ಮೆದುಳು ಜ್ವರ: ಬಿಹಾರದಲ್ಲಿ ಈವರೆಗೆ 100 ಮಕ್ಕಳ ಸಾವು

0
527

ಪಾಟ್ನ,ಜೂ.17: ಮೆದುಳು ಜ್ವರದಿಂದಾಗಿ ಬಿಹಾರದ ಮುಝಪ್ಫರಾಪುರದಲ್ಲಿ ಮೃತಪಟ್ಟಿರುವ ಮಕ್ಕಳ ಸಂಖ್ಯೆ ನೂರಕ್ಕೇರಿದೆ. ರವಿವಾರ ಒಂದೇ ದಿನ 20 ಮಕ್ಕಳು ಸಾವಿಗೆ ಶರಣಾಗಿವೆ. ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ83 ಮಕ್ಕಳು ಹಾಗೂ ಸಿಟಿ ಕೆಜ್ರಿವಾಲ್ ಆಸ್ಪತ್ರೆಯಲ್ಲಿ 17 ಮಕ್ಕಳು ಮೃತಪಟ್ಟರು.ವರದಿಯಾಗಿರುವ ಪ್ರಕಾರ ಶ್ರೀಕೃಷ್ಣ ಆಸ್ಪತ್ರೆಯ ಐಸಿಯುವಿನಲ್ಲಿ 294 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಹಾರದಲ್ಲಿರುವ ಅತೀಉಷ್ಣ ಹವಮಾನ ರೋಗ ಬಿಗಡಾಯಿಸಲು ಕಾರಣವೆಂದು ವರದಿ ತಿಳಿಸಿದ್ದು ಕೇವಲ ಉಷ್ಣತೆಯ ಕಾರಣದಲ್ಲಿ ಬಿಹಾರದಲ್ಲಿ 32 ಮಂದಿ ಮೃತಪಟ್ಟಿದ್ದಾರೆ.

ಇದೇವೇಳೆ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಬಿಹಾರ ಸಂದರ್ಶಿಸಿ ಪರಿಸ್ಥಿತಿಯ ಅಧ್ಯಯನ ಮಾಡಿದ್ದರು. ಬಿಹಾರಕ್ಕೆ ಅಗತ್ಯವಿರುವ ನೆರವು ನೀಡುವುದಾಗಿ ಅವರು ಹೇಳಿದರು.