✍️ ಅರಫಾ ಮಂಚಿ
ಇದೊಂದು ಘಟನೆಯ ದೃಶ್ಯ.
ಮಗಳೇ ನಿನಗೆ ತಿನ್ನಲು ಕೊಡುವುದಕ್ಕೆ ನನ್ನಲ್ಲಿ ಏನೂ ಇರಲಿಲ್ಲ ಎಂದು ಅಳುತ್ತಿದ್ದರು. ಅವರ ಅತ್ತಿತ್ತ ಅಷ್ಟೂ ಮಹಿಳೆಯರು ಇದ್ದರೂ ಎಲ್ಲರಿಗೂ ಹಸಿವೇ. ಗಾಝಾದ ಹಸಿವಿನ ವಿಚಾರ ಹೇಗಿದೆ ಎಂದರೆ ಹಸಿವು ಅತಂತ್ರ ಸ್ಥಿತಿಯನ್ನು ಇಂದು ಇಡೀ ಗಾಝಾದ ಜನ ಎದುರಿಸುತ್ತಿದ್ದಾರೆ. ಆದ್ರೂ ಏನಂತೆ, ಜಗತ್ತು ಇಸ್ರೇಲಿನ ಈ ಕ್ರೂರ ಕೃತ್ಯವನ್ನು ನೋಡಿ ಮೂಕವಾಗಿ ನೋವು ಅನುಭವಿಸುತ್ತಿದೆ. ಇವರಿಗೆ ನೋವು, ಅವರಿಗೆ ಹಸಿವು, ಸಾವು. ಪೋಷಕಾಹಾರ ಕೊರತೆಯಿಂದ ಮೃತಪಟ್ಟ ರಸಾನ್ ಅಬೂ ಝಾಹಿರ್ ಎಂಬ ಬಾಲಕಿಯ ತಾಯಿಯ ಆಕ್ರಂದನವನ್ನು ಆರಂಭದಲ್ಲಿ ಇಲ್ಲಿ ಸೂಚಿಸಲಾಗಿದೆ. ಪೋಷಕಾಹಾರ ಕೊರತೆಯು ಗಾಝದಲ್ಲಿ ಮಕ್ಕಳನ್ನು ಮಹಿಳೆಯರನ್ನು ಸಹಿತ ದೊಡ್ಡವರನ್ನು ಮೂಳೆಯ ಗೂಡು ಗಳನ್ನಾಗಿ ಮಾಡುತ್ತಿದೆ. ಅದರ ಚಿತ್ರವನ್ನು ನೀವು ಸಾಮಾ ಜಿಕ ಮಾಧ್ಯಮದಲ್ಲಿ ನೋಡಿದ್ದೀರಿ. ಈಗ ಹೀಗೆ ಪೌಷ್ಠಿಕಾಹಾರ ಸಿಗದೆ ಮೃತಪಟ್ಟ ಮಕ್ಕಳಲ್ಲಿ ಬಾಲಕಿ ರಸಾನ್ ಕೂಡ ಒಬ್ಬಳು. ಅವರ ತಾಯಿ ಅವಳಿಗೆ ಆಹಾರ ಕೊಡಲಾಗದೇ ಇದ್ದುದಕ್ಕೆ ಅತ್ತೂ ಅತ್ತೂ ಸೋತು ಹೋದರು.
ಗಾಝಾದಲ್ಲಿ ಪೋಷಕಾಹಾರ ಕೊರತೆಯಿಂದ ಈವರೆಗೆ 115ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ಮೆಡಿಕಲ್ ಸಹಾಯ ಕೂಡ ಇವರಿಗೆ ನಿಷೇಧಿಸಲಾಗಿದೆ. ಆರೋಗ್ಯ ಸಮಸ್ಯೆ ಇರುವ 580 ಮಕ್ಕಳು ಗಾಝದ ಆಸ್ಪತ್ರೆಯಲ್ಲಿದ್ದಾರೆ ಎಂದು ವೈದ್ಯರು ಹೇಳುತ್ತಿದ್ದಾರೆ. ಜಗತ್ತಿನ ಮುಂದೆ ಗಾಝಾದ ಮಕ್ಕಳ ಸಾವು ಹಸಿವುಗಳು ಇದ್ದರೂ ಇಸ್ರೇಲಿಗೆ ಆಯುಧ ತಲುಪಿಸಲು ಅವಸರಿಸುವವರಿಗೆ ಈ ದಾರುಣ ಸ್ಥಿತಿ ಕಣ್ಣಿಗೆ ಕಾಣುವುದೇ ಇಲ್ಲ. ಆಹಾರ ತಲುಪಿಸುವ ಬಗ್ಗೆ ಚಿಂತೆ ಇಲ್ಲ. ಈಗ ಗಾಝಾದ ಮಕ್ಕಳ ಸ್ಥಿತಿ ಬಗ್ಗೆ ಯುರೋಪಿಯನ್ ಯೂನಿಯನ್ ಮುನ್ನೆಚ್ಚರಿಕೆ ನೀಡಿದೆ. ತದನಂತರ ಅಮೆರಿಕದ ಮಧ್ಯಪ್ರಾಚ್ಯ ಪ್ರತಿನಿಧಿ ಸ್ಟೀವ್ ಮಿಟ್ಕೊ ಯುದ್ಧ ವಿರಾಮ ಚರ್ಚೆಗೆ ಮಧ್ಯಪ್ರಾಚ್ಯಕ್ಕೆ ಹೊರಟಿದ್ದಾರೆ ಎಂಬ ಸುದ್ದಿ ಬಂತು. ಅದರಿಂದ ಏನಾಗುತ್ತದೆ?
ಗಾಝವನ್ನು ಕ್ಷಾಮ ಪೀಡಿತ ಪ್ರದೇಶವೆಂದು ವಿಶ್ವಸಂಸ್ಥೆ ಯಾಕೆ ಘೋಷಿಸುತ್ತಿಲ್ಲ?
ಈ ಪ್ರಶ್ನೆಗೆ ಉತ್ತರ ಇಲ್ಲ. ಕ್ಷಾಮ ಪೀಡಿತ ಜಾಗ ಎಂದು ಘೋಷಿಲು ಪೂರಕವಾದ ಡೇಟ ಇಲ್ಲವಂತೆ. ಗಾಝಕ್ಕೆ ಹೋಗದಂತೆ ಇಸ್ರೇಲ್ ಕೆಲವು ಪತ್ರಕರ್ತರು ಮತ್ತು ಮಾನವ ಹಕ್ಕು ಕಾರ್ಯಕರ್ತರಿಗೆ ಸೂಚಿಸಿರುವುದರಿಂದ ಐಪಿಸಿ ವಿಶ್ಲೇಷಕರಿಗೆ ಫಸ್ಟ್ ಲುಕ್ ಡೇಟವನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ದತ್ತಾಂಶ ಇಲ್ಲ ಎಂಬುದು ಒಂದು ಸಬೂಬು. ಇದರಿಂದ ಗಾಝದ ಹಸಿವಿನ ಸ್ಥಿತಿಯನ್ನು ಬದಲಾಯಿಸಲಾಗದು. ಜಗತ್ತಿನಲ್ಲಿ ಸ್ಮಾರ್ಟ್ ಫೋನ್ ಎಲ್ಲಿಲ್ಲ ಹೇಳಿ, ಅದಕ್ಕೆ ಆಯ ಸಮಯದ ಘಟನೆಗಳು ಶೇರ್ ಆಗುತ್ತಿರುತ್ತವೆ. ಅದು ನಾಝಿ ಕನ್ಸಂಟ್ರೇಶನ್ ಕ್ಯಾಂಪಿನಿಂದ ಹೊರತೆಗೆದ ದೇಹಗಳನ್ನು ನೆನಪಿಸಿದ ಕೃಶ ದೇಹ ಗಳನ್ನು ನೆನಪಿಸುವಂತಹದ್ದು ಗಾಝ ದಿಂದ ವರದಿಯಾಗಿದೆ. ಈ ಭಯಾನಕ ಸ್ಥಿತಿ ಇಷ್ಟು ಕಣ್ಣಿಗೆಟಕಿದರೂ ವಿಶ್ವಸಂಸ್ಥೆ ಗಾಝವನ್ನು ಕ್ಷಾಮ ಪೀಡಿತ ಎಂದು ಘೊಷಿಸುವ ಮನಸ್ಸೇ ಮಾಡಿಲ್ಲ.
ಕ್ಷಾಮ ಘೋಷಿಸುವ ಐಪಿಸಿ ಮಾನ ದಂಡ ಯಾವುದು?:
ಈಗ ನೋಡಿ, ಒಂದು ಪ್ರದೇಶದಿಂದಲ್ಲಿ ಶೇ. 20 ಅಥವಾ ಅದಕ್ಕಿಂತ ಹೆಚ್ಚಿನ ಕುಟುಂಬಗಳು ತೀವ್ರ ಆಹಾರ ಕೊರತೆಯನ್ನು ಎದುರಿಸುತ್ತಿದ್ದಾರೆ. ಆಹಾರ ಪೂರೈಸಲು ಅಲ್ಲಿನ ಆಡಳಿತ ಅಸಮರ್ಥವಾಗಿದ್ದರೆ. ಶೇ. 30ರಷ್ಟು ಮಕ್ಕಳು ತೀವ್ರ ಅಪೌಷ್ಠಿಕತೆಗೆ ತುತ್ತಾಗಿದ್ದರೆ. ಹತ್ತು ಸಾವಿರ ಮಂದಿಯಲ್ಲಿ ಇಬ್ಬರಿಗಿಂತ ಹೆಚ್ಚು ಸಾವು ಸಂಭವಿಸಿದರೆ ಕ್ಷಾಮ ಘೋಷಿಸಬಹುದು. ಗಾಝ ಕಳೆದ ಜುಲೈ 5ಕ್ಕೆ ಈ ಹಂತವನ್ನು ದಾಟಿದೆ. ಆದರೆ ವಿಶ್ವಸಂಸ್ಥೆ ಗಾಝ ವನ್ನು ಕ್ಷಾಮ ಪೀಡಿತ ದೇಶ ಎಂದು ಘೋಷಿಸಿಲ್ಲ. ಗಾಝಕ್ಕೆ ಆಹಾರ ತಡೆದಿರುವ ಇಸ್ರೇಲ್ ವಿರುದ್ಧ ಪ್ರಸ್ತಾವ ಪಾಸು ಮಾಡಿದೆ.
ನೋವು ತುಂಬಿದ ಆಕ್ರಂದನ ಇದು:
ಗಾಝದಲ್ಲಿ ಹಸಿವಿನಿಂದ 20 ಲಕ್ಷ ಜನರು ಬಳಲುತ್ತಿದ್ದಾರೆ ಎಂದು ಅಲ್ ಖಸ್ಸಾಂ ಬ್ರಿಗೇಡ್ನ ಅಬೂ ಉಬೈದ ಹೇಳುತ್ತಿರುವ ವೀಡಿಯೊ ಕೂಡ ಇತ್ತೀಚೆಗೆ ಹೊರಬಂತು. ವಿಶ್ವಸಂಸ್ಥೆ ಕೂಡ ಗಾಝದ ಹಸಿವಿನ ಬಗ್ಗೆ ಪದೆ ಪದೇ ಎಚ್ಚರಿಸುತ್ತಿದೆ. ಪಾಶ್ಚಾತ್ಯರು ಬಿಡಿ ಅರಬರೇ ಕಿವುಡರಾಗಿರುವಾಗ ಈ ಅಸಹಾಯಕರನ್ನು ರಕ್ಷಿಸುವುದಕ್ಕೆ ಎಲ್ಲಿದೆ ಉಪಾಯ? ಗಾಝಾ ಕ್ಷಾಮ ಪೀಡಿತ ಜಾಗ ಎಂದು ಘೋಷಿಸಲು ವಿಶ್ವಸಂಸ್ಥೆಯೇ ಸಿದ್ಧವಿಲ್ಲ. ಇವರು ಹಸಿದು ಸಾಯಬೇಕೆಂದು ಇಸ್ರೇಲಿನಂತೆ ಜಗತ್ತಿನ ಬಹುತೇಕ ಆಡಳಿತಗಾರರು ಬಯಸಿದ್ದಾರೆ.
ವಾಸ್ತವದಲ್ಲಿ ಎಲುಗಳೇ ತುಂಬಿದ ಮಾಂಸವೇ ಇಲ್ಲದ ಇನ್ನೂ ಉಸಿರಾಡುತ್ತಿರುವವರ ಚಿತ್ರಗಳು ಗಾಝದಿಂದ ವರದಿಯಾಗುತ್ತಿವೆ. ಫೋಟೊ ನೋಡಿದ ಜನರು ಮಮ್ಮಲ ಮರುಗುತ್ತಿದ್ದಾರೆ. ವಿಶ್ವಸಂಸ್ಥೆಯದೇ ಫೆಲೆಸ್ತೀನ್ ನಿರಾಶ್ರಿತರ ಏಜೆನ್ಸಿ ಗಾಝದಲ್ಲಿ ಒಂದು ಮಿಲಿಯನ್ ಮಕ್ಕಳು ಹಸಿವಿನ ಅಪಾಯದಲ್ಲಿದ್ದಾರೆ ಎಂದು ಎಚ್ಚರಿಕೆ ನೀಡಿತ್ತು. ಆದರೆ ಕ್ಷಾಮವನ್ನು ವಿಶ್ವಸಂಸ್ಥೆ ಘೋಷಿಸಿಲ್ಲ. ಪ್ರಧಾನ ಕಾರ್ಯದರ್ಶಿ ಆಂಟನಿಯೊ ಗುಟರೆಸ್ ಹೀಗೆ ಯಾಕೆ ಮಾಡುತ್ತಿದ್ದಾರೆ?
ಕ್ಷಾಮ ಘೊಷಿಸಿದರೆ ಏನಾಗುತ್ತೆ?
ವಿಶ್ವಸಂಸ್ಥೆ ಆಹಾರ ಕ್ಷಾಮವನ್ನು ಘೋಷಿಸಿದಾಗ ಕ್ಷಾಮ ಪೀಡಿತ ಪ್ರದೇಶಕ್ಕೆ ಆಹಾರವನ್ನು ತಲುಪಿಸುವಂತೆ ಮಾಡುವುದು ಇತರ ದೇಶಗಳ ಹೊಣೆಯಾಗುತ್ತದೆ. ಯಾರು ಕೂಡ ಅಲ್ಲಿಗೆ ಆಹಾರ ಹೋಗದಂತೆ ತಡೆಯುವಂತಿಲ್ಲ. ತಡೆಯಲು ಮುಂದೆ ಬಂದವರನ್ನು ಬಿಡುವಂತಿಲ್ಲ. ಇಷ್ಟೆಲ್ಲ ಆಗಿಯೂ ಕ್ಷಾಮ ಘೋಷಿಸದ ವಿಶ್ವಸಂಸ್ಥೆ ತಪ್ಪು ಹೆಜ್ಜೆ ಇಟ್ಟಿದೆಯಾ?
ಹಸಿವು ಅಥವಾ ಗುಂಡುಗಳು ಫೆಲಸ್ತೀನಿಯರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಇಸ್ರೇಲಿನ ಗುಂಡುಗಳು ನಿಂತರೂ ಅವರಿಗೆ ಆಹಾರ ಸ್ವಯಂ ದುಡಿದು ಸಂಪಾದಿಸ ಬಹುದು. ದಿಗ್ಬಂಧ ತೆರೆವುಗೊಳಿಸಿ ದರೂ ಅವರೆಡೆಗೆ ಆಹಾರ ಹರಿದು ಬರುತ್ತದೆ.
ಗಾಝದ ಬಗ್ಗೆ ಇಸ್ರೇಲಿನ ಮೆಡಿಕಲ್ ಅಸೋಸಿಯೇಶನ್:
ಇಸ್ರೇಲಿನ ವೈದ್ಯರ ಸಂಘಟನೆ ಇಸ್ರೇಲ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ಮಾತಾಡತೊಡಗಿದೆ. ಆಸ್ಪತ್ರೆ ನಾಶ ಮಾಡುವುದು ಔಷಧ ಜೀವ ರಕ್ಷಕ ವಸ್ತುಗಳನ್ನು ನಿಷೇಧಿಸು ವುದು ಆಹಾರಕ್ಕಾಗಿ ಬರುವವರ ವಿರುದ್ಧ ಗುಂಡು ಹಾರಿಸಿ ಕೊಲ್ಲುತ್ತಿರುವುದನ್ನು ಮೆಡಿಕಲ್ ಎತಿಕ್ಸ್ ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ.
ಇಸ್ರೇಲ್ ಸೇನೆಯ ಚೀಫ್ ಆಫ್ ಸ್ಟಾಪ್ ಮೇಜರ್ ಜನರಲ್ ಇಯಾಲ್ ಸಮೀರ್, ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್ಗೆ ಐಎಂಎ ಪತ್ರ ಬರೆದಿದೆ. ಗಾಝದ ಜನರಿಗೆ ವೈದ್ಯಕೀಯ ಉಪಕರಣಗಳು, ಮೂಲಭೂತ ಮಾನವೀಯತೆಯ ವಾತಾವರಣ ದೃಢಪಡಿಸ ಬೇಕೆಂದು ಪತ್ರದಲ್ಲಿ ಹೇಳಲಾಗಿದೆ. ಐಎಂಎಯೊಂದಿಗೆ ಸಂಬಂಧ ವಿಚ್ಛೇದಿ ಸುವುದಾಗಿ ಬ್ರಿಟಿಷ್ ಮೆಡಿಕಲ್ ಅಸೋಸಯೇಶನ್(ಬಿಎಂಎ) ಇತ್ತೀಚೆಗೆ ನಿರ್ಧರಿಸಿತ್ತು. ಈ ಒತ್ತಡದ ಐಎಂಎ ಪತ್ರ ಬರೆಯಲು ಕಾರಣವಾಗಿದೆ.
ಆದರೆ ಈಗ:
ಗಾಝಾದ ಆರೋಗ್ಯ ಸೌಲಭ್ಯ ಸ್ಥಗಿತಗೊಂಡಿದೆ.
ಗಾಝಕ್ಕೆ 111 ಸಂಘಟನೆಗಳು ತುರ್ತಾಗಿ ಸಹಾಯವನ್ನು ತಲುಪಿಸಲು ರಂಗಕ್ಕೆ ಬಂದಿವೆ. ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್, ಆಸ್ಕೊಫಾಂ ಇಂಟರ್ ನ್ಯಾಶನಲ್, ಆಮ್ನಿಸ್ಟಿ ಸಂಘಟನೆಗಳು. ಗಾಝದ ಹೊರಗೆ ಇರುವ ವೇರ್ ಹೌಸ್ಗಳಲ್ಲಿ ಮತ್ತು ಗಾಝದ ಒಳಗೂ ಟನ್ಗಟ್ಟಲೆ ಆಹಾರ ಶುದ್ಧ ನೀರು, ಮದ್ದು ಇಂಧನ ಇದೆ. ನೆರವು ಸಂಘ ಟನೆಗಳನ್ನು ಗಾಝದೊಳಗೆ ಬರಲು ಬಿಡುವುದಿಲ್ಲ. ಬ್ರಿಟನ್ ಕೆನಡ ಸಹಿತ 29 ದೇಶಗಳ ವಿದೇಶ ಸಚಿವರು, ಸಾಮೂಹಿಕ ಕಗ್ಗೊಲೆ ನಡೆಸುವುದನ್ನು ನಿಲ್ಲಿಸಬೇಕೆಂದು ಪತ್ರ ಬರೆದಿದ್ದಾರೆ.
ನೋಡಿ,
ವಿಶ್ವ ಆಹಾರ ಕಾರ್ಯಕ್ರಮದ ಫೆಲಸ್ತೀನಿನ ಪ್ರತಿನಿಧಿ ಆಂಟೊಯಿನ್ ರೆನಾರ್ಡ್ ಗಾಝ ತೀವ್ರ ಹಸಿವನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ. ಗಾಝ ಮಾತ್ರ ಅಲ್ಲ ಜೆರುಸಲೇಂನಲ್ಲೇ ಒಂದು ಕೆಜಿ ಹಿಟ್ಟಿನ ಬೆಲೆ ನೂರು ಡಾಲರ್ ಆಗಿದೆ. ಗಾಝದೊಳಗೆ ಆಹಾರ ಇಲ್ಲ ಫೆಲಸ್ತೀನಿನ ಹೊರಗಡೆಯಲ್ಲಿ ಆಹಾರ ವಸ್ತು ದುಬಾರಿ ಯಾಗಿದೆ. ಒಂದು ಜನವಿಭಾಗದ ಜನರ ವಿರುದ್ಧ ಹಸಿವು ವೆಫನ್ ಮಾಡಿಕೊಳ್ಳುವ ಧೂರ್ತ ದೇಶಗಳು ಅಮೆರಿಕ, ಇಸ್ರೇಲ್ ಆಗಿದೆ.
ಮೂರು ದಿನಗಳಲ್ಲಿ ಒಂದು ಬಾರಿ ಗಾಝದ ಜನರು ಆಹಾರ ಸೇವಿಸುತ್ತಿದ್ದಾರೆ. ಹಸಿವಿನಿಂದ ಜನರು ಮೂರ್ಚೆ ಹೂಗುತ್ತಿದ್ದಾರೆ. ಇನ್ನೊಂದು ಕಡೆ ಮಕ್ಕಳು ಅಪೌಷ್ಠಿಕೆತೆಯಿಂದ ಬಳಲುತ್ತಿದ್ದಾರೆ. ಮೇ ಅಂತ್ಯದಲ್ಲಿ ಯುಎಸ್ ಮತ್ತು ಇಸ್ರೇಲ್ ಜಂಟಿಯಾಗಿ ಆಹಾರ ವಿತರಣಾ ಕೇಂದ್ರ ಸ್ಥಾಪಿಸಿತ್ತು. ಅದೇ ಅಲ್ಜಝೀರ ಪ್ರಕಾರ ಅಲ್ಲಿಗೆ ಆಹಾರಕ್ಕಾಗಿ ಬಂದವರ ಮೇಲೆ ಇಸ್ರೇಲ್ ಸೈನ್ಯ ಗುಂಡಿಟ್ಟು 900 ಮಂದಿಯನ್ನು ಈವರೆಗೆ ಕೊಂದಿದೆ ಎಂದು ಅಲ್ ಜಝೀರ ವರದಿ ತಿಳಿಸುತ್ತಿದೆ.
ಗಾಝಾದ ಮೇಲಿನ ಇಸ್ರೇಲ್ ಯುದ್ಧವು ಕನಿಷ್ಠ 58,895 ಜನರನ್ನು ಕೊಂದಿದೆ ಮತ್ತು 140,980 ಜನರನ್ನು ಗಾಯ ಗೊಳಿಸಿದೆ. ಅಕ್ಟೋಬರ್ 7, 2023 ರಂದು ನಡೆದ ದಾಳಿಯಲ್ಲಿ ಇಸ್ರೇಲ್ನಲ್ಲಿ ಅಂದಾಜು 1,139 ಜನರು ಸಾವನ್ನಪ್ಪಿದ್ದಾರೆ ಮತ್ತು 200ಕ್ಕೂ ಹೆಚ್ಚು ಜನರನ್ನು ಸೆರೆಹಿಡಿಯಲಾಗಿದೆ. ಹಸಿವಿಂಗಿ ಸುವುದೇ ಉನ್ನತ ಏರು ಎಂದು ಪವಿತ್ರ ಕುರ್ಆನ್ ಹೇಳಿದೆ. ಅರಬ್ ಆಡಳಿತಗಾರರು ಈ ಕುರ್ಆನನ್ನೇ ಓದಿಲ್ವಾ?












