ಸುಳ್ಳು ದೂರು ನೀಡಿದ ಬಿಜೆಪಿ ಮುಖಂಡ: ಪ್ರಾಂಶುಪಾಲ ಜಾನ್ ಮಹಮ್ಮದ್ ಸಸ್ಪೆಂಡ್ ತೆರವು

0
389

ಸನ್ಮಾರ್ಗ ವಾರ್ತೆ

ವಿದ್ಯಾರ್ಥಿಗಳಲ್ಲಿ ನಮಾಝ್‌ ಮಾಡಿಸಿದ್ದಾರೆಂದು ಆರೋಪಿಸಿ ಸಸ್ಪೆಂಡ್ ಮಾಡಲಾಗಿದ್ದ ಉತ್ತರ ಪ್ರದೇಶದ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಜಾನ್ ಮುಹಮ್ಮದ್ ಅವರ ಅಮಾನತ್ತನ್ನು ರದ್ದುಗೊಳಿಸಲಾಗಿದೆ. ಇವರ ಮೇಲೆ ಹೊರಿಸಲಾದ ಆರೋಪಗಳು ಸುಳ್ಳು ಎಂಬುದು ತನಿಖೆಯಿಂದ ಗೊತ್ತಾದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಬಿಜೆಪಿ ಬ್ಲಾಕ್ ಅಧ್ಯಕ್ಷ ದುರ್ಗೇಶ್ ಚೌಹಾನ್ ಅವರ ದೂರಿನಂತೆ ಜನವರಿ 30ರಂದು ಜಾನ್ ಮುಹಮ್ಮದ್ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು. ಮಕ್ಕಳಲ್ಲಿ ನಮಾಜ್ ಮಾಡಿಸ್ತಾರೆ ಮತ್ತು ರಾಷ್ಟ್ರೀಯ ಗೀತೆಯನ್ನು ಹಾಡಲಾಗುತ್ತಿಲ್ಲ ಎಂದು ಪೋಷಕರು ನನ್ನಲ್ಲಿ ದೂರಿಕೊಂಡಿದ್ದಾರೆ ಎಂದು ಹೇಳಿ ಅವರು ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದರು.

ಈ ದೂರಿನಂತೆ ಜಾನ್ ಮುಹಮ್ಮದ್ ಅವರನ್ನು ಸಸ್ಪೆಂಡ್ ಮಾಡಿದ್ದಲ್ಲದೆ ತನಿಖೆಗೆ ಸಮಿತಿಯನ್ನು ರಚಿಸಲಾಗಿತ್ತು.

ಆದರೆ ಈ ದೂರುಗಳು ಸುಳ್ಳು ಎಂಬುದನ್ನು ನಾವು ತನಿಖೆ ವೇಳೆ ಕಂಡುಕೊಂಡಿದ್ದೇವೆ ಎಂದು ತನಿಖಾ ಸಮಿತಿಯ ಮುಖ್ಯಸ್ಥರಾಗಿದ್ದ ರತನ್ ಕೀರ್ತಿ ಹೇಳಿದ್ದಾರೆ. ಆದ್ದರಿಂದ ನಾವು ಅವರ ಅಮಾನತನ್ನು ಹಿಂತೆಗೆದುಕೊಂಡಿದ್ದೇವೆ. ತನಿಖೆಯ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ಮತ್ತು ಶಿಕ್ಷಣಾಧಿಕಾರಿಗೆ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.