ಮುಸ್ಲಿಮರ ಐದು ಶೇಕಡ ಮೀಸಲಾತಿಯನ್ನು ರದ್ದು ಪಡಿಸಿದ ಮಹಾರಾಷ್ಟ್ರದ ಫಡ್ನವಿಸ್ ಸರ್ಕಾರ

0
451

ಸನ್ಮಾರ್ಗ ವಾರ್ತೆ

ಮುಸ್ಲಿಮರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನೀಡಲಾಗಿದ್ದ ಮೀಸಲಾತಿಯನ್ನು ಮಹಾರಾಷ್ಟ್ರ ಸರ್ಕಾರ ರದ್ದುಗೊಳಿಸಿದೆ. ಈ ಮೊದಲು ಸರಕಾರಿ ಮತ್ತು ಅರೆ ಸರಕಾರಿ ಉದ್ಯೋಗಗಳಲ್ಲಿ ಹಾಗೂ ಶಿಕ್ಷಣದಲ್ಲಿ ಮುಸ್ಲಿಮರಿಗೆ ಐದು ಶೇಕಡ ಮೀಸಲಾತಿಯನ್ನು ನೀಡಲಾಗಿತ್ತು.

ಮಹಾರಾಷ್ಟ್ರದಲ್ಲಿ 11.5 ಶೇಕಡಾ ಮುಸ್ಲಿಮರಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರಕಾರ ನೇಮಿಸಿದ್ದ ಜಸ್ಟಿಸ್ ರಾಜೇಂದ್ರ ಸಾಚಾರ್ ಆಯೋಗ ಮತ್ತು ಜಸ್ಟಿಸ್ ರಂಗನಾಥ ಮಿಶ್ರ ಆಯೋಗಗಳು ಮುಸ್ಲಿಮರು ಹಿಂದುಳಿದಿರುವುದನ್ನು ಅಂಕಿ ಸಂಖ್ಯೆಗಳ ಸಮೇತ ಬಹಿರಂಗಪಡಿಸಿತ್ತು.

2009ರಲ್ಲಿ ಮಹಾರಾಷ್ಟ್ರದ ಕಾಂಗ್ರೆಸ್ ಸರಕಾರ ಡಾಕ್ಟರ್ ಮಹಮ್ಮದ್ ರೆಹಮಾನ್ ಸಮಿತಿಯನ್ನು ನೇಮಿಸಿ ಮಹಾರಾಷ್ಟ್ರದಲ್ಲಿ ಮುಸ್ಲಿಮರ ಸ್ಥಿತಿಗತಿಯ ಬಗ್ಗೆ ವರದಿ ಕೊಡುವಂತೆ ಆದೇಶಿಸಿತ್ತು. ಈ ಸಮಿತಿಯು ಮುಸ್ಲಿಮರಿಗೆ ಶಿಕ್ಷಣ ಮತ್ತು ಸರಕಾರಿ ಉದ್ಯೋಗದಲ್ಲಿ ಎಂಟು ಶೇಕಡ ಮೀಸಲಾತಿ ನೀಡುವಂತೆ ಸೂಚಿಸಿತ್ತು.

2014ರಲ್ಲಿ ಅಸೆಂಬ್ಲಿ ಚುನಾವಣೆಗಿಂತ ಮೊದಲು ಕಾಂಗ್ರೆಸ್ ಮತ್ತು ಎನ್‌ಸಿಪಿ ನೇತೃತ್ವದ ಸರಕಾರವು ವಿಶೇಷ ಆಜ್ಞೆಯೊಂದನ್ನು ಹೊರಡಿಸಿ ಮರಾಠರಿಗೆ 16 ಶೇಕಡ ಮೀಸಲಾತಿಯನ್ನು ಘೋಷಿಸಿತು. ಮಾತ್ರ ಅಲ್ಲ ಸರ್ಕಾರಿ ಶಾಲೆ ಮತ್ತು ಕಾಲೇಜುಗಳು ಹಾಗೂ ಸರಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಐದು ಶೇಕಡಾ ಮೀಸಲಾತಿಯನ್ನು ಘೋಷಿಸಿತು.

ಇದೀಗ ಈ ಮೀಸಲಾತಿಯನ್ನು ಮಹಾರಾಷ್ಟ್ರ ಸರಕಾರ ರದ್ದು ಪಡಿಸಿದೆ.