ಎಐ ಚಿತ್ರವೋ ನಿಜ ಚಿತ್ರವೋ ಎಂಬುದನ್ನು ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಸುಲಭ ಉಪಾಯ

0
434

✍️ ಇಷಲ್ ತಮನ್ನಾ

ಮೊನ್ನೆ ಮೊನ್ನೆ ಚಿತ್ರ ವೊಂದು ಹರಿದಾಡಿತ್ತು. ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಸಿರಾಜ್ ನಮಾಜ್ ಮಾಡ್ತಾ ಇರುವ ಚಿತ್ರ. ಅವರ ಪಕ್ಕ ಶುಭಮನ್ ಗಿಲ್ ವಿರಾಟ್ ಕೊಹ್ಲಿ ರೋಹಿತ್ ಶರ್ಮ ಅವರು ನಿಂತುಕೊಂಡು ಈ ನಮಾಜ್ ಅನ್ನು ವಿಡಿಯೋ ಮಾಡ್ತಾ ಇರುವ ಚಿತ್ರ. ಅಸಂಖ್ಯ ಮಂದಿ ಈ ಚಿತ್ರವನ್ನು ಹಂಚಿಕೊಂಡರು. ಸೌಹಾರ್ದದ ಸಂಕೇತ ಎಂದು ಹೇಳಿದ್ರು.

ಇನ್ನೊಂದು ಚಿತ್ರವೂ ಭಾರಿ ವೈರಲಾಯಿತು. ಕ್ರಿಕೆಟ್ ಅಂಗಣದಲ್ಲಿ ಶುಭಮನ್ ಗಿಲ್ ಅವರು ತನ್ನ ಗೆಳತಿ ಸಾರ ತೆಂಡೂಲ್ಕರ್ ಗೆ ಪ್ರಪೋಸ್ ಮಾಡುವ ಚಿತ್ರ. ಇದನ್ನು ಸಾವಿರಾರು ಮಂದಿ ಹಂಚಿಕೊಂಡರು.

ಇಂಥ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಹಂಚಿಕೆ ಆಗ್ತಾನೆ ಇರುತ್ತದೆ.

ಸಿಂಹದೊಂದಿಗೆ ಹೋರಾಡಿ ಓರ್ವ ತಾಯಿ ತನ್ನ ಮಗುವನ್ನು ಉಳಿಸುವ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು.

ಹುಲಿಯು ರಾತ್ರಿ ವೇಳೆ ಅಡ್ಡಾಡುತ್ತಾ ವ್ಯಕ್ತಿಯನ್ನು ಹೀಗೆ ಮೂಸಿ ನೋಡಿ ಮುಂದೆ ಹೋಗುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಹಂಚಿಕೆಯಾಗಿತ್ತು.

ವೆನಿಜುವಿಲಾದ ಅಧ್ಯಕ್ಷ ಮಡುರೋ ಅವರು ತನ್ನ ರಕ್ಷಣೆಗೆ ನಿಂತ ನಾಲ್ಕು ಮಂದಿ ಅಧಿಕಾರಿಗಳನ್ನು ಹೊಡೆದು ಉರುಳಿಸಿ ಹೆಲಿಕಾಪ್ಟರ್ ಮೂಲಕ ಮತ್ತೆ ವೆನೆಜುವೆಲಕ್ಕೆ ಹೊರಟು ಹೋಗುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

ಎಲ್ಲಿಯವರೆಗೆ ಎಂದರೇ ಅಸಂಖ್ಯ ಮಂದಿ ಈ ವಿಡಿಯೋವನ್ನು ನಿಜ ಎಂದೆ ನಂಬಿರುತ್ತಾರೆ.

ಆದರೆ ನೀವು ಸೂಕ್ಷ್ಮವಾಗಿ ನೋಡಿದ್ರೆ ಇಂಥ ವಿಡಿಯೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದು. ಇವೆಲ್ಲಾ ಎಐ ಆಧಾರಿತ ವಿಡಿಯೋಗಳು ಮತ್ತು ಚಿತ್ರಗಳು.

ಇದರಲ್ಲಿ ವ್ಯಕ್ತಿಗಳ ಚಿತ್ರವಾದರೆ ದೇಹದ ಭಾಗಗಳನ್ನು ನೀವು ಗಮನಿಸಬೇಕು. ಎಕ್ಸ್ಟ್ರಾ ಬೆರಳುಗಳು ಇರುತ್ತವೆ. ಇಲ್ಲವೇ ಒಂದು ಬೆರಳು ಇರುವುದಿಲ್ಲ.. ಇಂತಹ ತಪ್ಪುಗಳು ಏ ಐ ಚಿತ್ರದಲ್ಲಿ ಸಾಮಾನ್ಯವಾಗಿರುತ್ತದೆ.. ಅಲ್ಲದೆ ಚಿತ್ರದ ಹಿನ್ನೆಲೆಯಲ್ಲಿ ವಿಚಿತ್ರಾಕಾರದ ಕಟ್ಟಡಗಳು ಇರುತ್ತವೆ . ತಪ್ಪು ತಪ್ಪಾಗಿ ವಿನ್ಯಾಸಗೊಂಡ ವಾಹನಗಳು ಇರುತ್ತವೆ. ಜಾಹೀರಾತು ಫಲಕಗಳು ಅಥವಾ ಇನ್ನಾವುದೇ ಬರಹಗಳಲ್ಲಿ ತಪ್ಪು ತಪ್ಪಾಗಿ ಓದಲು ಅಸಾಧ್ಯ ವಾಗುವಂತೆ ಬರೆಯಲಾಗಿರುತ್ತದೆ. ಈ ಮೂಲಕ ಇದು ನಿಜವೋ ಅಥವಾ ಎಐ ಚಿತ್ರವೋ ಎಂಬುದನ್ನು ಪತ್ತೆ ಹಚ್ಚಬಹುದು.

ಇಂತಹ ಬಹುತೇಕ ಚಿತ್ರಗಳಲ್ಲಿ ವ್ಯಕ್ತಿಗಳು ಪುನರಾವರ್ತನೆಗೊಂಡಿರುತ್ತಾರೆ . ಒಂದೇ ತರ ಕಾಣುವ ವ್ಯಕ್ತಿಗಳನ್ನು ಏ ಐ ಚಿತ್ರಗಳಲ್ಲಿ ಕಾಣಬಹುದು. ಮತ್ತೊಂದು ಮುಖ್ಯವಾದ ಅಂಶ ಏನೆಂದರೆ, ಎಐ ಚಿತ್ರಗಳಲ್ಲಿ ಸಂಸ್ಥೆಯ ಚಿಹ್ನೆ ಅಥವಾ ಹೆಸರು ನಮೂದಾಗಿರುತ್ತದೆ.

ಒಂದು ವೇಳೆ ಮತ್ತೂ ನಿಮಗೆ ಅನುಮಾನ ಇದ್ರೆ
decoy. ai/ai-image-detector ಜಾಲತಾಣಕ್ಕೆ ಭೇಟಿ ನೀಡಬಹುದು.

ಯಾವುದೇ ಚಿತ್ರ ಎಐ ಸೃಷ್ಟಿಯು ಅಲ್ಲವೋ ಎಂಬುದನ್ನು ಈ ಜಾಲತಾಣ ಹೇಳುತ್ತೆ.

ಆದ್ದರಿಂದ ಯಾವುದೇ ಚಿತ್ರ ಅಥವಾ ವಿಡಿಯೋ ವನ್ನು ನೀವು ನೋಡಿದ್ರೆ ತಕ್ಷಣಕ್ಕೆ ಒಪ್ಪಿಕೊಳ್ಳಬೇಕಿಲ್ಲ. ಈ ಎಲ್ಲಾ ಸೂಕ್ಷ್ಮತೆಗಳನ್ನು ಪಾಲಿಸಿದರೆ ತಕ್ಷಣಕ್ಕೆ ನಿಮಗೆ ಅದರ ಅಸಲಿಯತ್ತನ್ನು ತಿಳಿದುಕೊಳ್ಳಬಹುದು.