ಇಸ್ಲಾಮಾಬಾದ್, ಜೂ.19: ಪಾಕಿಸ್ತಾನದ ವಿಜ್ಞಾನ ಮತ್ತು ವಾಣಿಜ್ಯ ಸಚಿವ ಫವಾದ್ ಚೌಧರಿಯ ಮೂಲಕ ಜಾರಿಗೊಂಡ ವಿವಾದಿತ ಚಾಂದ್ರಮಾನ ಕ್ಯಾಲಂಡರ್ ವಿರುದ್ಧ ಪೇಶಾವರ ಹೈಕೋರ್ಟಿನಲ್ಲಿ ಅರ್ಜಿ ದಾಖಲಾಗಿದೆ. ಈ ಕ್ಯಾಲೆಂಡರ್ ಇಸ್ಲಾಮಿಕ್ ಶಿಕ್ಷಣದ ರೀತಿಯಲ್ಲಿಲ್ಲ. ಸಚಿವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಅರ್ಜಿದಾರ ಕೋರ್ಟಿನಲ್ಲಿ ಆಗ್ರಹಿಸಿದ್ದಾನೆ.
ಝಿ ನ್ಯೂಸ್ ವರದಿಯ ಪ್ರಕಾರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ರ ನಿಕಟವರ್ತಿಯಾಗಿರುವ ಚೌಧರಿ ಈದ್ ಉಲ್ ಫಿತರ್ ಗಿಂತ ಮೊದಲು ಚಂದ್ರದರ್ಶನದ ವೆಬ್ಸೈಟ್ ಪ್ರಾರಂಭಿಸಿದ್ದರು. ಇದನ್ನು ಹಲವು ಉಲೇಮಾಗಳು ವಿರೋಧಿಸಿದ್ದರು. ಚೌಧರಿ ಜೂನ್ ಐದರಂದು ಸರಕಾರ ಈದ್ ಆಚರಿಸಲಿದೆ ಎಂದು ಚೌಧರಿ ಈ ಹಿಂದೆ ಘೋಷಿಸಿದ್ದರು. ಅರ್ಜಿದಾರ ಚೌಧರಿಯವರ ಮೂಲಕ ಪ್ರಸ್ತುತಪಡಿಸಲಾಗಿರುವ ಕ್ಯಾಲೆಂಡ್ ಇಸ್ಲಾಮೀ ಶಿಕ್ಷಣದ ರೀತಿಯಲ್ಲಿಲ್ಲ ಎಂದು ವಾದಿಸಿದ್ದಾರೆ.












