ಇರಾನ್ ನ ಪರಮೋಚ್ಚ ನಾಯಕನಿಗೆ ಅಮೆರಿಕ ದಿಗ್ಬಂಧನ

0
786

ವಾಷಿಂಗ್ಟನ್, ಜೂ. 25: ಅಮೆರಿಕ ಇರಾನ್ ವಿರುದ್ಧ ಆರ್ಥಿಕ ದಿಗ್ಬಂಧನವನ್ನು ಇನ್ನಷ್ಟು ಜಟಿಲಗೊಳಿಸಿದ್ದು ಇರಾನ್ ಪರಮೋನ್ನತ ನಾಯಕ ಆಯತುಲ್ಲ ಅಲಿ ಖಾಮಿನೈ ಮುಂತಾದವರ ಆರ್ಥಿಕ ಮೂಲವನ್ನು ಗುರಿಯಾಗಿಟ್ಟು ಅಮೆರಿಕ ಹೊಸ ಕ್ರಮಕ್ಕಿಳಿದಿದೆ.

ಖಾಮಿನೈ, ಅವರ ಕಚೇರಿ, ರೆವಲ್ಯೂಷನರಿ ಗಾರ್ಡನ್ನು ನಿಯಂತ್ರಿಸುವ ಎಂಟು ಕಮಾಂಡರ್ ಗಳ ಆದಾಯ ಮೂಲಗಳನ್ನು ಕಡಿಮೆ ಮಾಡುವುದು ಮತ್ತು ಇಲ್ಲವಾಗಿಸುವುದು ಅಮೆರಿಕದ ಉದ್ದೇಶವಾಗಿದೆ. ಹೊಸ ದಿಗ್ಬಂಧನ ಆದೇಶ ಪ್ರಕಾರ ಅಮೆರಿಕ ನಿಯಂತ್ರಣವಿರುವ ಸಂಸ್ಥೆಗಳಿಂದ ಖಾಮಿನೈ ಸಹಿತ ಇರುವವರಿಗೆ ಸಿಗುತ್ತಿದ್ದ ಆದಾಯ ಸ್ಥಗಿತಗೊಳ್ಳಲಿದೆ. ಮಾತ್ರವಲ್ಲ ತಮಗೆ ನಿಕಟವಾಗಿರುವವರನ್ನು ಇರಾನ್‍ ಗೆ ಈ ಸಂಸ್ಥೆಗಳಿಗೆ ನೇಮಕಗೊಳಿಸಲು ಸಾಧ್ಯವಿಲ್ಲ. ಇದೇ ವೇಳೆ ರಾಜತಾಂತ್ರಿಕ ಮಟ್ಟದ ಪರಿಹಾರಕ್ಕೆ ಅಮೆರಿಕ ಬಯಸುವುದಿಲ್ಲ. ಬದಲಾಗಿ ಯುದ್ಧಕ್ಕೆ ಅದು ಯತ್ನಿಸುತ್ತಿದೆ ಎಂದು ಇರಾನ್ ವಿದೇಶ ಸಚಿವ ಜಾವೇದ್ ಶರೀಫ್ ಹೇಳಿದರು.

ಅಮೆರಿಕದ ಬೇಹುಗಾರಿಕಾ ಡ್ರೋನನ್ನು ಇರಾನ್ ಸೇನೆ ಹೊಡೆದುರುಳಿಸಿದ ಬಳಿಕ ಡೊನಾಲ್ಡ್ ಟ್ರಂಪ್ ಯುದ್ಧಕ್ಕೆ ಆದೇಶಿಸಿ ಹಿಂದೆ ಸರಿದಿದ್ದರು. ನಂತರ ಟ್ರಂಪ್ ಹೊಸ ಆರ್ಥಿಕ ದಿಗ್ಬಂಧನವನ್ನು ಹೇರಿದ್ದಾರೆ. ಇದೇ ವೇಳೆ ಅಣು ಒಪ್ಪಂದದಿಂದ ಹಿಂದೆ ಸರಿದು ಅಣು ಕಾರ್ಯಕ್ರಮವನ್ನು ಇರಾನ್ ಉತ್ತೇಜಿಸಿದರೆ ಸಹಜವಾಗಿ ಬ್ರಿಟನ್, ಜರ್ಮನಿ, ಫ್ರಾನ್ಸ್ ದೇಶಗಳಿಗೂ ಹಾಗೆ ಮಾಡುವುದು ಅನಿವಾರ್ಯವಾಗಲಿದೆ.