ಗಾಝಾಕ್ಕೆ 7166 ಟನ್ ಆಹಾರ ವಸ್ತುಗಳನ್ನು ಕಳುಹಿಸಿಕೊಟ್ಟ ಯುಎಇ

0
498

ಸನ್ಮಾರ್ಗ ವಾರ್ತೆ

ಗಾಝಾದಲ್ಲಿ ಸಂಕಷ್ಟ ಅನುಭವಿಸುತ್ತಿರುವವರಿಗೆ 7166 ಟನ್ ಆಹಾರ ವಸ್ತುಗಳನ್ನು ಯುಎಇ ಕಳುಹಿಸಿಕೊಟ್ಟಿದೆ. ಬೃಹತ್ ಹಡಗಾದ ಖಲೀಫಾ ಮೂಲಕ ಆಹಾರ ವಸ್ತುಗಳನ್ನು ಕಳುಹಿಸಿಕೊಟ್ಟಿದೆ. ಅಬುದಾಬಿಯ ಖಲೀಫಾ ಬಂದರಿನಿಂದ ಈ ಹಡಗು ಹೊರಟಿದೆ.

4,372 ಟನ್ ಆಹಾರ ಧಾನ್ಯಗಳು,1433 ಟೆಂಟ್ಗಳ ಸಹಿತ ಮನೆ ನಿರ್ಮಾಣಕ್ಕೆ ಬೇಕಾದ ವಸ್ತುಗಳು, 860 ಟನ್ ಮೆಡಿಕಲ್ ವಸ್ತುಗಳು, ಬಟ್ಟೆ ಹಾಸಿಗೆ ಹೈಜಿನ್ ಕಿಟ್ ಗಳು ಸಹಿತ ವಿವಿಧ ವಸ್ತುಗಳನ್ನು ಹಡಗಿನಲ್ಲಿ ಕೊಂಡೊಯ್ಯಲಾಗಿದೆ.

ಇದೇ ವೇಳೆ ಗಾಝಾದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಬಹು ಉಪಯೋಗಿ ಎಂದು ಹೇಳಬಹುದಾದ ಫೀಲ್ಡ್ ಆಸ್ಪತ್ರೆಗಳನ್ನು ಕೂಡ ತಲುಪಿಸಲಾಗುವುದು. ಈ ಆಸ್ಪತ್ರೆಯಲ್ಲಿ 400 ರೋಗಿಗಳಿಗೆ ಚಿಕಿತ್ಸೆ ನೀಡುವ ಸೌಕರ್ಯ ಇದೆ. ಅದರ ಜೊತೆಗೆ 16 ಆಂಬುಲೆನ್ಸ್ ಗಳನ್ನು ಕೂಡ ತಲುಪಿಸಲಾಗುವುದು. ಗಾಝಾದ ಜನರಿಗೆ ಕುಡಿಯುವ ಶುದ್ಧ ನೀರನ್ನು ತಲುಪಿಸುವುದಕ್ಕಾಗಿ 20 ಟ್ಯಾಂಕಗಳನ್ನು ತಲುಪಿಸಲಾಗುವುದು.

ಈ ಹಡಗು ಈಜಿಪ್ಟಿನ ಹರೀಶ್ ಬಂದರ್ ಗೆ ತಲುಪಿದ ಬಳಿಕ ಅಲ್ಲಿಂದ ಟ್ರಕ್ ಗಳ ಮೂಲಕ ಈ ವಸ್ತುಗಳನ್ನು ತಲುಪಿಸಲಾಗುವುದು. 2023ರಿಂದ ಗಾಝಾ ಕ್ಕೆ ನಿರಂತರ ಸಹಾಯವನ್ನು ಯು ಎ ಇ ನೀಡುತ್ತಾ ಬಂದಿದೆ.