ರಮಝಾನಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

0
323

✍️ ಡಾ| ಫಾರೂಕ್ ಹಫೀಝ್

ರಮಝಾನ್ ತಿಂಗಳಿನಲ್ಲಿ ಆಹಾರ ಕ್ರಮವನ್ನು ದೈನಂದಿನ ಆಹಾರ ಕ್ರಮಕ್ಕಿಂತ ಹೆಚ್ಚು ಭಿನ್ನವಾಗಿರಿಸಬಾರದು. ಆ ತಿಂಗಳಿನಲ್ಲಿ ಆಹಾರ ಸೇವನೆಯನ್ನು ಆದಷ್ಟು ಸರಳವಾಗಿಸಬೇಕು. ನಮ್ಮ ಆಹಾರ ಕ್ರಮವು ನಮ್ಮ ದೇಹ ತೂಕವನ್ನು ಸಮತೋಲನದಲ್ಲಿರಿಸುವಂಥದ್ದಾಗಬೇಕು. ಆದರೆ ಓರ್ವ ದಢೂತಿ ದೇಹದ ವ್ಯಕ್ತಿಯ ಭಾರವನ್ನು ಇಳಿಸಲು ರಮಝಾನ್ ಸಹಾಯಕವಾಗಲೂ ಬಹುದು.

ನಾವು ಉಪವಾಸದ ವೇಳೆಯಲ್ಲಿ ನಿಧಾನವಾಗಿ ಜೀರ್ಣವಾಗುವಂತಹ ಆಹಾರವನ್ನು ಸೇವಿಸಬೇಕು. ಅಂದರೆ ನಾರು ಪದಾರ್ಥಗಳು. ನಿಧಾನವಾಗಿ ಜೀರ್ಣವಾಗುವ ಪದಾರ್ಥಗಳು 8 ಗಂಟೆಗಳ ಕಾಲ ಉದರದಲ್ಲಿ ಉಳಿದಿರುತ್ತದೆ. ಆದರೆ ಶೀಘ್ರವಾಗಿ ಜೀರ್ಣವಾಗುವ ಪದಾರ್ಥಗಳು ರಿಂದ 4 ಗಂಟೆಗಳ ಕಾಲ ಉಳಿದಿರುತ್ತದೆ.

  1. ನಿಧಾನವಾಗಿ ಜೀರ್ಣವಾಗುವ ಆಹಾರ ಎಂದರೆ ಧಾನ್ಯಗಳು ಅಥವಾ ನಾರಿನಿಂದ ಕೂಡಿದ ಪದಾರ್ಥಗಳಾಗಿವೆ. ಉದಾ: ಬಾರ್ಲಿ, ಗೋಧಿ, ಓಟ್, ರಾಗಿ, ರವೆ, ಬೀನ್ಸ್ ಇತ್ಯಾದಿಗಳು.
  2. ಶೀಘ್ರವಾಗಿ ಜೀರ್ಣವಾಗುವ ಆಹಾರಗಳು ಸಕ್ಕರೆ, ಬಿಳಿ ಹಿಟ್ಟು ಇತ್ಯಾದಿ.
  3. ನಾರಿನಿಂದ ಕೂಡಿದ ಆಹಾರಗಳು ಗೋಧಿ, ಬೀಜಗಳು, ಬೀನ್ಸ್, ಅವರೆ ಕಾಳು, ಪಾಲಕ್ ಸೊಪ್ಪು ಮೊದಲಾದ ತರಕಾರಿಗಳು, ಒಣ ಹಣ್ಣುಗಳು, ಅಂಜೂರ ಇತ್ಯಾದಿ.
    ಆಹಾರ ಸೇವಿಸುವಾಗ ಅದರಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಕರಿದ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಅವುಗಳ ಸೇವನೆಗೆ ಮಿತಿ ಇರಬೇಕು. ಯಾಕೆಂದರೆ ಅವುಗಳು ಅರ್ಜೀರ್ಣ ಎದೆಯುರಿತ ಮೊದಲಾದ ಸಮಸ್ಯೆಗಳನ್ನು ಉಂಟು ಮಾಡುತ್ತವೆ.

ವರ್ಜಿಸಬೇಕಾದದ್ದು:

  1. ಕರಿದ ಮತ್ತು ಕೊಬ್ಬಿನಂಶ ಇರುವ ಆಹಾರಗಳು.
  2. ಅತೀ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯ ಅಂಶ ಇರುವ ಆಹಾರಗಳು.
  3. ವಿಪರೀತ ಆಹಾರ ಸೇವನೆ.
  4. ಚಹಾವನ್ನು ವರ್ಜಿಸುವುದು ಉತ್ತಮ. ಏಕೆಂದರೆ ಚಹಾ ಕುಡಿಯುವು ದರಿಂದ ಮೂತ್ರ ಶಂಕೆ ಹೆಚ್ಚಾಗುತ್ತದೆ. ಇದರಿಂದಾಗಿ ಶರೀರಕ್ಕೆ ಬೇಕಾಗುವ ಉಪ್ಪಿನ ಅಂಶವು ನಷ್ಟವಾಗುತ್ತದೆ.

ಆಹಾರ ಸೇವನೆ:

  1. ಸಹರಿಯ ವೇಳೆಯಲ್ಲಿ ಶರ್ಕರ ಪಿಷ್ಟ ಇರುವಂತಹ ಆಹಾರಗಳನ್ನು ಸೇವಿಸಬೇಕು. ಅಂತಹ ಆಹಾರವು ಹೆಚ್ಚು ಹೊತ್ತು ನಿಮ್ಮನ್ನು ಹಸಿವಿನಿಂದ ತಡೆಯುತ್ತದೆ.
  2. ಖರ್ಜೂರವು ಸಕ್ಕರೆ, ನಾರು ಮುಂತಾದ ಶರ್ಕರ ಪಿಷ್ಟ ಯಥೇಚ್ಛ ಇರುವ ಆಹಾರವಾಗಿದೆ. ಆದ್ದರಿಂದ ಅದನ್ನು ಸೇವಿಸಿದರೆ ಉತ್ತಮ.
  3. ಬಾದಾಮಿಯು ಕೊಬ್ಬುರಹಿತವಾದ ಪ್ರೊಟೀನ್ ಮತ್ತು ನಾರುಯುಕ್ತ ಆಹಾರವಾಗಿದೆ.
  4. ಬಾಳೆಹಣ್ಣು ಹಲವಾರು ಪೋಷಕಾಂಶಗಳಿರುವ ಉತ್ತಮ ಹಣ್ಣು ಆಗಿದೆ.

ಪಾನಕ:

  1. ಇಫ್ತಾರಿಗೂ ಮಲಗುವುದಕ್ಕೂ ಮಧ್ಯೆ ಹೆಚ್ಚು ನೀರನ್ನೂ ಹಣ್ಣಿನ ರಸವನ್ನೂ ಕುಡಿಯಿರಿ. ಅವು ಶರೀರದ ದ್ರವಾಂಶವನ್ನು ಸಮತೋಲನದಲ್ಲಿರಿಸುತ್ತವೆ.

ಆರೋಗ್ಯ ತೊಂದರೆಗಳು:

  1. ಮಲಬದ್ಧತೆ: ಇದು ಮೂಲವ್ಯಾಧಿ, ಅಜೀರ್ಣ ಮೊದಲಾದ ಕಾಯಿಲೆಗಳಿಗೂ ಕಾರಣವಾಗುತ್ತದೆ. ಹಳತಾದ ಆಹಾರಗಳನ್ನು ಸೇವಿಸಬಾರದು. ನೀರು ಹೆಚ್ಚು ಕುಡಿಯಬೇಕು ಮತ್ತು ಹೆಚ್ಚು ನಾರು ಪದಾರ್ಥಗಳನ್ನು ಸೇವಿಸಬೇಕು.
  2. ಅಜೀರ್ಣ ಮತ್ತು ವಾಯು: ವಿಪರೀತ ಆಹಾರ ಸೇವನೆ, ಕರಿದ ಹಾಗೂ ಕೊಬ್ಬು ಇರುವ ಆಹಾರಗಳನ್ನು ಮಿತಿಮೀರಿ ಸೇವಿಸುವುದು ಮೊದಲಾದುವುಗಳಿಂದ ಈ ರೋಗಗಳು ಬರುತ್ತವೆ. ಉದಾ: ಮೊಟ್ಟೆ, ಕ್ಯಾಬೇಜು, ಮಸೂರ ಅವರೆ, ಕೋಕಾ ಕೋಲದಂತಹ ಕಾರ್ಬೊನೇಟ್ ಇರುವ ವಸ್ತುಗಳು.
    ಪರಿಹಾರ: ಅಪರಿಮಿತ ಆಹಾರ ಸೇವನೆ ಸಲ್ಲದು. ಹೆಚ್ಚು ನೀರು ಕುಡಿಯಬೇಕು. ಹಣ್ಣಿನ ರಸಗಳನ್ನು ಸೇವಿಸಬೇಕು.
  3. ಆಲಸ್ಯ: ವಿಪರೀತ ಬೆವರು, ನಿಶ್ಶಕ್ತಿ, ನಿತ್ರಾಣ, ತಲೆ ತಿರುಗುವುದು ಮೊದಲಾದುವುಗಳು ಆಲಸ್ಯತನದಿಂದ ಉಂಟಾಗುತ್ತದೆ. ಇದು ರಕ್ತದೊತ್ತಡ ಕಡಿಮೆಯಾಗಲೂ ಕಾರಣವಾಗುತ್ತದೆ. ದ್ರವ ರೂಪದ ಆಹಾರವನ್ನು ಕಡಿಮೆ ಸೇವಿಸುವುದರಿಂದ ಮತ್ತು ಉಪ್ಪಿನ ಅಂಶವನ್ನು ಹೆಚ್ಚಾಗಿ ಸೇವಿಸುವುದರಿಂದ ಇದು ಬರುತ್ತದೆ. ಇಂತಹ ತೊಂದರೆ ಇರುವವರು ವೈದ್ಯರನ್ನು ಭೇಟಿಯಾಗಬೇಕು.
  4. ತಲೆನೋವು: ಇದಕ್ಕೆ ಕಾರಣಗಳು ತಂಬಾಕು, ಕೆಫಿನ್ ಮೊದಲಾದ ವಸ್ತುಗಳ ಸೇವನೆ. ಹಲವು ಕೆಲಸಗಳನ್ನು ಒಂದೇ ದಿನದಲ್ಲಿ ಮಾಡುವುದು, ನಿದ್ರೆಯ ಕೊರತೆ, ಇವು ರಕ್ತದೊತ್ತಡದೊಂದಿಗೆ ಸೇರಿದಾಗ ತೀವ್ರ ಸ್ವರೂಪ ಪಡೆಯ ಬಹುದು ಮತ್ತು ಇಫ್ತಾರಿಗಿಂತ ಮೊದಲು ವಾಕರಿಕೆ ಪ್ರಾರಂಭವಾಗಲೂಬಹುದು.
    ಪರಿಹಾರ: ಕೆಫಿನ್, ತಂಬಾಕು ಸೇವನೆಯನ್ನು ನಿಲ್ಲಿಸಬೇಕು. ರಮಝಾನಿನಲ್ಲಿ ಕಾರ್ಯ ಕ್ರಮಗಳನ್ನು ನಿದ್ರೆಗೆ ತೊಡಕಾಗದಂತೆ ವ್ಯವಸ್ಥೆ ಗೊಳಿಸಬೇಕು.
  5. ಶರೀರದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗುವುದು: ಇದರ ಲಕ್ಷಣಗಳು ನಿಶ್ಶಕ್ತಿ, ತಲೆ ಸುತ್ತುವುದು, ನಿತ್ರಾಣ, ನಿರಾಸಕ್ತಿ, ಬೆವರುವುದು, ಶರೀರ ಕಂಪಿಸುವುದು, ತಲೆ ನೋವು, ಕೆಲಸಗಳನ್ನು ಮಾಡಲು ಸಾಧ್ಯವಾಗದಿರುವುದು, ಹೃದಯ ಬಡಿತ ಹೆಚ್ಚಾಗುವುದು ಇತ್ಯಾದಿ.
    ಪರಿಹಾರ (ಸಕ್ಕರೆ ಕಾಯಿಲೆ ಇಲ್ಲದವರಿಗೆ): ಹೆಚ್ಚು ಸಕ್ಕರೆ ಅಂಶ ಇರುವ ಆಹಾರ ಸೇವಿಸುವುದು. ಸಹ್ರೀಗಿಂತ ಮುಂಚೆ ಆಹಾರ ಸೇವಿಸುವಾಗ ಶರ್ಕರಪಿಷ್ಠ ಇರುವಂತಹ ಆಹಾರ ಸೇವಿಸುವುದು. ಆಗ ಶರೀರದಲ್ಲಿ ಹೆಚ್ಚು ಇನ್ಸುಲಿನ್ ಉತ್ಪತ್ತಿಯಾಗಿ ಸಕ್ಕರೆಯ ಪ್ರಮಾಣವನ್ನು ಸಮತೋಲನದಲ್ಲಿರಿಸುತ್ತದೆ.
  6. ಸ್ನಾಯು ಸೆಳೆತ: ಕ್ಯಾಲ್ಸಿಯಂ, ಮೆಗ್ನೇಶಿಯಂ, ಪೊಟಾಶಿಯಂ ಮೊದಲಾದವುಗಳಿಂದ ಕೂಡಿದ ಆಹಾರವನ್ನು ಸೇವಿಸದಿರುವುದರಿಂದ ಇದು ಉಂಟಾಗುತ್ತದೆ.
    ಪರಿಹಾರ: ಮೇಲೆ ತಿಳಿಸಿರುವಂತಹ ಅಂಶಗಳಿರುವ ಆಹಾರಗಳನ್ನು ಸೇವಿಸುವುದು. ಉದಾ: ತರಕಾರಿಗಳು, ಹಣ್ಣುಗಳು, ಹಾಲಿನ ಉತ್ಪನ್ನಗಳು, ಮಾಂಸ ಮತ್ತು ಖರ್ಜೂರ.
    ಸೂಚನೆ: ಅತಿಯಾದ ರಕ್ತದೊತ್ತಡ ಮತ್ತು ಕಿಡ್ನಿಯಲ್ಲಿ ಕಲ್ಲಿರುವವರು ಈ ಆಹಾರಗಳನ್ನು ಸೇವಿಸುವುದಕ್ಕೆ ವೈದ್ಯರ
    ಸಲಹೆ ಪಡೆದುಕೊಳ್ಳಬೇಕು.
  7. ಅಲ್ಸರ್, ಎದೆ ಉರಿ, ಆಂಧ್ರವಾಯು: ರಮಝಾನಿನಲ್ಲಿ ಖಾಲಿ ಹೊಟ್ಟೆಯಲ್ಲಿ ಉತ್ಪಾದನೆಯಾಗುವ ಜೀರ್ಣಾಮ್ಲವು ಈ ರೋಗಗಳನ್ನು ಹೆಚ್ಚಿಸಲು ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಉರಿಯುವ ಅನುಭವವಾಗುತ್ತದೆ. ಕೆಲವೊಮ್ಮೆ ಅದು ಕುತ್ತಿಗೆಯ ತನಕವೂ ತಲುಪುತ್ತದೆ. ಸಾಂಬಾರು ಪದಾರ್ಥಗಳು, ಕಾಫಿ, ಕೋಲಾಗಳಂತಹ ಪಾನೀಯಗಳು ಇದನ್ನು ಇನ್ನಷ್ಟು ಹೆಚ್ಚಿಸುತ್ತವೆ.
  8. ಮೂತ್ರಕೋಶದಲ್ಲಿ ಕಲ್ಲು: ದ್ರವ ಪದಾರ್ಥಗಳನ್ನು ಕಡಿಮೆ ಸೇವಿಸುವ ಜನರಲ್ಲಿ ಈ ರೋಗವು ಕಾಣಿಸಿಕೊಳ್ಳುತ್ತದೆ. ಆದ್ದ ರಿಂದ ನೀರಿನ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸಬೇಕು. ಉದಾ: ನೀರು, ಹಣ್ಣಿನ ರಸ, ಕಲ್ಲಂಗಡಿ ಹಣ್ಣು ಇತ್ಯಾದಿ.
  9. ಸಂಧಿ ನೋವು: ಕಾರಣ: ನಮಾಝಿನ ವೇಳೆ ಮೊಣ ಕಾಲಿನ ಮೇಲೆ ಹೆಚ್ಚು ಒತ್ತಡ ಹಾಕುವುದರಿಂದ ಈ ನೋವು ಕಾಣಿಸಿಕೊಳ್ಳುತ್ತದೆ. ವಾತದ ರೋಗ ಇರುವವರಿಗೆ ಇದು ಅವರ ರೋಗವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಆದ್ದರಿಂದ ಶರೀರದ ಒಂದೇ ಭಾಗದ ಮೇಲೆ ಒತ್ತಡ ಬೀಳುವ ಕೆಲಸಗಳನ್ನು ಮಾಡಬಾರದು. ಎಲ್ಲಾ ಅಂಗಾಂಗಗಳಿಗೆ ಪರಿಣಾಮಕಾರಿಯಾ ದಂತಹ ವ್ಯಾಯಾಮಗಳನ್ನು ಮಾಡುತ್ತಿರಬೇಕು.

(ಲೇಖಕರು, ದ. ಆಫ್ರಿಕಾದ ಡರ್ಬನ್‌ನಲ್ಲಿರುವ ಇಸ್ಲಾಮಿಕ್ ಮೆಡಿಕಲ್ ಅಸೋಸಿಯೇಶನ್‌ನ ಮುಖ್ಯಸ್ಥರಾಗಿದ್ದಾರೆ)