ಲಂಡನ್, ಜೂ.17: ಲಂಡನ್ ಮೇಯರ್ ಸಾದಿಕ್ ಖಾನ್ ರಾಷ್ಟ್ರಕ್ಕೆ ಅಪಮಾನವಾಗಿದ್ದು ಅವರು ಬ್ರಿಟನ್ನನ್ನು ನಾಶಪಡಿಸುತ್ತಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಲಂಡನ್ ದಾಳಿಯಲ್ಲಿ ಐವರು ಗಾಯಗೊಂಡ ಘಟನೆಯ ಬೆನ್ನಿಗೆ ಅವರಿಂದ ಟೀಕೆ ಬಂದಿದೆ. ಲಂಡನ್ ದಾಳಿಗಿಂತ ಮೊದಲು ಇನ್ನೊಂದು ದಾಳಿಯಲ್ಲಿ ಮೂರು ಮಂದಿ ಮೃತಪಟ್ಟು ಮೂವರು ಗಾಯಗೊಂಡಿದ್ದರು. ದಾಳಿಯ ವಿವರಗಳಿದ್ದ ಬ್ರಿಟನ್ನ ತೀವ್ರ ಬಲಪಂಥೀಯ ಕ್ಯಾತಿ ಹೊಪ್ಕಿನ್ರ ಟ್ವೀಟ್ಗೆ ರಿಟ್ವೀಟ್ಮಾಡಿ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
ಟ್ರಂಪ್ರ ಟ್ವೀಟ್ಗೆ ಉತ್ತರಿಸಿ ಸಮಯ ಹಾಳುಮಾಡಲು ಸಿದ್ಧರಿಲ್ಲ ಎಂದು ಸಾದಿಕ್ ಖಾನ್ ವಕ್ತಾರ ತಿಳಿಸಿದರು. ಜನರ ಮೇಲೆ ಸಂಭವಿಸಿರುವ ಸಂಕಷ್ಟವನ್ನು ಲಂಡನ್ ಮೇಯರ್ ಜೋಡಿಸಿ ಆಪಿಸುವ ಟ್ರಂಪ್ರ ನಿಲುವು ಅತ್ಯಂತ ಅರೋಚಕವಾಗಿದೆ ಎಂದು ಲೇಬರ್ ಪಾರ್ಟಿ ನಾಯಕ ಜೆರಮಿ ಕೊರ್ಬಿನ್ ಆರೋಪಿಸಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕ್ರಮಜರಗಿಸಲು ಪೊಲೀಸರಿಗೆ ಸಾದಿಕ್ ಖಾನ್ ಎಲ್ಲರೀತಿಯ ಸಹಕಾರವನ್ನು ನೀಡಿದ್ದಾರೆ. ಟ್ರಂಪ್ರ ಟ್ವೀಟ್ ಜನರನ್ನು ವಂಶೀಯವಾಗಿ ವಿಭಜಿಸುವ ಗುರಿಯನ್ನು ಹೊಂದಿದೆ ಎಂದು ಕೊರ್ಬಿನ್ ಹೇಳಿದರು. ಮೊದಲ ದಾಳಿ ನಡೆದಾಗ ಲಂಡನ್ಗೆ ಹೊಸ ಮೇಯರ್ ಅಗತ್ಯವಿದೆ. ಖಾನ್ ದುರಂತವಾಗಿದ್ದಾರೆ ಎಂದು ಟ್ರಮರ್ಫ ಟ್ವೀಟ್ ಮಾಡಿದರು. ಲಂಡನ್ನ ಸುರಕ್ಷೆ ಅತೀ ಪ್ರಮುಖ ವಿಚಾರ ಎಂದು ಸಾದಿಕ್ ಖಾನ್ ಟ್ವೀಟ್ ಮಾಡಿದ್ದರು. ದಾಳಿಗೆ ಸಂಬಂಧಿಸಿ 14 ಮಂದಿಯನ್ನು ಬಂಧಿಸಲಾಗಿದೆ.












