ಡಾ| ಅಬ್ದುಲ್ ಬಾರಿ ಅರಿತ್ವಾನ್
(ಎಡಿಟರ್ ಇನ್ ಚೀಫ್ ರೈಅಲ್ ಯೌಮ್, ಲಂಡನ್)
ಮುಹಮ್ಮದ್ ಮುರ್ಸಿ ಇನ್ನಿಲ್ಲ. ಆದರೆ ಈಜಿಪ್ಟ್ ಅಧ್ಯಕ್ಷ ಮುಹಮ್ಮದ್ ಮುರ್ಸಿ ನನಗೆ ಹೆಚ್ಚು ಪ್ರಿಯ ವ್ಯಕ್ತಿ. ಅವರ ನಿಧನರಾದ ಮೇಲೆಯೂ ಅದು ನನ್ನಲ್ಲಿದೆ. ಕೋರ್ಟಿನ ಕೋಣೆಯಲ್ಲಿ ಅವರು ಮೃತಪಟ್ಟರೆನ್ನುವ ಎಂಬ ಸುದ್ದಿಗೆ ಕಂಪಿಸಿ ಹೋದೆ. ನೀಲಿ ಜೈಲು ಬಟ್ಟೆ ಧರಿಸಿ ಇಪ್ಪತ್ತು ನಿಮಿಷದ ಕೋರ್ಟು ವ್ಯವಹಾರದ ನಡುವೆ ಅದು ಘಟಿಸಿತು. ಅವರ ವಿರುದ್ಧ ಪಬ್ಲಿಕ್ ಪ್ರಾಸಿಕ್ಯೂಟರ್ ಕಟ್ಟುಕತೆಗಳನ್ನು ಅಲ್ಲಿ ಮಂಡಿಸಿದ್ದರು.
ಮುಹಮ್ಮದ್ ಮುರ್ಸಿಯವರನ್ನು ಎರಡು ಸಲ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಅದರಲ್ಲಿ ನಮ್ಮ ಮೊದಲ ಭೇಟಿ ತೀರ ಅನಿರೀಕ್ಷಿತ. 2012 ಸೆಪ್ಟಂಬರ್ನಲ್ಲಿ ಜಸ್ಟಿಸ್ ಆಂಡ್ ಡೆವಲಪ್ಮೆಂಟ್ ಪಾರ್ಟಿ ಸಮ್ಮೇಳನಕ್ಕೆ ಅವರು ಆಹ್ವಾನಿತರಾಗಿ ಆಗಮಿಸಿದ್ದರು. ಟರ್ಕಿ ಅಧ್ಯಕ್ಷ ಉರ್ದುಗಾನ್ ಸಮ್ಮೇಳನದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕೈರೊದ ಅಧ್ಯಕ್ಷರ ಅರಮನೆಯಲ್ಲಿ 2013ರ ಜೂನ್ ಮೂರರಂದು ಮುರ್ಸಿಯವರನ್ನು ಎರಡನೆ ಸಲ ಭೇಟಿಯಾಗಿದ್ದೆ. ಅವರು ಅಧಿಕಾರದಿಂದ ಕಿತ್ತು ಹಾಕಲ್ಪಡುವುದಕ್ಕಿಂತ ಸುಮಾರು ಒಂದು ತಿಂಗಳ ಮೊದಲು.
ಟರ್ಕಿಯ ರಾಜಧಾನಿ ಮಾರಿಯಟ್ ಹೊಟೇಲ್ ಕೆಫೆಯಲ್ಲಿ ನಾನು ಕುಳಿತಿದ್ದೆ. ಆಹ್ವಾನಿತರಾಗಿದ್ದ ಹಲವು ಗಣ್ಯರು ಅಲ್ಲಿದ್ದರು. ಅಲ್ಲಿ ಅಧ್ಯಕ್ಷ ಉರ್ದುಗಾನ್ ವಿಶೇಷ ಔತಣಕೂಟ ಆಯೋಜಿಸಿದ್ದರು. ಅಲ್ಲಿ ನಾನು ಸೆಕ್ಯೂರಿಟಿ ಸಿಬ್ಬಂದಿ ಮತ್ತು ಅಧಿಕಾರಿಗಳ ಮಧ್ಯೆ ಅಧ್ಯಕ್ಷ ಮುರ್ಸಿಯನ್ನು ನಾನು ನೋಡಿದೆ. ನಮ್ಮ ಕಣ್ಣುಗಳು ಪರಸ್ಪರ ಸಂಧಿಸಿದವು. ಆಗ ಅವರು ನನ್ನ ಹತ್ತಿರ ನಡೆದು ಬಂದು ಆಲಿಂಗಿಸಿದರು. ಅವರು ಅಧ್ಯಕ್ಷರಾಗಿ ಆಯ್ಕೆಯಾದಾಗ ನಾನು ಹೋಗಿ ಅವರನ್ನು ಸಂದರ್ಶನ ಮಾಡಿರಲಿಲ್ಲ. ಅಭಿನಂದಿಸಿರಲಿಲ್ಲ. ಕೈರೊಕ್ಕೆ ಮರಳಲು ವಿಮಾನ ನಿಲ್ದಾಣಕ್ಕೆ ಸಜ್ಜಾದಾಗ ಅವರೊಡನೆ ಸ್ವಲ್ಪ ಸಮಯ ಮಾತಾಡುವ ಅವಕಾಶ ದೊರೆಯಿತು. ಕೇವಲ ಏಳು ಗಂಟೆಯಷ್ಟು ಸಮಯ ಅವರು ಅಂಕಾರದಲ್ಲಿ ಉಳಿದುಕೊಂಡಿದ್ದರು.
ಕೈರೊಕ್ಕೆ ಯಾಕೆ ಭೇಟಿ ನೀಡಿಲ್ಲ ಎನ್ನುವ ವಿಷಯವನ್ನು ಅಧ್ಯಕ್ಷ ಮುರ್ಸಿ ನನ್ನಲ್ಲಿ ಪ್ರಶ್ನಿಸಿದರು. ಈಜಿಪ್ಟ್ ಪ್ರವೇಶ ನಿಷೇಧಿಸಿದ್ದ ಪತ್ರಕರ್ತರ ಪಟ್ಟಿಯಲ್ಲಿ ನನಗೂ ಸ್ಥಾನಮಾನ ನೀಡಿದ್ದನ್ನು ಅವರಿಗೆ ಹೇಳಿದೆ. ಆ ಕಪ್ಪು ಪಟ್ಟಿಯನ್ನು ಹರಿದು ಬಿಸಾಡುತ್ತೇವೆ ಎಂದು ಅವರು ನಗುತ್ತಾ ಹೇಳಿದರು. ನಿಮ್ಮನ್ನು ಈಜಿಪ್ಟ್ ಗೆ ಬರುವಂತೆ ಕರೆ ಕಳುಹಿಸುವೆನು. ಆಗ ಈಜಿಪ್ಟ್ ನಿಮ್ಮ ಊರಾಗಿ ಬದಲಾಗಿರುತ್ತದೆ ಎಂದರು. ನಿಮ್ಮನ್ನು ಪ್ರೀತಿಸುವ ಹಲವಾರು ಜನರು ಅಲ್ಲಿದ್ದಾರೆ. ಅರಬರಿಗೂ ಮುಸ್ಲಿಮರಿಗೂ ಪ್ರವೇಶ ನಿಷೇಧಿಸುವ ಯಾವ ಲೀಸ್ಟ್ ಕೂಡ ಅಲ್ಲಿರುವುದಿಲ್ಲ. ಹೊಸದಾ ದೊಂದು ಘಟ್ಟದಲ್ಲಿ ನಾವು ಇದ್ದೇವೆ. ಕನಾನ್ ದೇಶದಲ್ಲಿ ಪುನಃ ಭೇಟಿಯಾಗೊಣ ಎಂದು ಅವರನ್ನು ಬೀಳ್ಕೊಟ್ಟೆ.
ಈಜಿಪ್ಟ್ ನ ಅಶಾಂತ ಪರಿಸ್ಥಿತಿಯ ಕಾರಣ ದಿಂದ ಅವರ ಆಹ್ವಾನವನ್ನು ಸ್ವೀಕರಿಸಲು ಸ್ವಲ್ಪ ತಡವಾಯಿತು. ಪ್ರತಿಭಟನೆಗಳು ನಿರಂತರ ನಡೆಯು ತ್ತಿತ್ತು. ಜೂನ್ ಮೊದಲ ವಾರದಲ್ಲಿ ಕೈರೊಕ್ಕೆ ಹೋಗಲು ತೀರ್ಮಾನಿಸಿದೆ. ಅರಬ್ ಪ್ರದೇಶದ ಸಂದರ್ಶಕರಿಂದ ಅದು ತುಂಬಿ ತುಳುಕಿತ್ತು. ಈಜಿಪ್ಟ್ನ ಇತಿಹಾಸದಲ್ಲಿ ಹಿಂದೆಂದೂ ಕಂಡು ಬರದಿದ್ದಂತಹ ಮಾಧ್ಯಮ ಜಾಗೃತಿಗೆ ಕೈರೊ ಸಾಕ್ಷ್ಯವಹಿಸಿತ್ತು. ಗಂಟೆಗಳ ಕಾಲ ದೀರ್ಘವಿದ್ದ ಟಾಕ್ ಶೋಗಳು, ಅಭಿಪ್ರಾಯ ಮಂಡನೆ ಅವಕಾಶಗಳೆಲ್ಲ ಮಾಧ್ಯಮ ಸ್ವಾತಂತ್ರ್ಯವನ್ನು ಪ್ರತಿಫಲನಗೊಳಿಸಿತ್ತು. ಯಾವುದೇ ಅರಬ್ ದೇಶದಲ್ಲಿ ಮತ್ತು ಈಜಿಪ್ಟ್ನಲ್ಲಿ ಈ ಹಿಂದೆ ಕಾಣಲು ಸಿಗದಂತಹ ದೃಶ್ಯವದಾಗಿತ್ತು.
ನಾನು ಅಲ್ಕುದ್ಸುಲ್ ಅರಬಿ ಪತ್ರಿಕೆಯ ಸಂಪಾದಕನಾಗಿದ್ದಾಗ ಅದರ ಬ್ಯೂರೊ ಚೀಫ್ ಆಗಿದ್ದ ಗೆಳೆಯ ಹಸನೈನ್ ಕರೂಮ್ರೊಡನೆ ಮುರ್ಸಿಯವರ ಆಹ್ವಾನ ಸ್ವೀಕರಿಸಿ ಅವರನ್ನು ಸಂದರ್ಶಿಸುವ ಕುರಿತು ಹೇಳಿದೆ. ಗೆಳೆಯನ ಮುಖದಲ್ಲಿ ಅದಿಷ್ಟವಿಲ್ಲ ಎಂಬ ಸೂಚನೆ ಕಂಡು ಬಂತು. ನನ್ನ ಆಶೆಯನ್ನು ಅವರು ಪ್ರೋತ್ಸಾಹಿಸಲಿಲ್ಲ. ಮುಸ್ಲಿಂ ಬ್ರದರ್ ಹುಡ್ನೊಂದಿಗೆ ಯಾವುದೇ ರೀತಿಯ ಸಂಬಂಧ ಇಲ್ಲದ ವ್ಯಕ್ತಿ ಅವರಾಗಿದ್ದರು. ತನ್ನ ನಿಲುವನ್ನು ನೇರವಾಗಿ ತಿಳಿಸಿದರು ಮತ್ತು ಅಧ್ಯಕ್ಷರ ಕಚೇರಿಯನ್ನು ಸಂಪರ್ಕಿಸಿ ವಿಷಯ ತಿಳಿಸುತ್ತೇನೆ ಎಂದು ಹೇಳಿದರು. ಸುಮಾರು ಒಂದು ಗಂಟೆಯ ನಂತರ ಪ್ರತಿಕ್ರಿಯೆ ಬಂತು. ಮಧ್ಯಾಹ್ನ ಹನ್ನೆರಡು ಗಂಟೆಗೆ ಸಮಯ ಕಲ್ಪಿಸಲಾಗಿತ್ತು. ಅಧ್ಯಕ್ಷರು ನಮ್ಮನ್ನು ಕಾಯುತ್ತಾರೆ ಎಂದು ಕರುಮ್ಗೆ ಹೇಳಿದೆ. ಆದರೆ ಗೆಳೆಯ ಕರುಮ್ ನನ್ನೊಂದಿಗೆ ಸಂದರ್ಶನದಲ್ಲಿ ಭಾಗವಹಿಸಲು ನಿರಾಕರಿಸಿದರು. ಒಬ್ಬರೇ ಹೋಗಿ, ನಾನು ಅವರನ್ನು ಒಪ್ಪುವುದಿಲ್ಲ. ಅಧ್ಯಕ್ಷರನ್ನು ಭೇಟಿಯಾಗಲು ಬಯಸುವುದಿಲ್ಲ ಎಂದು ಕರುಂ ಹೇಳಿದರು. ಮುಸ್ಲಿಂ ಬ್ರದರ್ ಹುಡ್ನೊಂದಿಗಿನ ವಿರೋಧವನ್ನು ಅವರು ಪುನರುಚ್ಚರಿಸಿದರು.
ಭದ್ರತೆ ಪ್ರಕಾರ ಕಳುಹಿಸಿಕೊಟ್ಟ ಕಾರಿನಲ್ಲಿ ಅಧ್ಯಕ್ಷರ ಅರಮನೆಗೆ ತಲುಪಿದೆ. ಮೆಟಲ್ ಡಿಟಕ್ಟರ್ ಗಳು ದಾರಿಯಲ್ಲಿದ್ದವು. ನನ್ನ ಹಿಂದೆ ಇಬ್ಬರು ಇದ್ದರು. ಇವೆರಡನ್ನು ಬಿಟ್ಟರೆ ಯಾವುದೇ ತಪಾಸಣೆ ನನಗಿರಲಿಲ್ಲ. ಹಠಾತ್ತಾಗಿ ಫೈಲುಗಳನ್ನು ತುಂಬಿಸಿಕೊಂಡಿದ್ದ ಬ್ಯಾಗನ್ನು ಹಿಡಿದ ಎತ್ತರ ಗಾತ್ರದ ವ್ಯಕ್ತಿಯೊಬ್ಬರು ನನ್ನನ್ನು ತಡೆದು ನಿಲ್ಲಿಸಿದರು. ನನ್ನನ್ನು ಪರಿಚಯಿಸಿಕೊಂಡ ಅವರು ತಾನು ಜನರಲ್ ಮುರಾದ್ ಮುವಾಪಿಯ ಎಂದು ಸ್ವಯಂ ಪರಿಚಯಿಸಿಕೊಂಡರು. ಉಮರ್ ಸುಲೈಮಾನ್ರ ನಂತರ ಈಜಿಪ್ಟ್ ಇಂಟಲಿಜೆನ್ಸ್ ಮುಖ್ಯಸ್ಥನಾಗಿ ಆಯ್ಕೆಗೊಂಡ ವ್ಯಕ್ತಿ ಅವರು. ಈಜಿಷ್ಟಿಯನ್ ಶೈಲಿಯಲ್ಲಿ ಅವರು ಸ್ವಾಗತಿಸಿದರು. ಅಧ್ಯಕ್ಷರ ಭೇಟಿಗೆ ಬಂದಿದ್ದೇನೆ ಎಂದು ನಾನು ಹೇಳಿದೆ. ನನಗೆ ಗೊತ್ತಿದೆ. ನಾನು ತಮಾಷೆಯಾಗಿ ಹೇಳಿದೆ: ನಾನು ಮರಳಿ ಹೋಗುವಾಗ ಕೈರೊ ವಿಮಾನ ನಿಲ್ದಾಣದಲ್ಲಿ ನಿಮ್ಮ ತಂಡ ನನ್ನನ್ನು ತಡೆಹಿಡಿಯಬಾರದು. ನಿಮಗೆ ಯಾವ ಅಡ್ಡಿಯೂ ಇರುವುದಿಲ್ಲ ಎಂದು ಅವರು ನಗುತ್ತಾ ಹೇಳಿದರು.
ಅತ್ಯಂತ ಸರಳವಾಗಿತ್ತು ಮುರ್ಸಿಯವರ ಕಚೇರಿ. ಅವರ ಮುಂದೆ ಸೋಫಾದಲ್ಲಿ ನಾನು ಕುಳಿತೆ. ಅವರ ಕಚೇರಿ ಹೊಣೆ ಹೊತ್ತಿದ್ದ ಡಾ. ಯಾಸಿನ್ ಅಲಿಯಲ್ಲದೆ ಇನ್ನಾರೂ ಅಲ್ಲಿರಲಿಲ್ಲ. ಹೆಚ್ಚಿನ ಈಜಿಪ್ಟ್ ಜನರಂತೆ ಹೃದ್ಯ ವ್ಯಕ್ತಿಯೂ ಉತ್ತಮ ಮ ನಸ್ಸಿದ್ದವರಾಗಿದ್ದರು ಅವರು. ಒಂದು ಗಂಟೆಯವರೆಗೂ ನಮ್ಮ ಭೇಟಿ ನಡೆಯಿತು. ಮಾತುಕತೆಯ ವೇಳೆ ಈಜಿಪ್ಟ್ನ ಆರ್ಥಿಕ ಸುಧಾರಣೆ, ಉದ್ಯಮವನ್ನು ಮರಳಿ ತರುವ ಕುರಿತು ಅವರ ಕನಸನ್ನು ನನ್ನೊಡನೆ ಹಂಚಿ ಕೊಂಡರು. ಒಂದು ಟನ್ಗೆ ಐದು ಡಾಲರ್ ಕೊಟ್ಟು ಅಮೆರಿಕದಿಂದ ಪಡೆವ ಗೋಧಿಯ ಬದಲು ಈಜಿಪ್ಟ್ನ ರೈತರಿಗೆ 300 ಡಾಲರ್ ಕೊಟ್ಟ ಗೋಧಿ ಖರೀದಿಸಲಾಗುವುದು ಎಂದು ಅವರು ಹೇಳಿದರು. ತೀರ ಸೀಮಿತ ಸಮಯದಲ್ಲಿ ಅವರು ಬೇರೆ ಕೆಲವು ವಿಷಯಗಳನ್ನು ಮಾತಾಡಿದರು.
ಅಧ್ಯಕ್ಷರ ಅರಮನೆಯಿಂದ ಹೊರಬಂದ ನಂತರ ನನ್ನ ಮೊಬೈಲ್ ನಿರಂತರ ರಿಂಗ್ ಆಗತೊಡಗಿತು. ಅಪರಿಚಿತ ನಂಬರ್ ಆಗಿದ್ದರಿಂದ ಅದನ್ನು ಸ್ವೀಕರಿಸಲಿಲ್ಲ. ನಂತರ ಲಂಡನ್ನಿಂದ ಒಬ್ಬ ಗೆಳೆಯರು ಫೋನ್ ಮಾಡಿ ಲೆಫ್ಟಿನೆಂಟ್ ಜನರಲ್ ಅಬ್ದುಲ್ ಅಝೀಝ್ ಸೈಫುದ್ದೀನ್ ನನಗೆ ಕರೆ ಮಾಡುತ್ತಿದ್ದಾರೆ ಎಂದು ಹೇಳಿದರು. ಮಿಲಿಟರಿ ಕೌನ್ಸಿಲ್ ಸದಸ್ಯ ಮತ್ತು ಸೈನಿಕ ಉದ್ಯಮ ಮುಖ್ಯಸ್ಥರು. ಹಾಗಿದ್ದರೆ ಆ ಅಪರಿಚಿತ ನಂಬರ್ ಅವರದ್ದೇ ಇರಬೇಕು. ಅಧಿಕಾರಿಗಳ ಕ್ಲಬ್ಗೆ ಗೆಳೆಯರೊಡನೆ ಡಿನ್ನರ್ಗೆ ಅವರು ಕರೆಯುತ್ತಿದ್ದರು. ಜನರಲ್ ಅಬ್ದುಲ್ ಫತ್ತಾಹ್ ಅಲ್ ಸಿಸಿ ಅಲ್ಲಿರುತ್ತಾರೆ ಎಂದು ನಾನು ನಿರೀಕ್ಷಿಸಿದೆ. ಅನ್ನಹ್ದ ಅಣೆಕಟ್ಟು ವಿವಾದ ಚರ್ಚಿಸಲು ಅಧ್ಯಕ್ಷರು ಕರೆದ ತುರ್ತು ಸಭೆಗೆ ಅವರು ಹೋಗಿದ್ದಾರೆ ಎಂದು ನಂತರ ತಿಳಿಯಿತು. ಮರುದಿವಸ ನಾನು ಲಂಡನ್ಗೆ ಮರಳಿದೆ. ನನ್ನ ವಿದ್ಯಾರ್ಥಿ ಜೀವನದ ಸುವರ್ಣ ಕಾಲವನ್ನು ವ್ಯಯಿಸಿದ್ದ ಈಜಿಪ್ಟ್ನ ರಾಜಧಾನಿ ಕೈರೊಗೆ ನಾನು ಮತ್ತೆಂದೂ ಹೋಗಲಿಲ್ಲ.
ಅತ್ಯಂತ ಉತ್ತಮ ಆತಿಥ್ಯ ಮತ್ತು ಸೌಹಾರ್ದವನ್ನು ಜನರಲ್ ಸೈಫುದ್ದೀನ್ ಮತ್ತು ಸಂಗಡಿಗರು ತೋರಿಸಿದರು. ಮಾಜಿ ವಾರ್ತಾ ಪ್ರಸಾರ ಸಚಿವ ಡಾ. ಹುಸೈನ್ ಐಕಲ್ ಹೊರತು ಅಲ್ಲಿದ್ದ ಇತರರೆಲ್ಲರೂ ಸೈನಿಕರು. ಅಧ್ಯಕ್ಷ ಮುರ್ಸಿಯವರನ್ನು ಅ ಧಿಕಾರದಿಂದ ಕೆಳಗಿಳಿಸುವ ಯೋಜನೆ ಇದೆ. ಅದಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ಅಲ್ಲಿನ ಮಾತುಕತೆಯಿಂದ ನನಗೆ ಮನವರಿಕೆಯಾಗಿದ್ದು ಇನ್ನೊಂದು ಕತೆಯಾಗಿತ್ತು.
ನಾನು ಯಾವತ್ತೂ ಮುಸ್ಲಿಂ ಬ್ರದರ್ ಹುಡ್ ಸದಸ್ಯನಾಗಿರಲಿಲ್ಲ. ಆದರೆ ಮುರ್ಸಿ ಮತ್ತು ಅವರ ಅಪಾರ ಅನುಯಾಯಿಗಳು ಬಂಧನಕ್ಕೊಳಗಾಗಿ, ಜೈಲು ಉಡುಪು ಧರಿಸಲ್ಪಟ್ಟು ಕ್ರೂರ ದೌರ್ಜನ್ಯ, ಅನ್ಯಾಯಕ್ಕೆ ತುತ್ತಾಗಿದ್ದಾರೆ ಎಂದು ಈಗ ನನ್ನ ವಿಶ್ವಾಸವಾಗಿದೆ. ಇದೇವೇಳೆ, ಈಜಿಪ್ಟ್ನ ಸಂಪತ್ತು ಕೊಳ್ಳೆ ಹೊಡೆದು ಕ್ರೂರ ಕೃತ್ಯಗಳನ್ನು ಎಸಗಿ, ಜನರನ್ನು ದಮನಿಸಿದವರು ಸ್ವತಂತ್ರವಾಗಿ ಓಡಾಡುತ್ತಿದ್ದಾರೆ. ಮುರ್ಸಿಯವರ ಹಲವು ನೀತಿಗಳು ನನಗೆ ಸಮ್ಮತವೂ ಅಲ್ಲ.
…












