✍️ ಜಾಸಿಮುಲ್ ಮುತವ್ವ
ಹಲವು ಮಧ್ಯ ವಯಸ್ಕರು ನನ್ನ ಬಳಿಗೆ ಬಂದು ತಮ್ಮ ನೋವು ಕಳವಳವನ್ನು ಹಂಚಿಕೊಳ್ಳುವುದಿದೆ. ನಲವತ್ತು ವಯಸ್ಸು ಮೀರಿದ ಕೂಡಲೇ ದೈಹಿಕವಾಗಿ, ಮಾನಸಿಕವಾಗಿ ಉಂಟಾಗುವ ಬದಲಾವಣೆಗಳಿಂದ ವಿಚಾರ ಮತ್ತು ಭಾವನೆಗಳಲ್ಲಿ ಉದ್ಭವಿಸುವ ಬದಲಾವಣೆಗಳಿಂದ ಕಳವಳಗೊಂಡು ನನ್ನನ್ನು ಭೇಟಿ ಮಾಡಲು ಬಂದ ಮಧ್ಯ ವಯಸ್ಕರಿಗೆ ನಾನು ಈ ರೀತಿ ಸಲಹೆ ನೀಡುತ್ತಿದ್ದೆ. ಹೆಚ್ಚಿನವರು ಬದುಕಿನಲ್ಲಿ ಈ ಹಂತವನ್ನು ದಾಟಿಯೇ ಮುಂದುವರಿಯುತ್ತಾರೆ. ಮಾನಸಿಕ ತಜ್ಞರು ಈ ಹಂತವನ್ನು “ಮಧ್ಯವಯಸ್ಕರ ಸವಾಲುಗಳು” ಎಂದು ಹೇಳುವರು. ಆದರೆ ಪವಿತ್ರ ಕುರ್ಆನ್ ಈ ಹಂತವನ್ನು “ಕೃತಜ್ಞತೆಯ ಪರ್ವ ಕಾಲ” ಎಂದು ಬಣ್ಣಿಸಿದೆ.
ತನ್ನಲ್ಲಿ ಉಂಟಾದ ಬದಲಾವಣೆಯ ಕುರಿತು ವ್ಯಥೆ ಮತ್ತು ದೂರುಗಳೊಂದಿಗೆ ಓರ್ವರು ನನ್ನಲ್ಲಿಗೆ ಬಂದರು. ನಾನು ಅವರೊಂದಿಗೆ “ನಿಮಗೆ ನಿಮ್ಮ ಬದುಕಿನ ಬಗ್ಗೆ ಜಿಗುಪ್ಸೆ ಹುಟ್ಟಿದೆ. ಪತ್ನಿ ಮಕ್ಕಳು, ಉದ್ಯೋಗ ಇವೆಲ್ಲದರ ಬಗ್ಗೆ ನಿಮಗೆ ಈಗ ಜಿಗುಪ್ಸೆ ಹುಟ್ಟಿದೆ. ಯಾವುದೇ ಉತ್ಸಾಹವಿಲ್ಲ. ನಿಮ್ಮ ಬಗ್ಗೆಯೇ ಜಿಗುಪ್ಸೆಯಾಗಿದೆ. ದೇಹವೇ ನಿಮಗೆ ಭಾರವಾದಂತೆ ಗೋಚರಿಸುತ್ತಿದೆ ಎನ್ನುತ್ತಾ… ನಾನು ಹೇಳಿದ್ದು ಸರಿಯಲ್ಲವೇ ಎಂದು ಅವರಲ್ಲಿ ಕೇಳಿದೆ. ಅದಕ್ಕೆ ಅವರು ಹೌದು. ಅದು ನಿಮಗೆ ಹೇಗೆ ತಿಳಿಯಿತು?” ಎಂದು ಕೇಳಿದರು.
ನಾನು “ಇಲ್ಲ ಮುಗಿದಿಲ್ಲ. ನಾನು ನನ್ನ ಮಾತನ್ನು ಹೇಳಿ ಮುಗಿಸಲೇ? ನಾನು ಈಗ ವೃದ್ಧನಾಗುತ್ತಿದ್ದೇನೆ ಎಂದು ಮನಸ್ಸು ಹೇಳುತ್ತಿದೆ. ಕ್ರಮೇಣ ಅದು ನಿಮಗೆ ಹೆಚ್ಚಾಗಿ ಗೋಚರವಾಗುತ್ತಿದೆ.”
ಅದಕ್ಕೆ ಅವರು “ಸರಿ. ಕಳೆದ ಕೆಲವು ವರ್ಷಗಳಿಂದ ನನಗೆ ಇಂತಹ ಚಿಂತನೆಗಳು ಹೆಚ್ಚಾಗುತ್ತಿವೆ. ನನಗೀಗ ನಲುವತ್ತೆರಡು ವರ್ಷವಷ್ಟೆ ಆಗಿದೆ. ಆಶ್ಚರ್ಯ ಎನ್ನುವಂತೆ ನನ್ನ ಪತ್ನಿಗೂ ಈ ಭಾವನೆ ಇತ್ತೀಚೆಗೆ ಮೂಡತೊಡಗಿದೆ. ಆಕೆಗೆ ಈಗ ಮೂವತ್ತೆಂಟು ವರ್ಷಗಳು. ಆಕೆ ಈಗ ಹಿಂದಿನAತಲ್ಲ. ಆಕೆಯಲ್ಲಿಯೂ ಬದಲಾವಣೆ ಕಾಣತೊಡಗಿದೆ. ಹೆಚ್ಚಿನ ಬೆಲೆಕೊಟ್ಟು ಹಲವಾರು ವಸ್ತುಗಳನ್ನು ಖರೀದಿಸುತ್ತಿದ್ದಾಳೆ. ಎಂದರು.
ಅದಕ್ಕೆ ನಾನು “ನೀವು ಹೇಳುತ್ತಿರುವುದು ಸರಿ. ಮಹಿಳೆಯರೂ ಪುರುಷರೂ ವಯಸ್ಸಿನಲ್ಲಿ ದಾಟುವ ಹಂತವಿದು. ಸಾಮಾನ್ಯವಾಗಿ ಈ ಹಂತದಲ್ಲಿ ಎಲ್ಲರಿಗೂ ಒಂದೇ ರೀತಿಯ ಭಾವನೆ ಇರುತ್ತದೆ. ಅಗತ್ಯ, ಅನಗತ್ಯವಾದ ಸಾಕಷ್ಟು ವಸ್ತುಗಳನ್ನು ಖರೀದಿಸಿ ಶೇಖರಿಸುವ ಗುಣ ಈ ಹಂತದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ತಾನು ಈಗಲೂ ಯೌವನದಲ್ಲಿದ್ದೇನೆ ಎಂದು ತನಗೇ ತೋರಿಸುವ ತವಕ ಪಡುವ ಹಂತವಿದು. ತನ್ನ ವಯಸ್ಸಿಗೆ ತಕ್ಕುದಲ್ಲದ ವಸ್ತುಗಳನ್ನು ಖರೀದಿಸುವ ಭ್ರಮೆ. ತನ್ನ ವಯಸ್ಸಿಗೆ ಅರ್ಹವಲ್ಲದ ವಸ್ತ್ರಾಧಾರಣೆ ಮಾಡಿ ಯುವಕನಂತೆ ಗೋಚರಿಸುವ ಶ್ರಮ ವೇಷ-ಭೂಷಣಗಳಲ್ಲಿ ಬದಲಾವಣೆ ತಂದು ನನಗೀಗ ಇನ್ನು ಅಷ್ಟೇನೂ ಪ್ರಾಯವಾಗಿಲ್ಲ ಎಂದು ತನ್ನನ್ನೇ ಸಮಾಧಾನ ಪಡಿಸುವ ಶ್ರಮವಿದು.
ನಿದ್ದೆ ಬಾರದಿರುವುದು, ಖಿನ್ನತೆ, ಆಲಸ್ಯ ಮುಂತಾದ ಹಲವು ರೀತಿಯ ಚಿಂತನೆಗಳು ಬಂದು ಅನಿಯಂತ್ರಿತವಾಗಿ ಮನಸ್ಸು ಹರಡಿ ಹೋಗುವಾಗ ಹಲವಾರು ಚಿಂತನೆಗಳು ಉದಿಸುವುದು. ಆಹಾರ ಸೇವನೆಯ ಕ್ರಮದಲ್ಲೂ ಬದಲಾವಣೆ ಬರುವುದು. ಕೆಲವರಲ್ಲಿ ಈ ಹಂತವು ಗೃಹಾಂತರ ಚಿಂತನೆಗಳನ್ನು ಎಬ್ಬಿಸುತ್ತದೆ. ಹಳೆಯ ಕಾಲದ ಭಾವನೆಗಳನ್ನು ಸ್ಮರಿಸಿ, ರಮಿಸಿ ಗತ ಕಾಲದ ಬದುಕಿನ ಸ್ಮರಣೆಯಲ್ಲಿಯೇ ಹೆಚ್ಚಾಗಿ ಮುಳುಗಿಕೊಂಡಿರಲು ಈ ಪ್ರಾಯದಲ್ಲಿ ಹೆಚ್ಚಿನವರು ಬಯಸುತ್ತಾರೆ.”
ಆಗ ಅವರು ಮನಸ್ಸು ಬಿಚ್ಚಲು ಆರಂಭಿಸಿದರು: ನಿದ್ದೆ ಬಾರದಿರುವುದು ನನ್ನನ್ನು ಕಾಡುತ್ತಿರುವ ಅತೀ ದೊಡ್ಡ ಸಮಸ್ಯೆಯಾಗಿದೆ. ಆದರೆ ಅದು ನನ್ನ ಉತ್ಸಾಹ ಉಲ್ಲಾಸಗಳಿಗೆ ಧಕ್ಕೆ ತಂದಿಲ್ಲ. ಆದರೆ ಪತ್ನಿಯ ಭಾವನೆ ಇದಕ್ಕಿಂತ ಭಿನ್ನವಾಗಿದೆ. ಆಕೆಗೆ ಯಾವಾಗಲೂ ಮಲಗಿ ನಿದ್ದೆ ಮಾಡುತ್ತಿರುವ ಹವ್ಯಾಸ. ಯಾವುದರಲ್ಲೂ ಉತ್ಸಾಹವಿಲ್ಲ.”
ಆಗ ನಾನು ಅವರನ್ನು ಸಮಾಧಾನಿಸುತ್ತಾ, “ನೀವು ತಿಳಿಸುತ್ತಿರುವ ಈ ಬದಲಾವಣೆಗಳು ಹಾರ್ಮೋನುಗಳ ವ್ಯವಸ್ಥೆಯಲ್ಲಾದ ಏರುಪೇರಿ ನಿಂದ ಸಂಭವಿಸುತ್ತದೆ. ಇದರಲ್ಲಿ ಕಳವಳ ಪಡ ಬೇಕಾದ ಅಗತ್ಯವಿಲ್ಲ. ಒಂದು ವೇಳೆ ನೀವು ಉದ್ಯೋಗದಿಂದ ನಿವೃತ್ತಿ ಪಡೆದಿರಬಹುದು. ಆಗ ನನಗೇನೂ ಮಾಡಲಾಗುತ್ತಿಲ್ಲವೆಂಬ ಭಾವ ನೆಯು ನಿಮ್ಮನ್ನು ಬೇಟೆಯಾಡುತ್ತಿರಬಹುದು. ಅಥವಾ ನಿಮ್ಮ ಕುಟುಂಬ ಅತ್ಯಂತ ಆಪ್ತರಾದ ಯಾರಾದರೊಬ್ಬರ ಸಾವು ಅಥವಾ ಅಗಲಿಕೆಯು ನಿಮ್ಮನ್ನು ತೀವ್ರವಾಗಿ ಕಾಡುತ್ತಿರಬಹುದು. ಇಪ್ಪತ್ತ ರಿಂದ ನಲುವತ್ತರ ವರೆಗಿನ ನಿಮ್ಮ ಪ್ರಾಯದಲ್ಲಿ ನಿಮಗೆ ಉದ್ಯೋಗದ ನಿಬಿಡತೆಯಿಂದ ಎತ್ತ ಕಡೆಯೂ ಚಿಂತಿಸಲು ಸಮಯವಿರಲಿಲ್ಲ.
ಪತ್ನಿ ಮಕ್ಕಳು ಅವರ ಶಿಕ್ಷಣ, ಮನೆ, ಬದುಕಿನ ದೈನಂದಿನ ಪ್ರಾರಬ್ಧಗಳು, ಉದ್ಯೋಗ ಇತ್ಯಾದಿ ಹೀಗೆ ಹಲವಾರು ತಿಕ್ಕಾಟಗಳಿಂದ ನಡುವೆ ಸಮಯವಿಲ್ಲದೆ ಸಾಗುತ್ತಾ ಇದ್ದಿರಬಹುದು. ಈಗ ಮಕ್ಕಳು ಬೆಳೆದು ದೊಡ್ಡವರಾದರು. ಅವರ ಶಿಕ್ಷಣವೆಲ್ಲಾ ಒಂದರ್ಥದಲ್ಲಿ ಪೂರ್ಣಗೊಂಡವು. ಇನ್ನು ಏನೂ ಮಾಡಲಿಕ್ಕಿಲ್ಲವಲ್ಲಾ! ಎಂಬ ಒಂದು ಶೂನ್ಯತಾ ಭಾವವು ನಿಮ್ಮ ಮನಸ್ಸನ್ನು ಪ್ರವೇಶಿಸಿದೆ. ಇದು ಸಹಜವಾಗಿದೆ.”
“ಈ ಹಂತವನ್ನು ಹೇಗೆ ಎದುರಿಸಬಹುದು?” ಅವರು ಮತ್ತೆ ಕೇಳಿದರು.
“ಈ ಹಂತದಲ್ಲಿ ನೀವು ಮೂರು ಕಾರ್ಯ ಗಳನ್ನು ಮಾಡಬೇಕು. ಅಂದರೆ ಮೂರು ಹೆಜ್ಜೆಗಳನ್ನು ಇಡಬೇಕು. ಒಂದು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆ. ಎರಡನೆಯದು ನಿಮ್ಮ ಯೋಜನೆಗಳು ಮತ್ತು ಭವಿಷ್ಯದ ಕುರಿತ ಕಾರ್ಯ ಯೋಜನೆಗೆ ಸಂಬಂಧಪಟ್ಟದ್ದಾಗಿದೆ. ಮೂರನೆಯದ್ದು ನಿಮ್ಮ ವಿಶ್ವಾಸಕ್ಕೆ ಸಂಬಂಧಿಸಿ ದ್ದಾಗಿದೆ. ಪ್ರತಿದಿನ ಸರಳ ವ್ಯಾಯಾಮ ಮಾಡಬೇಕು. ಮುಂಜಾನೆ ಅಥವಾ ಸಾಯಂಕಾಲ ಅರ್ಧ ಗಂಟೆ ನಡೆಯಬೇಕು (ವಾಕಿಂಗ್). ಆಹಾರ ಕ್ರಮಬದ್ಧವಾಗಿರಬೇಕು. ಇದು ಆರೋಗ್ಯಕ್ಕೆ ಸಂಬAಧಿಸಿದ್ದಾಗಿದೆ. ಇನ್ನು ಭವಿಷ್ಯದ ಕಾರ್ಯ ಯೋಜನೆಗಳ ಬಗ್ಗೆ ಹೇಳುವುದಿದ್ದರೆ, ಇನ್ನುಳಿದ ಬದುಕಿನಲ್ಲಿ ಗಳಿಸುವ ಯಶಸ್ಸಿನ ಬಗ್ಗೆ ತಲುಪ ಬೇಕಾದ ಗುರಿಗಳ ಬಗ್ಗೆ ನಿಮ್ಮಲ್ಲಿ ಸ್ಪಷ್ಟವಾದ ಉದ್ದೇಶ ಬೇಕು. ಅದು ಬೇಕಾದರೆ ಬರೆದು ಸಿದ್ಧಪಡಿಸಿಟ್ಟುಕೊಳ್ಳಿರಿ. ಸಾಮಾಜಿಕವಾಗಿ ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಮಾಜಸೇವಾ ರಂಗದಲ್ಲಿ ಸಾಂಸ್ಕೃತಿಕ ರಂಗದಲ್ಲಿ ಕಡ್ಡಾಯವಾಗಿ ಸ್ವಲ್ಪ ಸಕ್ರಿಯರಾಗಿರಬೇಕೆಂದು ನಾನು ಹೇಳುತ್ತಿದ್ದೇನೆ. ನಿಮ್ಮ ಮರಣದ ಬಳಿಕವೂ ಪ್ರತಿಫಲ ಲಭಿಸುವ ಒಂದು ವಕ್ಫ್ ಸೊತ್ತು ಖರೀದಿಸಿಡುವ ಹಣದ ಶೇಖರಣೆಯಾಗಬಹುದು.
ಒಂದು ಸಂಸ್ಥೆಯ ಆಡಳಿತದ ಭಾಗೀದಾರಿಕೆಯಾಗಿರಬಹುದು. ಸಾಮಾಜಿಕ ಜನಸೇವೆಯ ಮತ್ತು ಸಾಂಸ್ಕೃತಿಕ ರಂಗಕ್ಕೆ ದೇಣಿಗೆ ನೀಡುವ ನಿರ್ಧಾರವಾಗಿರಬಹದು. ವಾಚನ, ಅಧ್ಯಯನ, ಗ್ರಂಥ ರಚನೆ ಸಂಶೋಧನೆಯಲ್ಲಿ ತೊಡಗಿಸಿಕೊಂಡು ಭವಿಷ್ಯದ ತಲೆಮಾರಿಗೆ ಕೊಡುಗೆಗಳನ್ನು ನೀಡುವ ಮೂಲಕವಾಗಿರಬಹುದು. ಹೀಗೆ ಹಲವಾರು ರಂಗಗಳಿವೆ. ಈ ಹಂತದಲ್ಲಿ ಹಳೆಯ ಮಿತ್ರರೊಂದಿಗೆ ಸಂಬಂಧಗಳನ್ನು ಮರು ಸ್ಥಾಪಿಸಿ ಇದ್ದ ಸಂಬಂಧಗಳನ್ನು ಸುದೃಡಗೊಳಿಸಿ ಕೊಂಡು ಹೊಸ ಮಿತ್ರರನ್ನು ಕಂಡು ಹಿಡಿಯಬೇಕು. ಏಕಾಂತದಲ್ಲಿ ಕೂತು ಬದುಕಿನ ಮೌಲ್ಯದ ಬಗ್ಗೆ ಲೆಕ್ಕಾಚಾರ ನಡೆಸಿ ಆತ್ಮಾವಲೋಕನ ನಡೆಸಬೇಕು. ಇದು ಬಹಳ ಮುಖ್ಯ. ವಿಶ್ವಾಸಕ್ಕೆ ಸಂಬಂಧಿಸಿ ಪವಿತ್ರ ಕುರ್ಆನ್ ಬಹಳ ಸ್ಪಷ್ಟವಾಗಿ ನಮಗೆ ಕಲಿಸಿ ಕೊಟ್ಟಿದೆ. ಸೂರಾ ಅಹ್ ಕಾಫ್ನ 15ನೇಯ ಸೂಕ್ತವನ್ನು ಉದ್ದೇಶಿಸಿ ನಾನು ಹೇಳುತ್ತಿದ್ದೇನೆ.
“ಅವನು ಸಂಪೂರ್ಣ ಪ್ರಾಬಲ್ಯಕ್ಕೆ ಬಂದು ನಲುವತ್ತು ವರ್ಷದವನಾದಾಗ “ನನ್ನ ಪ್ರಭೂ, ನೀನು ನನಗೂ ನನ್ನ ಮಾತಾಪಿತರಿಗೂ ಕರುಣಿಸಿರುವ ಅನುಗ್ರಹಗಳ ಬಗ್ಗೆ ಕೃತ ಜ್ಞತೆ ಸಲ್ಲಿಸುವ ಹಾಗೂ ನೀನು ಸಂತೃಪ್ತನಾಗುವ ಸತ್ಕರ್ಮಗಳನ್ನು ಮಾಡುವ ಸೌಭಾಗ್ಯವನ್ನು ನನಗೆ ನೀಡು ಮತ್ತು ನನ್ನ ಮಕ್ಕಳನ್ನೂ ಸಜ್ಜನರಾಗಿ ಮಾಡಿ ನನಗೆ ಸುಖ ನೀಡು. ನಾನು ನಿನ್ನ ಸನ್ನಿಧಿಯಲ್ಲಿ ಪಶ್ಚಾತ್ತಾಪ ಪಡುತ್ತೇನೆ ಮತ್ತು ಖಂಡಿತವಾಗಿಯೂ ನಾನು ಶರಣಾಗತ(ಮುಸ್ಲಿಮ್) ದಾಸರಲ್ಲಾಗಿರುತ್ತೇನೆ” ಎಂದನು.
ಇದು ಈ ಹಂತದ ಕೃತಜ್ಞತೆಯ ಪ್ರಕಟನೆಯಾಗಿದೆ. ಲೌಕಿಕ ದೂರದೃಷ್ಟಿಯಿರುವ ಮಾನಸಿಕ ತಜ್ಞರು ಮಧ್ಯ ವಯಸ್ಕರನ್ನು ಸವಾಲುಗಳ ಹಂತವಾಗಿ ಚಿತ್ರಿಸಿ ವಿಷಯಗಳನ್ನು ಸಂಕೀರ್ಣಗೊಳಿಸಿ ಗೊಂದಲಗಳನ್ನು ಸೃಷ್ಟಿಸಿ ಜನರನ್ನು ಆತಂಕಿತರನ್ನಾಗಿ ಮಾಡುತ್ತಾರೆ, ನಿಜವಾಗಿ ಮಧ್ಯ ವಯಸ್ಕರ ಈ ಹಂತವು ಅನುಗ್ರಹೀತವಾದುದು. ಕೃತಜ್ಞತೆಯ ಪ್ರಕಾಶ ಬೀರುವ ಹಂತವಿದು. ಇದು ಶಾಪ ಸತ್ವಪರೀಕ್ಷೆಯ ಹಂತವಲ್ಲ. ಮರಣದ ಭಯ, ರೋಗ, ವಾರ್ಧಕ್ಯ ಹೀಗೆ ಹಲವಾರು ಚಿಂತನೆಗಳು ಬೇಟೆಯಾಡುವ ಈ ಹಂತದಲ್ಲಿ ಮನಸ್ಸು ಬಯಸದ ಕೆಲವು ತಾಣಗಳಿಗೆ ನಮ್ಮನ್ನು ಕೊಂಡೊಯ್ಯುವುದು. ವರ್ತನೆಯಲ್ಲಿ ವಿವಿಧ ಭಾವನೆಗಳು, ವಿವಾಹ ವಿಚ್ಚೇದನ, ಬಹುಪತ್ನಿತ್ವ, ಹಠಮಾರಿತನ, ಹೀಗೆ ಹಲವೆಡೆಗೆ ಮನಸ್ಸು ಕೊಂಡೊಯ್ಯುತ್ತದೆ.
ಈ ಹಂತದಲ್ಲಿ ಕುರ್ಆನ್ ನಿರ್ದೇಶಿಸಿದ ನಾಲ್ಕು ಔಷಧಗಳು ಹೆಚ್ಚು ಫಲಪ್ರದವಾಗುವುದು. ಸಹನೆ, ಕೃತಜ್ಞತೆ, ಪಶ್ಚಾತ್ತಾಪ, ಪ್ರಾರ್ಥನೆ (ಸ್ವಬ್ರ್, ಶುಕ್ರ್, ತೌಬಾ, ದುಆ) ಎಂಬ ಆ ನಾಲ್ಕು ಚಿಕಿತ್ಸೆಗಳು. ಆಗ ಮಧ್ಯ ವಯಸ್ಸು ಅನುಗ್ರಹೀತವಾಗಿ ನಮಗೆ ಗೋಚರಿಸುವುದು. ಇದೆಲ್ಲ ಹೇಳಿ ಮುಗಿಸಿದಾಗ ಅವರು ಒಂದು ಹೊಸ ನಿರ್ಧಾರಕ್ಕೆ ಬಂದತೆ ಕಂಡುಬಂತು.












