ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಮಮತಾ ಹಿಡಿತ ತಪ್ಪುವ ಸಾಧ್ಯತೆ

0
191

ಸನ್ಮಾರ್ಗ ವಾರ್ತೆ

ಒಂದು ಕಡೆ ಮಮತಾ ಬ್ಯಾನರ್ಜಿ ಬಿಜೆಪಿಯ ವಿರುದ್ಧ ಹೋರಾಡುತ್ತಿರುವಾಗ ಇನ್ನೊಂದು ಕಡೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವುದಕ್ಕಾಗಿ ಸಿಪಿಐಎಂ, ಹುಮಾಯುನ್ ಕಬೀರ್ ಅವರ ಪಕ್ಷ ಮತ್ತು ಇಂಡಿಯನ್ ಸೆಕ್ಯುಲರ್ ಫ್ರಂಟ್ ಮುಂತಾದ ಪಕ್ಷಗಳು ಮುಸ್ಲಿಮರ ಮತದ ಮೇಲೆ ಕಣ್ಣಿಟ್ಟು ಒಟ್ಟಾಗಿ ಕೆಲಸ ಮಾಡಲು ಮಾತುಕತೆ ನಡೆಸುತ್ತಿವೆ.

ಹೊಸ ಬಾಬರಿ ಮಸೀದಿಯನ್ನು ಕಟ್ಟುವುದಾಗಿ ಹೇಳಿ ಶಿಲನ್ಯಾಸ ಮಾಡಿದ ಹಿನ್ನೆಲೆಯಲ್ಲಿ ಟಿಎಂಸಿಯಿಂದ ಇತ್ತೀಚಿಗೆ ಉಚ್ಚಾಟನೆಗೊಂಡಿದ್ದ ಹುಮಾಯುನ್ ಕಬೀರ್ ಅವರ ಜನತ ಉನ್ಯಾನ್ ಪಾರ್ಟಿ ಮತ್ತು ಸಿಪಿಐಎಂ ಮುಂದಿನ ಚುನಾವಣೆಯಲ್ಲಿ ಜೊತೆಯಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವುದಕ್ಕೆ ಹುಮಾಯುನ್ ಕಬೀರ್ ಅವರ ಪಕ್ಷ ಮತ್ತು ನೌಶಾದ್ ಸಿದ್ದಿ ಕಿ ಅವರ ಇಂಡಿಯನ್ ಸೆಕ್ಯುಲರ್ ಫ್ರಂಟ್ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ಹುಮಾಯುನ್ ಕಬೀರ್ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಕಮ್ಯುನಿಸ್ಟ್ ಪಕ್ಷಗಳ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಹೇಳಲಾಗಿದೆ. ಇದೇ ವೇಳೆ ಓವೈಸಿ ಅವರ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೂ ಹುಮಾಯುನ್ ಕಬೀರ್ ನಿರ್ಧರಿಸಿದ್ದಾರೆ.

ಮುಖ್ಯವಾಗಿ 66 ಶೇಕಡ ಮುಸ್ಲಿಮರಿರುವ ಮುರ್ಶಿದಾ ಬಾದ್ ಐವತ್ತೊಂದು ಶೇಕಡ ಮುಸ್ಲಿಮರಿರುವ ಮಾಲ್ಡ ಮತ್ತು 49% ಮುಸ್ಲಿಮರಿರುವ ಉತ್ತರ ದಿನಾಜಪುರದಲ್ಲಿ ಮುಸ್ಲಿಂ ಮತಗಳು ವಿಭಜನೆಯಾಗುವುದಕ್ಕೆ ಇದರಿಂದ ಸಾಧ್ಯತೆ ಹೆಚ್ಚಿದೆ. ದಕ್ಷಿಣ 24 ಪರಗಣ ವಲಯದಲ್ಲಿ 35 ಶೇಕಡ ಮುಸ್ಲಿಮರಿದ್ದು ಬಿರ್ಬುನ್‌ನಲ್ಲಿ 37% ಮುಸ್ಲಿಮರಿದ್ದಾರೆ.

ಬಂಗಾಳದ 294 ಸೀಟುಗಳ ಪೈಕಿ 120 ಸೀಟುಗಳಲ್ಲಿ ಮುಸ್ಲಿಮರು ಪ್ರಭಾವಿಯಾಗಿದ್ದಾರೆ ಎಂದು ವರದಿಯಾಗಿದೆ.