ಹೊಸದಿಲ್ಲಿ, ಜೂ.19: ಭಾರತದಲ್ಲಿ ಪ್ರಾಯೋಜಿಸುವ ಅಂತಾರಾಷ್ಟ್ರೀಯ ಪಂದ್ಯಾಕೂಟಗಳಿಗೆ ಪಾಕಿಸ್ತಾನ ಅಟಗಾರರ ಸಹಿತ ಎಲ್ಲ ಆಟಗಾರರಿಗೆ ವೀಸಾ ಮಂಜೂರು ಮಾಡುವುದಾಗಿ ಮಂಗಳವಾರ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಭಾರತ ಭರವಸೆ ನೀಡಿದೆ. ಎಲ್ಲರಿಗೂ ಯಾವುದೇ ಪೂರ್ವಗ್ರಹಗಳಿಲ್ಲದೆ ವೀಸಾ ನೀಡಲಾಗುವುದು. ಇದು ಭಾರತದ ಒಲಿಂಪಿಕ್ ಸಂಸ್ಥೆಗೆ ಒಲಿಂಪಿಕ್ ಸಹಿತ ಇತರ ಸ್ಪರ್ಧೆಗಳ ಉಸ್ತುವಾರಿಗೆ ಹಕ್ಕು ಮಂಡಿಸಲು ಸಹಾಯಕವಾಗಿದೆ. ಆದರೆ ಕಳೆದ ಫೆಬ್ರುವರಿಯಲ್ಲಿ ಮೂವರ ಸದಸ್ಯರಿದ್ದ ಪಾಕಿಸ್ತಾನದ ಶೂಟಿಂಗ್ ತಂಡಕ್ಕೆ ದಿಲ್ಲಿಯಲ್ಲಿ ಶೂಟಿಂಗ್ ವಿಶ್ವಕಪ್ನಲ್ಲಿ ಭಾಗವಹಿಸಲು ಭಾರತ ವೀಸಾ ನಿರಾಕರಿಸಿತ್ತು.
ಐಒಸಿ ಮುಖ್ಯಸ್ಥ ಥಾಮಸ್ ಬಾಕ್ ಮತ್ತು ಭಾರತ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ನರೀಂದರ್ ಬಾತ್ರರಿಗೆ ಕ್ರೀಡಾ ಸಚಿವ ರಾಧೇಶ್ಯಾಮ್ ಜುಲಾನಿಯರಿಗೆ ಪತ್ರ ಬರೆದಿದ್ದು ಭಾರತದಲ್ಲಿ ನಡೆಯುವ ಪಂದ್ಯಾಕೂಟದಲ್ಲಿ ಯಾವುದೇ ರಾಷ್ಟ್ರದ ಒಲಿಂಪಿಕ್ ಸಮಿತಿಗೆ ಸೇರಿದ ಯೋಗ್ಯ ಆಟಗಾರರಿಗೆ ಭಾಗವಹಿಸಲು ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಅಥ್ಲೀಟ್ ಗಳ ಪಾಲ್ಗೊಳ್ಳುವಿಕೆಯಲ್ಲಿ ಇತರ ರಾಜಕೀಯ ವಿಚಾರ ಅಡ್ಡಿ ಬರುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಭಾರತ ವಸುದೈವ ಕುಟುಂಬಕಂ ನೀತಿಯನ್ನು ಹೊಂದಿದೆ. ಯಾವುದೇ ಪೂರ್ವಗ್ರಹ ರಹಿತವಾಗಿ ಎಲ್ಲ ದೇಶಗಳ ಕ್ರೀಡಾಪಟುಗಳಿಗೆ ವೀಸಾ ಮಂಜೂರು ಮಾಡಲಾಗುವುದು. ಸಂಕ್ಷಿಪ್ತವಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಆಂದೋಲನದ ಹಿಂದೆ ಭಾರತೀಯ ಈ ಭಾವನೆ ಕೂಡ ಇದೆ ಎಂದು ಸಚಿವರು ಹೇಳಿದ್ದಾರೆ.
ಭಾರತ ಈಗಾಗಲೇ 2026ರ ಯುವ ಒಲಿಂಪಿಕ್ ಮತ್ತು 2031ರ ಒಲಿಂಪಿಕ್ಗೆ ಉಮೇದುವಾರಿಕೆ ಸಲ್ಲಿಸಿದೆ. ಭಾರತ ಒಲಿಂಪಿಕ್ ಸಂಸ್ಥೆ 2030ರ ಏಶಿಯಾಡ್ ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸಲು ಬಯಸುತ್ತಿದೆ.












