ದಾಳಿ ಭೀತಿ: ಯಮನ್‍ನಿಂದ ಸೇನೆಯನ್ನು ವಾಪಸು ಕರೆಯಿಸಿಕೊಳ್ಳುವ ಚಿಂತನೆ ನಡೆಸುತ್ತಿರುವ ಸೌದಿ ಅರೇಬಿಯದ ಮಿತ್ರ ರಾಷ್ಟ್ರಗಳು

0
780

ಯುಎಇ, ಜು. 2: ಯುಎಇಯ ಮೇಲೆ ಯಮನ್ ದಾಳಿ ನಡೆಸುವ ಆತಂಕವನ್ನು ದುಬೈ ಆಡಳಿತಗಾರ ಮುಹಮ್ಮದ್ ಬಿನ್ ರಾಶಿದ್ ಮಕ್ತೂಮ್ ವ್ಯಕ್ತಪಡಿಸಿದ್ದಲ್ಲದೇ, ಅಬುಧಾಬಿ ರಾಜಕುಮಾರ ಪ್ರಿನ್ಸ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್‍ರೊಂದಿಗೆ ಮಾತಾಡಿದ್ದು ಸೇನೆಯನ್ನು ವಾಪಸು ಕರೆಸುವ ಬೇಡಿಕೆಗೆ ಒತ್ತು ನೀಡಿದ್ದಾರೆ ಎಂದು ವರದಿಯಾಗಿದೆ.

ರಾಯಅಲ್‍ ಯೌಮ್ ವರದಿ ಮಾಡಿರುವ ಪ್ರಕಾರ ಯಮನ್‍ನಿಂದ ಯುಎಇ ಹಿಂದೆ ಸರಿಯಲು ಬಯಸಿದೆ. ದುಬೈ ಆಡಳಿತಗಾರ ಮುಹಮ್ಮದ್ ಬಿನ್ ರಾಶಿದ್ ಮಕ್ತೂಂರು ಅಬುಧಾಬಿ ರಾಜಕುಮಾರನೊಂದಿಗೆ ಮಾತುಕತೆಯ ವೇಳೆ ಯಮನ್‍ನಿಂದ ಯುಎಇಯ ಸೇನೆಯನ್ನು ವಾಪಸು ಕರೆಸಲು ಒತ್ತಡ ಹಾಕಿದ್ದಾರೆ. ಯುಎಇ ಈಗಿನ ನೀತಿಯನ್ನು ಮುಂದುವರಿಸಿದರೆ ಅದರ ಏಕತೆಗೆ ಧಕ್ಕೆಯಾಗಬಹುದು ಎಂದು ಬಿನ್ ರಾಶಿದ್ ಹೇಳಿದರು. ಯುಎಇ ಕಳೆದ ಶುಕ್ರವಾರ ದಕ್ಷಿಣ ಯಮನ್‍ನ ನಗರ ಏಡನ್ ಬಂದರ್ ನಿಂದ ಇಪ್ಪತ್ತು ಟ್ಯಾಂಕನ್ನು ಹಿಂದಕ್ಕೆ ಕರೆಯಿಸಿಕೊಂಡಿದೆ ಎಂದು ಪಾರ್ಸ್‍ ಟುಡೆ ಪತ್ರಿಕೆ ವರದಿ ಮಾಡಿದೆ. ಯುಎಇ ದಕ್ಷಿಣ ಎಡನ್ ಬಂದರ್ ಮತ್ತು ಪಶ್ಚಿಮ ಯಮನ್‍ನ ಅಲ್‍ಹುದೈದ ಬಂದರಿನಿಂದ ತಮ್ಮ ಕೆಲವು ಸೈನಿಕರನ್ನು ವಾಪಸು ಕರೆಯಿಸಿಕೊಂಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.