ಪುಣೆ, ಜೂ.29: ಪುಣೆಯ ಫ್ಲಾಟ್ ಸಮುಚ್ಚಯದ ಗೋಡೆ ಬಿದ್ದು ಹದಿನೈದು ಮಂದಿ ಮೃತಪಟ್ಟಿದ್ದಾರೆ. ನಗರದ ಕೊಂದ್ವ ಪ್ರದೇಶದಲ್ಲಿ ದುರಂತ ನಡೆದಿದೆ. ಮೃತಪಟ್ಟವರಲ್ಲಿ ಮಕ್ಕಳೂ ಸೇರಿದ್ದಾರೆ. ಭಾರಿ ಮಳೆ ಸುರಿದ ಪರಿಣಾಮ ಅರುವತ್ತು ಅಡಿ ಎತ್ತರದ ಗೋಡೆ ಕೆಳಭಾಗದ ಗುಡಿಸಲಿನ ಮೇಲೆ ಕುಸಿದು ಬಿತ್ತು. ಅಪಾರ್ಟ್ಮೆಂಟ್ ಬಳಿ ಪಾರ್ಕ್ ಮಾಡಿದ ಕಾರುಗಳು ಕೂಡ ಪುಡಿಯಾಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋಡೆ ಕುಸಿದದ್ದು ಹೇಗೆ ಎಂದು ತನಿಖೆ ಆರಂಭವಾಗಿದೆ ಎಂದು ಪುಣೆಯ ಪೊಲೀಸರು ತಿಳಿಸಿದರು. ಅಪಘಾತಕ್ಕೆ ಕಾರಣಕರ್ತರಾದವರ ವಿರುದ್ಧ ಶಕ್ತವಾದ ಕ್ರಮ ಜರಗಿಸಲಾಗುವುದು. ಕುಸಿದ ಕಟ್ಟಡಕ್ಕೆ ಅನುಮತಿ ಇತ್ತೇ ಇತ್ಯಾದಿ ವಿಷಯಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮುಖ್ಯಸ್ಥ ಕೆ.ವೆಂಕಟೇಶಂ ಹೇಳಿದರು.












