ಲಂಡನ್, ಜು. 4: ಫೆಲಸ್ತೀನ್ ವಿಮೋಚನ ಸಂಘಟನೆ ಹಮಾಸ್ ಮತ್ತು ಇಸ್ರೇಲ್ ಬಹಿಷ್ಕರಿಸಿರುವ ಆಂದೋಲನವಾದ ಬಿಡಿಎಸ್ನ್ನು ನಿಷೇಧಿಸುವಂತೆ ಬ್ರಿಟನನ್ನು ಇಸ್ರೇಲ್ ಆಗ್ರಹಿಸಿದೆ. ಇಸ್ರೇಲಿನ ಸಾರ್ವಜನಿಕ ಸುರಕ್ಷಾ ಸಚಿವ ಗಿಲಾದ್ ಎರ್ದೊನ್ ಬ್ರಿಟನ್ನ ಗೃಹ ಕಾರ್ಯದರ್ಶಿ ಸಾಜಿದ್ ಜಾವೆದ್ರನ್ನು ಭೇಟಿಯಾಗಿ ಎರಡು ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿರುವುದಾಗಿ ಚ್ಯಾನಲ್ ಸೆವೆನ್ ವರದಿ ಮಾಡಿದೆ. ಸಾಜಿದ್ ಇಸ್ರೇಲ್ ಗೆ ಬಂದಿದ್ದಾಗ ಗಿಲಾದ್ ಮತ್ತು ಪ್ರಧಾನಿ ನೆತನ್ಯಾಹುರೊಂದಿಗೆ ಚರ್ಚಿಸಿದ್ದರು. ಆಗ ಹಮಾಸ್ ಕಾನೂನು ವಿರೋಧಿ ಸಂಘಟನೆಯೆಂದು ಅವರಿಗೆ ಇಬ್ಬರು ನಾಯಕರು ತಿಳಿಸಿ ನಿಷೇಧ ಹೇರುವಂತೆ ಆಗ್ರಹಿಸಿದ್ದಾರೆ.
ಹಮಾಸ್ನ ಸಶಸ್ತ್ರ ವಿಭಾಗವಾದ ಇಝುದ್ದೀನ್ ಅಲ್ ಖಸ್ಸಾಂ ಬ್ರಿಗೇಡನ್ನು 2001ರಲ್ಲಿ ಬ್ರಿಟನ್ ನಿಷೇಧಿಸಿತ್ತು. ಎರಡು ದಿವಸಗಳ ಸಂದರ್ಶನಕ್ಕಾಗಿ ಇಸ್ರೇಲ್ ಅಧೀನದ ಜೆರುಸಲೆಂಗೆ ಸಾಜೀದ್ ಬಂದಿದ್ದಾರೆ. ಅಲ್ಲಿ ಅಲ್ ಬುರಾಕ್ ವಾಲ್ ಮತ್ತು ಮಸ್ಚಿದುಲ್ ಅಕ್ಸಾಕ್ಕೆ ಅವರು ಭೇಟಿ ನೀಡಿದ್ದಾರೆ. ಸಾಜಿದ್ ಅವರು ಅಕ್ಸಾ ಸಂದರ್ಶಿಸುವ ಮೊದಲ ಬ್ರಿಟಿಶ್ ಕ್ಯಾಬಿನೆಟ್ ಸಚಿವರು ಆಗಿದ್ದಾರೆ.












