ಕೇರಳ: ಯೋಗ ತರಬೇತಿಯ ವೇಳೆ ಶಾಲೆಯ ಅಸೆಂಬ್ಲಿ ಹಾಲ್‍ಗೆ ನುಗ್ಗಿದ ಕಾರು; ಅಧ್ಯಾಪಕಿ ಗಂಭೀರ, ವಿದ್ಯಾರ್ಥಿಗಳಿಗೆ ಗಾಯ

0
586

ಮೂವಾಟ್ಟುಪುಝ,ಜೂ.21: ಶಾಲೆಯ ಅಸೆಂಬ್ಲಿ ಹಾಲ್‍ಗೆ ಕಾರು ನುಗ್ಗಿ ಹದಿಮೂರು ಮಕ್ಕಳು ಮತ್ತು ಅಧ್ಯಾಪಕಿ ಗಾಯಗೊಂಡಿದ್ದಾರೆ. ಅಧ್ಯಾಪಕಿ ಮಾತ್ರ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವಾಟ್ಟುಪುಝ ವಿವೇಕಾನಂದ ವಿದ್ಯಾಲಯದಲ್ಲಿ ಘಟನೆ ನಡೆದಿದ್ದು ಅಡ್ಮಿನಿಸ್ಟ್ರೇಟರ್‌ರ ಕಾರು ಅಪಘಾತ ನಡೆಸಿದೆ. ಅಧ್ಯಾಪಕಿ ಮತ್ತು ಇಬ್ಬರು ವಿದ್ಯಾರ್ಥಿಗಳನ್ನು ಕೊಲಂಚೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಅಧ್ಯಾಪಕಿಯ ಬೆನ್ನುಹುರಿ ತಲೆಗೆ ಗಾಯಗಳಾಗಿದೆ. ಬೆಳಗ್ಗೆ ಎಂಟೂವರೆ ಗಂಟೆಗೆ ಅಪಘಾತ ನಡೆದಿದ್ದು ಯೋಗ ದಿನಾಚರಣೆಯಲ್ಲಿ ಕಾರ್ಯಕ್ರಮ ನೀಡಲು ಶಾಲೆಯಲ್ಲಿ ಸಿದ್ಧತೆ ನಡೆಯುತ್ತಿತ್ತು. ಈ ವೇಳೆ ಶಾಲಾ ಅಡ್ಮಿಸ್ಟ್ರೇಟ್ ಕೃಷ್ಣಕುಮಾರ್ ವರ್ಮಾರ ಕಾರು ಇಲ್ಲಿಗೆ ನುಗ್ಗಿತ್ತು. ವರ್ಮಾರ ವಿರುದ್ಧ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿದ್ದಕ್ಕೆ ಪೊಲೀಸರು ಕೇಸು ದಾಖಲಿಸಿದ್ದಾರೆ.