ಜಮ್ಮುಕಾಶ್ಮೀರ, ಜೂ.19: ಪುಲ್ವಾಮದಲ್ಲಿ ಭಯೋತ್ಪಾಕರು ಪುನಃ ದಾಳಿ ಮಾಡಿದ್ದಾರೆ. ಪುಲ್ವಾಮ ಪೊಲೀಸ್ ಠಾಣೆಗೆ ಭಯೋತ್ಪಾದಕರು ಗ್ರೆನೆಡ್ ದಾಳಿ ನಡೆಸಿದ್ದು ಏಳು ಮಂದಿ ಗ್ರಾಮಸ್ಥರು ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಲ್ವಾಮದಲ್ಲಿ ಸೇನೆಯ ವಾಹನಕ್ಕೆ ದಾಳಿ ನಡೆಸಿದ ಬೆನ್ನಿಗೆ ಪುನಃ ಪೊಲೀಸ್ ಠಾಣೆಗೆ ಭಯೋತ್ಪಾದಕರು ಗ್ರೆನೆಡ್ ಎಸೆದಿದ್ದಾರೆ. ಇದರಲ್ಲಿ ಹಲವು ಗ್ರಾಮಸ್ತರು ಗಾಯಗೊಂಡಿದ್ದರು. ಇವರಲ್ಲಿ ಮೂವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯ ನಂತರ ಪ್ರದೇಶದಲ್ಲಿ ಸೇನೆ ಬಿಗು ಬಂದೋ ಬಸ್ತು ಏರ್ಪಡಿಸಿತ್ತು. ಗ್ರೆನೆಡ್ ದಾಳಿ ಮಾಡಿದ ಭಯೋತ್ಪಾದಕರ ಶೋಧ ನಡೆಯುತ್ತಿದೆ. ಕಳೆದ ದಿವಸ ಫೆಬ್ರುವರಿಯಲ್ಲಿ ಪುಲ್ವಾಮ ಮಾದರಿ ದಾಳಿ ನಡೆದಿತ್ತು. ಇದರಲ್ಲಿ ಇಬ್ಬರು ಸೈನಿಕರು ವೀರಮೃತ್ಯುವನ್ನಪ್ಪಿದ್ದರು.. ಇದೇವೇಳೆ ಫೆಬ್ರುವರಿ ಹದಿನಾಲ್ಕರಂದು ನಡೆದಿದ್ದ ಭಯೋತ್ಪಾದನಾ ದಾಳಿಯ ಮುಖ್ಯ ಸೂತ್ರಧಾರರಲ್ಲಿ ಒಬ್ಬನಾದ ಜೈಷೆ ಮುಹಮ್ಮದ ಭಯೋತ್ಪಾದಕ ಸಜ್ಜಾದ ಭಟ್ನನ್ನು ಸೈನ್ಯ ಹತ್ಯೆ ಮಾಡಿದೆ. ಅನಂತ್ನಾಗ್ ಮುಂತಾದೆಡೆ ಸೇನೆ ಮತ್ತು ಭಯೋತ್ಪಾದಕರ ನಡುವೆ ಕಾಳಗವೂ ನಡೆದಿತ್ತು.












