ಸನ್ಮಾರ್ಗ ವಾರ್ತೆ
ಈ ವರ್ಷದ ಹಜ್ ವಿಸಾಗಳನ್ನು ಫೆಬ್ರವರಿ ಎಂಟರಿಂದ ನೀಡಲು ಪ್ರಾರಂಭಿಸುವುದಾಗಿ ಸೌದಿ ಅರೇಬಿಯಾ ತಿಳಿಸಿದೆ. ಹೀಗೆ ಹಜ್ ಕರ್ಮಗಳಿಗಿಂತ ನಾಲ್ಕು ತಿಂಗಳ ಮೊದಲೇ ವೀಸಾ ಪ್ರಕ್ರಿಯೆ ಆರಂಭಿಸಲಾಗಿದೆ. ಸದ್ಯ ಲಭಿಸಿರುವ ಮಾಹಿತಿಯ ಪ್ರಕಾರ 7,50,000 ಯಾತ್ರಿಕರು ಹಜ್ ಗಾಗಿ ರಿಜಿಸ್ಟ್ರೇಷನ್ ಮಾಡಿದ್ದಾರೆ.
ಅಲ್ಲದೆ 30,000 ಯಾತ್ರಿಕರು ತಮ್ಮ ರಾಷ್ಟ್ರದಿಂದ ನೇರವಾಗಿ ಪ್ಯಾಕೇಜುಗಳ ಬುಕ್ ಮಾಡಿದ್ದಾರೆ. ವಿದೇಶಿ ಯಾತ್ರಿಕರಿಗಾಗಿ ಮಕ್ಕಾದಲ್ಲಿ 485 ಕ್ಯಾಂಪುಗಳಿಗೆ ಅನುಮತಿ ನೀಡಲಾಗಿದೆ.
ಹಜ್ ಸಮಯದಲ್ಲಿ ಯಾವುದೇ ಸವಾಲು ಎದುರಾಗದಂತೆ ಇರುವುದಕ್ಕೆ ಮತ್ತು ಜಾಗತಿಕವಾಗಿ ಯಾತ್ರಿಕರು ಮಕ್ಕಾಕ್ಕೆ ಬರುವಾಗ ಅವರಿಗೆ ಯಾವುದೇ ತಾರತಮ್ಯ ಮತ್ತು ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವುದಕ್ಕಾಗಿ ನಾಲ್ಕು ತಿಂಗಳ ಅವಧಿ ಇರುವಾಗಲೇ ಸರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿರುವುದಾಗಿ ಸೌದಿ ಅರೇಬಿಯಾ ತಿಳಿಸಿದೆ.












