ಬಾಂಗ್ಲಾ-ಭಾರತ ಕ್ರಿಕೆಟ್ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದ ಈ ಮಹಿಳೆ ಯಾರು ಗೊತ್ತೇ?

0
1586

ಬರ್ಮಿಂಗ್‍ಹ್ಯಾಮ್: ಮಂಗಳವಾರ ನಡೆದ ಭಾರತ- ಬಾಂಗ್ಲಾದೇಶ ಪಂದ್ಯದಲ್ಲಿ 87 ವರ್ಷದ ಹಿರಿಯ ಅಭಿಮಾನಿಯನ್ನು ಪಂದ್ಯ ಪ್ರಸಾರದ ವೇಳೆ ಟೀವಿಯಲ್ಲಿ ಮತ್ತೆ ಮತ್ತೆ ತೋರಿಸಲಾಗಿರುವುದು ಎಲ್ಲರಿಗೂ ಗೊತ್ತಿದೆ. ಇವರ ಹೆಸರು ಚಾರುಲತಾ ಪಟೇಲ್ ಎಂದಾಗಿದೆ. ಭಾರತೀಯ ತಂಡ 1987ರಲ್ಲಿ ವಿಶ್ವ ಕಪ್ ಗೆದ್ದಾಗ ತಾನು ಮೈದಾನದಲ್ಲಿ ಪಂದ್ಯ ವೀಕ್ಷಿಸಿದ್ದೆ ಎಂದಿದ್ದಾರೆ. ಅಲ್ಲದೆ ಆವತ್ತು ತಾನು ನಾನು ಖುಷಿಯಿಂದ ಡ್ಯಾನ್ಸ್ ಮಾಡಿದ್ದೆ. ಇಂದು ಭಾರತ ತಂಡ ಬಾಂಗ್ಲಾದೇಶವನ್ನು ಸೋಲಿಸಿದರೆ, ಡ್ಯಾನ್ಸ್ ಮಾಡುವುದಾಗಿ ನಾನು ನನ್ನ ಮೊಮ್ಮಗಳಲ್ಲಿ ಹೇಳಿ ಬಂದಿದ್ದೆ ಎಂದು ಹೇಳಿದ್ದಾರೆ. ತಾನು ಧಾರ್ಮಿಕ ವ್ಯಕ್ತಿಯಾಗಿದ್ದು, ನನ್ನ ಪ್ರಾರ್ಥನೆ ನಿಜವಾಗುತ್ತದೆ, ಇಂಡಿಯಾ ವಿಶ್ವಕಪ್ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇವರು ಹುಟ್ಟಿದ್ದು ತಾಂಜಾನೀಯಾದಲ್ಲಿ. ಆದರೆ ಇವರ ಪೋಷಕರು ಭಾರತದವರು. ಅವರು ದಶಕಗಳಿಂದ ಕ್ರಿಕೆಟ್ ವೀಕ್ಷಿಸುತ್ತಿದ್ದಾರಂತೆ. ನಾನು ಆಫ್ರಿಕಾದಲ್ಲಿ ಇದ್ದಾಗ ನಾನು ಪಂದ್ಯ ವೀಕ್ಷಿಸುತ್ತಿದೆ. ಬಳಿಕ 1975ರಲ್ಲಿ ನಾನು ಇಂಗ್ಲೆಂಡ್ ಗೆ ಬಂದೆ. ಕೆಲಸದಲ್ಲಿ ಇದ್ದ ಕಾರಣ ನಾನು ಟಿವಿಯಲ್ಲೇ ಪಂದ್ಯ ವೀಕ್ಷಿಸುತ್ತಿದೆ. ಕಳೆದ 20 ವರ್ಷದ ಹಿಂದೆ ನಾನು ವೃತ್ತಿಯಿಂದ ನಿವೃತ್ತಿ ಪಡೆಡಿದ್ದು, ಹಾಗಾಗಿ ಈಗ ಮೈದಾನಕ್ಕೆ ಬಂದಿರುವೆ ಎಂದಿದ್ದಾರೆ.

ವಿರಾಟ್ ಕೊಹ್ಲಿ ಅವರು ಇವರ ಆಶೀರ್ವಾದ ಪಡೆಯುತ್ತಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ 87 ವರ್ಷದ ಚಾರುಲತಾ ಅವರು ನಾನು ನೋಡಿದ ಅತ್ಯಂತ ಡೆಡಿಕೇಟ್ ಅಭಿಮಾನಿಗಳಲ್ಲಿ ಒಬ್ಬರು. ವಯಸ್ಸು ಕೇವಲ ಒಂದು ಸಂಖ್ಯೆ. ಇವರ ಆಶೀರ್ವಾದ ಪಡೆದು ಮುಂದಿನ ಪಂದ್ಯದ ಕಡೆ ಹೋಗುತ್ತಿದ್ದೇವೆ” ಎಂದು ಅವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಲ್ಲದೆ ಚಾರುಲತಾ ಅವರು ಅಭಿಮಾನಿಗಳ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಕೂಡ ಟ್ವೀಟ್ ಮಾಡಿದೆ.