ಸನ್ಮಾರ್ಗ ವಾರ್ತೆ
ಹರಿಯಾಣದ ಮೇವಾತ್ನಲ್ಲಿ 50 ವರ್ಷದ ಜಮೀಲ್ ಎಂಬವರ ಹತ್ಯೆ ನಡೆದಿದ್ದು ಪೊಲೀಸರ ಕಷ್ಟಡಿ ಹಿಂಸೆಯಿಂದ ಈ ಸಾವು ಸಂಭವಿಸಿದೆ ಎಂದು ಕುಟುಂಬಿಕರು ಆರೋಪಿಸಿದ್ದಾರೆ. ಇವರಿಗೆ ಇಬ್ಬರು ಥಳಿಸಿದ್ದರು. ಆ ಬಳಿಕ ಪೊಲೀಸರು ಅರೆಸ್ಟ್ ಮಾಡಿದ್ದರು.
ಕೆಲಸದ ಹಣವನ್ನು ಪಡಕೊಳ್ಳುವುದಕ್ಕಾಗಿ ಜಮೀಲ್ ರಾಜಸ್ಥಾನಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ನಟವರ್ ಮತ್ತು ಆತನ ಸಹಚರರು ಅವರ ಮೇಲೆ ದಾಳಿ ನಡೆಸಿದ್ದಾರೆ. ದೊಣ್ಣೆ ಮತ್ತು ಇಟ್ಟಿಗೆಯಿಂದ ತಲೆಗೆ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ಇವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಬದಲು ಪೊಲೀಸರು ನೇರ ಸ್ಟೇಷನ್ಗೆ ಕೊಂಡೊಯ್ಯುತ್ತಿದ್ದಾರೆ. ಗಂಟೆಗಳ ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಗಲೇ ವೈದ್ಯರು ಸಾವನ್ನು ದೃಢೀಕರಿಸಿದ್ದಾರೆ
ಇದರ ಬಳಿಕಊರಿನವರು ಪ್ರತಿಭಟನೆ ನಡೆಸಿದ್ದಾರೆ. ನಟವರ್ ಮತ್ತು ಆತನ ಸಹಚರರ ಮೇಲೆ ಕೊಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಆರಂಭದಲ್ಲಿ ಪೊಲೀಸರು ಪ್ರಕರಣ ದಾಖಲಿಸುವುದಕ್ಕೆ ನಿರಾಕರಿಸಿದ್ದಾರೆ. ಇದಕ್ಕೆ ಜಮೀಲ್ ಕುಟುಂಬದವರು ಆಕ್ಷೇಪಿಸಿದ್ದು ಮೃತ ದೇಹವನ್ನು ಪಡಕೊಳ್ಳಲು ನಿರಾಕರಿಸಿದಾರೆ. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಆ ಬಳಿಕ ಬಿಡುಗಡೆಗೊಳಿಸಿದ್ದಾರೆ. ಮರುದಿನ ಇಬ್ಬರು ಪರಿಚಿತ ಮತ್ತು ಮೂವರು ಅಪರಿಚಿತರ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದಾರೆ.












