ನಿರಾಶ್ರಿತರನ್ನು ರಕ್ಷಿಸಿದವರಿಗೆ 50000 ರೂ. ದಂಡ ವಿಧಿಸಲಿರುವ ಇಟಲಿ ಸರಕಾರ

0
578

ಇಟಲಿ, ಜೂ.19: ಸಮುದ್ರದ ಪಾಲಾಗುವ ನಿರಾಶ್ರಿತರನ್ನು ರಕ್ಷಿಸಿ ದಡಕ್ಕೆ ತರುವ ಬೋಟ್‍ ಗಳಿಗೆ ದಂಡ ವಿಧಿಸುವ ಕಾನೂನನು ಇಟಲಿಯಲ್ಲಿ ಜಾರಿಯಾಗಿದೆ. ಇಂತಹ ಬೋಟುಗಳಿಗೆ 50,000 ಯುರೋ ಅಂದರೆ ಸುಮಾರು 44,000 ಪೌಂಡ್ ದಂಡವನ್ನು ನಿಶ್ಚಯಿಸಲಾಗಿದೆ. ಕಾನೂನನ್ನು ನಿರಂತರವಾಗಿ ಉಲ್ಲಂಘಿಸುವ ಬೋಟ್‍ ಗಳನ್ನು ವಶಪಡಿಸಿಕೊಳ್ಳಲಾಗುವುದು. ಗುಪ್ತ ತನಿಖೆ ನಡೆಸುವ ಆಧುನಿಕ ಉಪಕರಣಗಳನ್ನು ಉಪಯೋಗಿಸಿ ಜನರ ಸಾಗಾಟ ನಡೆಸುವವರ ಮೇಲೆ ನಿಗಾವಿರಿಸಲು ಕಾನೂನು ಹೇಳುತ್ತಿದೆ. ಎರಡು ವಾರದ ಹಿಂದೆ ನಿರಾಶ್ರಿತ ವಿರುದ್ಧ ಲೀಗ್ ಯುರೋಪಿಯನ್ ಪಾರ್ಲಿಮೆಂಟ್ ಚುನಾವಣೆಯಲ್ಲಿ ಜಯ ಗಳಿಸಿದೆ. ಇಟಲಿ ಕ್ಯಾಬಿನೆಟ್ ಈ ತಿಂಗಳು ಕಾನೂನು ಪಾಸು ಮಾಡಿದರೂ ಅಧ್ಯಕ್ಷ ಸರ್ಜಿಯೊ ಮತ್ತು ಮಾನವ ಹಕ್ಕು ಸಂಘಟನೆಗಳು ವಿರೋಧಿಸಿದ್ದರಿಂದ ಕಾನೂನಿನ ಕರಡು ಪ್ರತಿಯಲ್ಲಿದ್ದ ಕೆಲವು ಕಠಿಣ ನಿಬಂಧನೆಗಳನ್ನು ನಂತರ ತೆಗೆದು ಹಾಕಲಾಗಿದೆ.