನ ಉದ್ಯೋಗ ವಿಭಾಗದಲ್ಲಿ ಲಭ್ಯವಿದೆ.
ಉನ್ನತ ಸ್ಕಿಲ್ ಹೊಂದಿದ ವಿಭಾಗ, ಸ್ಕಿಲ್ ವಿಭಾಗ ಮತ್ತು ಮೂಲಭೂತ ತಿಳುವಳಿಕೆ ಇರುವ ವಿಭಾಗ ಎಂದು ವರ್ಕ್ ಪರ್ಮಿಟ್ನಲ್ಲಿ ನಮೂದಿಸಲಾಗುವುದು. ಪ್ರತಿ ವಿಭಾಗಕ್ಕೂ ಬೇರೆ ಬೇರೆ ಮಾನದಂಡಗಳನ್ನು ನಿಶ್ಚಯಿಸಲಾಗಿದೆ. ಯಾವ ವಿಭಾಗದಲ್ಲಿ ಒಳಪಟ್ಟವರು ಯಾವ ವಿದ್ಯಾರ್ಹತೆಯನ್ನು ಹೊಂದಿರಬೇಕು, ಎಷ್ಟು ವರ್ಷಗಳ ಪ್ರಾಯೋಗಿಕ ತಿಳುವಳಿಕೆ ಇರಬೇಕು ವೇತನ ಎಷ್ಟು ಇರಬೇಕು ಪ್ರೊಫೆಷನಲ್ ಪರಿಣತಿ ಇತ್ಯಾದಿ ಮಾನದಂಡಗಳ ಆಧಾರದಲ್ಲಿ ವಿವಿಧ ವಿಭಾಗಗಳಲ್ಲಿ ಬದಲಾವಣೆ ಮಾಡಲಾಗುವುದು.
ಉನ್ನತ ಪರಿಣತಿ ವಿಭಾಗ ಎಂಬ ಪಟ್ಟಿಯಲ್ಲಿ ಮ್ಯಾನೇಜರ್ ಸ್ಪೆಷಲಿಸ್ಟ್ ಅಸಿಸ್ಟೆಂಟ್ ಟೆಕ್ನಿಷಿಯನ್ ಮತ್ತು ಅಸಿಸ್ಟೆಂಟ್ ಸ್ಪೆಷಲಿಸ್ಟ್ ಗಳು ಒಳಪಡುತ್ತಾರೆ. ಸೌದಿ ಏಕೀಕೃತ ಉದ್ಯೋಗ ವರ್ಗೀಕರಣ ನಿಯಮಾವಳಿ ಪ್ರಕಾರ ನಿಗದಿಪಡಿಸಿರುವ ಅಕ್ರಡಿಟೇಶನ್ ಪ್ರೋಗ್ರಾಮ್ ಪಾಯಿಂಟ್ ಸಿಸ್ಟಮ್ ಅನ್ನು ಈ ವಿಭಾಗದಲ್ಲಿ ಇರುವವರು ಪಾಸಾಗಬೇಕಾಗಿದೆ.
ಸ್ಕಿಲ್ ವಿಭಾಗದಲ್ಲಿ ಸೇರ್ಪಡೆಗೊಂಡವರು ಸೌದಿ ಉದ್ಯೋಗ ವರ್ಗೀಕರಣ ನಿಯಮದ ನಾಲ್ಕರಿಂದ 8ರವರೆಗಿನ ವಿಭಾಗಗಳಲ್ಲಿ ಒಳಪಡುತ್ತಾರೆ.
ಮೂಲಭೂತ ತಿಳುವಳಿಕೆ ವಿಭಾಗದಲ್ಲಿ ಸೇರ್ಪಡೆಗೊಳ್ಳುವವರು ಏಕೀಕರಣ ನಿಯಮದ 9 ನೇ ಗುಂಪಿನಲ್ಲಿ ಸ್ಥಾನ ಪಡೆಯುತ್ತಾರೆ. ಈ ವಿಭಾಗದಲ್ಲಿರುವವರು 60 ವರ್ಷವನ್ನು ದಾಟಿರಬಾರದು.
ಇದು ಭಾರತೀಯರು ಸೇರಿದಂತೆ ವಿದೇಶಿ ಉದ್ಯೋಗಿಗಳಿಗೆ ಭಾರಿ ತೊಂದರೆಯನ್ನು ಕೊಡಬಹುದು ಎಂದು ಅಂದುಕೊಳ್ಳಲಾಗಿದೆ. ಈ ಬಗ್ಗೆ ಅನಿವಾಸಿ ಭಾರತೀಯರ ನಡುವೆ ಚರ್ಚೆಗಳು ನಡೆಯುತ್ತಿವೆ. ಈ ಮೊದಲು ಉದ್ಯೋಗಿಗಳಿಗೆ ಈ ಪ್ರಾಯಮಿತಿ ಇರಲಿಲ್ಲ. ಇದೀಗ ಹೊಸದಾಗಿ ಈ ಪ್ರಾಯಮಿತಿಯನ್ನು ಸೇರಿಸಲಾಗಿದೆ.












