ಸನ್ಮಾರ್ಗ ವಾರ್ತೆ
ಇಸ್ರೇಲ್ ಪರ ನೀತಿಯನ್ನು ಪ್ರಶ್ನಿಸಿದ್ದ ತನ್ನ ಇಬ್ಬರು ಉದ್ಯೋಗಿಗಳನ್ನು ಮೈಕ್ರೋಸಾಫ್ಟ್ ಕೆಲಸದಿಂದ ವಜಾ ಗೊಳಿಸಿದೆ. ಅನ ಫಾತಿಲ್ ಮತ್ತು ರಿಕ್ಕಿ ಫಮೆಲಿ ಎಂಬ ಈ ಇಬ್ಬರು ಮೈಕ್ರೋಸಾಫ್ಟ್ ಕ್ರಮಕ್ಕೆ ತುತ್ತಾದವರಾಗಿದ್ದಾರೆ. ಕಂಪೆನಿಯ ಅಧ್ಯಕ್ಷರ ಕಚೇರಿಯಲ್ಲಿ ಇವರಿಬ್ಬರೂ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದರು.
ಕಂಪನಿಯ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿ ಇವರನ್ನು ವಜಾ ಮಾಡಲಾಗಿದೆ.
ಮೈಕ್ರೋಸಾಫ್ಟ್ ನ ಕಚೇರಿಗೆ ಬಂದು ಪ್ರತಿಭಟಿಸಿದ ಏಳು ಮಂದಿಯನ್ನು ಕಳೆದ ವಾರ ಬಂಧಿಸಲಾಗಿತ್ತು. ಅದರಲ್ಲಿ ಇಬ್ಬರನ್ನು ಕಂಪನಿ ಇದೀಗ ವಜಾ ಮಾಡಿದೆ ಉಳಿದ ಐದು ಮಂದಿ ಮೈಕ್ರೋಸಾಫ್ಟ್ ನ ಮಾಜಿ ಉದ್ಯೋಗಿಗಳಾಗಿದ್ದರು.
ತನ್ನ ಉದ್ಯೋಗಿಗಳಲ್ಲಿ ತಪ್ಪು ಮಾಹಿತಿಯನ್ನು ನೀಡಿ ಫೆಲೆಸ್ತೀನ್ ನಲ್ಲಿ ಇಸ್ರೇಲ್ ನಡೆಸುತ್ತಿರುವ ವಂಶಹತ್ಯೆ ಗೆ ಮೈಕ್ರೋಸಾಫ್ಟ್ ಬೆಂಬಲ ನೀಡ್ತಾ ಇದೆ ಎಂದು ಆರೋಪಿಸಿ ಈ ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದರು.
ಗಾಝಾ ಮತ್ತು ಪಶ್ಚಿಮ ದಂಡೆಯಲ್ಲಿ ಫೆಲಸ್ತೀನಿಯರ ಫೋನ್ ಸಂಭಾಷಣೆಗಳನ್ನು ಸೋರಿಕೆ ಮಾಡಲು ಮೈಕ್ರೋ ಸಾಫ್ಟ್ ಇಸ್ರೇಲ್ ಗೆ ನೆರವಾಗಿದೆ ಎಂಬುದನ್ನು ಮಾಧ್ಯಮ ತನಿಖೆಗಳು ಬಹಿರಂಗಪಡಿಸಿದ್ದವು. ಈ ಮೊದಲೂ ಇಂಥದ್ದೇ ವರದಿಯನ್ನು ಮಾಧ್ಯಮಗಳು ಪ್ರಕಟಿಸಿದ್ದವು. ಇದೀಗ ಮತ್ತೊಮ್ಮೆ ಮೈಕ್ರೋಸಾಫ್ಟ್ ನ ವಂಚನೆ ಬಹಿರಂಗಕ್ಕೆ ಬಂದಿದೆ.












